ಹುಡುಗಿಯರು ಮತ್ತು ಮಹಿಳೆಯರು ಪರ್ಫ್ಯೂಮ್ಸ್, ನೈಲ್ ಪಾಲಿಶ್(Nail polish) ಮತ್ತು ಶಾಂಪೂವನ್ನು ಬಳಸಲು ಇಷ್ಟಪಡುತ್ತಾರೆ. ಹಾಗೆಯೇ, ಪುರುಷರು ಸ್ಪ್ರೇ ಮತ್ತು ಆಫ್ಟರ್ ಶೇವ್ ಲೋಷನ್ ಹಚ್ಚಲು ಇಷ್ಟಪಡುತ್ತಾರೆ. ನೀವು ಸಹ ಅವುಗಳನ್ನು ಇಷ್ಟಪಟ್ಟು ಬಳಸ್ತೀರಾ? ಹಾಗಿದ್ರೆ ನಿಮಗೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಈ ವಸ್ತುಗಳನ್ನು ನಿರಂತರವಾಗಿ ಬಳಸೋದರಿಂದ ಕ್ಯಾನ್ಸರ್ ಕೂಡ ಉಂಟಾಗುವ ಸಾಧ್ಯತೆ ಇದೆ ಗೊತ್ತಾ?
ನೈಲ್ ಪಾಲಿಶ್ ಮತ್ತು ಶಾಂಪೂ(Shampoo) ಬಳಸೋದರಿಂದ ಕ್ಯಾನ್ಸರ್ ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುತ್ತೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಹಾಗಿದ್ರೆ ಈ ಅಧ್ಯಯನದಲ್ಲಿ ಏನಿದೆ? ನೈಲ್ ಪಾಲಿಶ್ ನಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಅನ್ನೋದನ್ನು ತಿಳಿಯೋಣ.
ಈ ಅಧ್ಯಯನದ ಪ್ರಕಾರ, ಶಾಂಪೂ ಮತ್ತು ನೈಲ್ ಪಾಲಿಶ್ನಂತಹ ಉತ್ಪನ್ನಗಳು ಚರ್ಮದ ಒಳ ಪದರಗಳನ್ನು ಪ್ರವೇಶಿಸುವ ರಾಸಾಯನಿಕಗಳನ್ನು ಹೊಂದಿರುತ್ತವೆ ಮತ್ತು ಶ್ವಾಸಕೋಶ, ಯಕೃತ್ತು ಮತ್ತು ಮೂತ್ರಪಿಂಡಗಳಂತಹ(Kidney) ಪ್ರಮುಖ ಅಂಗಗಳನ್ನು ಹಾನಿಗೊಳಿಸುತ್ತವೆ.
ಸೌಂದರ್ಯವನ್ನು ಹೆಚ್ಚಿಸುವ ಈ ಉತ್ಪನ್ನಗಳು ನಿಮ್ಮನ್ನು ಅನಾರೋಗ್ಯಕ್ಕೆ ದೂಡಬಹುದು
ಈ ಅನಾರೋಗ್ಯಕ್ಕೆ ಕಾರಣ ಪ್ಲಾಸ್ಟಿಕ್ ಡಬ್ಬಿ, ಬಾಟಲಿ ಮತ್ತು ಪ್ಯಾಕೇಜಿಂಗ್ನಲ್ಲಿ ಬಳಸುವ ಪೈಥಾಲೇಟ್ ಎಂಬ ಕೆಮಿಕಲ್. ಈ ರಾಸಾಯನಿಕಗಳು ಮಕ್ಕಳ ಆಟಿಕೆ ಮತ್ತು ಆಹಾರ ಪ್ಯಾಕೆಟ್ ಗಳಲ್ಲಿಯೂ(Packet) ಕಂಡುಬಂದಿವೆ.
ಈ ಹಿಂದಿನ ಅಧ್ಯಯನಗಳು ಹೇಳೋ ಪ್ರಕಾರ, ಪೈಥಾಲೇಟ್ಸ್ ಕಾರಣದಿಂದಾಗಿ, ಮಧುಮೇಹದಂತಹ ಎಂಡೋಕ್ರೇನ್ ಡಿಸ್ಆರ್ಡರ್ ಅಪಾಯದ ಜೊತೆಗೆ ಫರ್ಟಿಲಿಟಿ(Fertility) ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಇದರಿಂದ ಗರ್ಭ ಧರಿಸಲು ಸಮಸ್ಯೆಯಾಗಬಹುದು. ಆದುದರಿಂದ ಎಚ್ಚರಿಕೆಯಿಂದ ಇದನ್ನು ಬಳಸೋದ ಉತ್ತಮ.
ಈ ಪೈಥಾಲೇಟ್ ರಾಸಾಯನಿಕಗಳ ಬಳಕೆಯಿಂದಾಗಿ ಮಹಿಳೆಯರಲ್ಲಿ ಮಧುಮೇಹ ಮತ್ತು ಮೆಟಬೋಲಿಕ್ ರೋಗಗಳ(Metabolic diseases) ಅಪಾಯ ಹೆಚ್ಚಾಗಬಹುದು ಎಂದು ಅಧ್ಯಯನದಲ್ಲಿ ಸಾಬೀತಾಗಿದೆ. ಹಾಗಾಗಿ ಪ್ರತಿದಿನ ಜನರು ಈ ರಾಸಾಯನಿಕದೊಂದಿಗೆ ಸಂಪರ್ಕಕ್ಕೆ ಬರುವುದು ಆತಂಕಕಾರಿಯಾಗಿದೆ. ಅವು ನಮ್ಮ ಆರೋಗ್ಯಕ್ಕೆ ಹಾನಿಕಾರಕ, ನಾವು ಅವುಗಳನ್ನು ತಪ್ಪಿಸಲು ಪ್ರಯತ್ನಿಸಬೇಕು.