ಭಾರತೀಯರು ಚಹಾ(Tea) ಇಷ್ಟಪಡುತ್ತಾರೆ, ವಿಶೇಷವಾಗಿ ಹಾಲಿನ ಚಹಾ. ಇದನ್ನು ದಿನಕ್ಕೆ ಹಲವಾರು ಬಾರಿ ಸೇವಿಸಲು ಇಷ್ಟಪಡುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಹೀಗೆ ಮನಸಾದಾಗಲೆಲ್ಲಾ ಚಹಾ ಕುಡಿಯುತ್ತಾರೆ. ಆದರೆ, ಸಂಜೆ ಚಹಾ ಸೇವಿಸೋದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತೀಯ ಜನಸಂಖ್ಯೆಯ ಸುಮಾರು 64 ಪ್ರತಿಶತದಷ್ಟು ಜನರು ಪ್ರತಿದಿನ ಚಹಾ ಕುಡಿಯಲು ಬಯಸುತ್ತಾರೆ, ಅದರಲ್ಲಿ 30 ಶೇಕಡಾಕ್ಕೂ ಹೆಚ್ಚು ಜನರು ಸಂಜೆ ಅದನ್ನು ಕುಡಿಯುತ್ತಾರೆ. ಅದರ ಬಗ್ಗೆ ಇಲ್ಲಿ ಹೆಚ್ಚು ತಿಳಿಯಿರಿ.
ವೈದ್ಯಕೀಯ ವಿಜ್ಞಾನದ ಪ್ರಕಾರ, ಉತ್ತಮ ನಿದ್ರೆ, ಸೂಕ್ತ ಪಿತ್ತಜನಕಾಂಗದ ಡಿಟಾಕ್ಸ್(Detox), ಕಡಿಮೆ ಕಾರ್ಟಿಸೋಲ್ (ಉರಿಯೂತ) ಮತ್ತು ಆರೋಗ್ಯಕರ ಜೀರ್ಣಕ್ರಿಯೆಗಾಗಿ ಮಲಗುವ 10 ಗಂಟೆಗಳ ಮೊದಲು ಕೆಫೀನ್ ತಪ್ಪಿಸೋದು ಉತ್ತಮ. ಚಹಾ ಕೆಟ್ಟದ್ದಲ್ಲದಿದ್ದರೂ, ಅದನ್ನು ಕುಡಿಯುವ ವಿಷಯಕ್ಕೆ ಬಂದಾಗ, ಅದನ್ನು ಹಾಲಿನೊಂದಿಗೆ ಕುಡಿಬೇಕಾ ಅಥವಾ ಇಲ್ಲವಾ, ಸಕ್ಕರೆಯೊಂದಿಗೆ ಸೇವಿಸಬೇಕೆ ಅಥವಾ ಬೇಡವೇ? ಅದನ್ನು ಹೆಚ್ಚು ಕುಡಿಬೇಕಾ ಅಥವಾ ಕಡಿಮೆಯಾ, ಅದನ್ನು ಕುಡಿಯಲು ಉತ್ತಮ ಸಮಯ ಯಾವುದು, ಹೀಗೆ ಸಾಕಷ್ಟು ಗೊಂದಲ ಹೊಂದಿರುತ್ತಾರೆ
ಹೆಚ್ಚಿನ ಜನರು ಆನಂದಿಸುವ ಸಾಮಾನ್ಯ ಬ್ಲಾಕ್ ಟೀ (Black tea) ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ, ಏಕೆಂದರೆ ಇದು ಕ್ಯಾಟೆಚಿನ್ಸ್, ಥೈಫ್ಲಾವಿನ್ ಮತ್ತು ಥೈರುಬಿಜಿನ್ ನಂತಹ ಪಾಲಿಫಿನಾಲ್ ಗಳನ್ನು ಹೊಂದಿರುತ್ತೆ - ಇವೆಲ್ಲವೂ ವ್ಯಕ್ತಿಯ ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತವೆ. ಆದರೆ, ಭಾರತೀಯರು ಹಾಲು ಮತ್ತು ಸಕ್ಕರೆಯನ್ನು ಸೇರಿಸುವ ಮೂಲಕ ಚಹಾ ಕುಡಿಯುತ್ತಾರೆ, ಇದು ಅದರ ಪೌಷ್ಠಿಕಾಂಶದ ಪ್ರೊಫೈಲನ್ನು ಬದಲಾಯಿಸುತ್ತೆ.
ವೈದ್ಯರ ಪ್ರಕಾರ, ಈ ಜನರು ಮಾತ್ರ ಸಂಜೆ ಚಹಾ ಕುಡಿಯಬೇಕು.
1. ನೈಟ್ ಶಿಫ್ಟ್ ಕೆಲಸ ಮಾಡುವ ಜನರು
2. ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇಲ್ಲದವರು
3. ಜೀರ್ಣಕ್ರಿಯೆ ಆರೋಗ್ಯಕರವಾಗಿರುವವರು
4. ಚಹಾಕ್ಕೆ ವ್ಯಸನಿ ಅಲ್ಲದವರು
5. ನಿದ್ರೆಯ ಸಮಸ್ಯೆ ಇಲ್ಲದವರು
6. ಪ್ರತಿದಿನ ಸಮಯಕ್ಕೆ ಸರಿಯಾಗಿ ತಿನ್ನುವವರು(Eating on Time)
7. ಅರ್ಧ ಅಥವಾ 1 ಕಪ್ ಗಿಂತ ಕಡಿಮೆ ಚಹಾ ಕುಡಿಯುವವರು
ಸಂಜೆಯ ಚಹಾವನ್ನು ಯಾರು ತಪ್ಪಿಸಬೇಕು?
1. ಕಡಿಮೆ ನಿದ್ರೆ ಹೊಂದಿರುವ ಅಥವಾ ನಿದ್ರಾಹೀನತೆಗೆ(Sleeplessness) ಗುರಿಯಾಗುವ ಜನರು
2. ಆತಂಕದಿಂದ ಬಳಲುತ್ತಿರುವವರು ಮತ್ತು ಒತ್ತಡದ ಜೀವನ ನಡೆಸುವವರು
3. ಅತಿಯಾದ ವಾತ ಸಮಸ್ಯೆಗಳನ್ನು ಹೊಂದಿರುವವರು (ಒಣ ಚರ್ಮ ಮತ್ತು ಕೂದಲು)
4. ತೂಕ ಹೆಚ್ಚಿಸಿಕೊಳ್ಳಲು ಬಯಸುವ ಜನರು
5. ಅನಿಯಮಿತ ಹಸಿವು ಹೊಂದಿರುವ ಜನರು
6. ಹಾರ್ಮೋನುಗಳ ಸಮಸ್ಯೆಯಿಂದ ಬಳಲುತ್ತಿರುವವರು
7. ಮಲಬದ್ಧತೆ / ಅಸಿಡಿಟಿ ಅಥವಾ ಗ್ಯಾಸ್ ಸಮಸ್ಯೆ ಇರುವವರು.
8. ಮೆಟಾಬಾಲಿಕ್ ಮತ್ತು ಆಟೋ ಇಮ್ಮ್ಯೂನ್ ಕಾಯಿಲೆಗಳನ್ನು ಹೊಂದಿರುವವರು.
9. ಕಡಿಮೆ ತೂಕ ಹೊಂದಿರುವವರು.
10. ಆರೋಗ್ಯಕರ ಚರ್ಮ, ಕೂದಲು ಮತ್ತು ಕರುಳನ್ನು ಬಯಸುವವರು.
ನೀವು ಚಹಾಕ್ಕೆ ಹಾಲು(Milk) ಸೇರಿಸಿದಾಗ ಏನಾಗುತ್ತೆ?
ಹಾಲನ್ನು ಸೇರಿಸೋದರಿಂದ ಚಹಾದ ಪೌಷ್ಠಿಕಾಂಶದ ಮೌಲ್ಯ ಹೇಗೆ ಬದಲಾಗುತ್ತೆ ಎಂದರೆ, ಚಹಾಕ್ಕೆ ಹಾಲನ್ನು ಸೇರಿಸಿದಾಗ, ಅದರ ಕಹಿ ಅಥವಾ ಆಸ್ಟ್ರಿಂಜಂಟ್ನೆಸ್ ಕಡಿಮೆಯಾಗುತ್ತೆ. ಇದು ಟ್ಯಾನಿನ್‌ಗಳ ಉಪಸ್ಥಿತಿಯಿಂದಾಗಿ ಉಂಟಾಗುತ್ತೆ. ಇದು ಟೇಸ್ಟ್ ಬಡ್ಸ್‌ಗೆ ರುಚಿಕರ ಮತ್ತು ಹಿತಕರವಾಗಿರುತ್ತೆ ಎಂದು ವೈದ್ಯರು ಹೇಳುತ್ತಾರೆ. ಸಕ್ಕರೆ ಟ್ಯಾನಿನ್‌ಗಳ ಆಸ್ಟ್ರಿಂಜಂಟ್ನೆಸ ಅನ್ನು ಸಹ ಪ್ರತಿರೋಧಿಸುತ್ತೆ, ಅದಕ್ಕಾಗಿಯೇ ಹಾಲು ಮತ್ತು ಸಕ್ಕರೆಯನ್ನು ಬ್ಲಾಕ್ ಟೀಯಲ್ಲಿ ಆದ್ಯತೆ ನೀಡಲಾಗುತ್ತೆ.
ಆದರೆ, ಹಾಲು ಅದರ ಉತ್ಕರ್ಷಣ ನಿರೋಧಕಗಳನ್ನು ಕಡಿಮೆ ಮಾಡುವ ಮೂಲಕ ಚಹಾದ ಜೈವಿಕ ಚಟುವಟಿಕೆಗಳನ್ನು ಮಾರ್ಪಡಿಸುತ್ತೆ, ಇದು ಉರಿಯೂತ ಮತ್ತು ಅಸಿಡಿಟಿಯ (Acidity) ಮೂಲ. ಹಾಲಿನ ಪ್ರೋಟೀನ್ ಆಗಿರುವ ಕೇಸೀನ್, ಚಹಾದಲ್ಲಿ ಫ್ಲೇವನಾಯ್ಡ್ಸ್ ಮತ್ತು ಕ್ಯಾಟೆಚಿನ್‌ಗಳೊಂದಿಗೆ ಸೇರಿದಾಗ ಆಸಿಡ್ ಸೃಷ್ಟಿಯಾಗುತ್ತೆ. ಹೆಚ್ಚಿನ ಭಾರತೀಯರು ಬೆಳಿಗ್ಗೆ ಹಾಲಿನ ಚಹಾವನ್ನು ಕುಡಿಯುವ ಅಭ್ಯಾಸ ಹೊಂದಿರೋದರಿಂದ, ಇದು ಬಾಯಿಯ ಆರೋಗ್ಯವನ್ನು ದುರ್ಬಲಗೊಳಿಸುವುದಲ್ಲದೆ ಚಯಾಪಚಯ ಚಟುವಟಿಕೆಯನ್ನು ಅಡ್ಡಿಪಡಿಸುತ್ತೆ ಮತ್ತು ಉರಿಯೂತಕ್ಕೆ ಕಾರಣವಾಗಬಹುದು.
ಚಹಾ ಕುಡಿಯುವ ಅಭ್ಯಾಸದಲ್ಲಿ ಈ ಬದಲಾವಣೆಗಳನ್ನು ಮಾಡಿ
ಆರೋಗ್ಯಕರ ಜೀವನಶೈಲಿಗಾಗಿ, ನಿಮ್ಮ ಚಹಾ ಕುಡಿಯುವ ಅಭ್ಯಾಸದಲ್ಲಿ ನೀವು ಈ ಕೆಳಗಿನ ಬದಲಾವಣೆಗಳನ್ನು ಮಾಡಬೇಕು ಎಂದು ಪೌಷ್ಠಿಕಾಂಶ ಮತ್ತು ಆಹಾರ ತಜ್ಞರು ಹೇಳುತ್ತಾರೆ:
1. ಸೀಡ್ಸ್, ಒಣದ್ರಾಕ್ಷಿ(Dry grapes) ಅಥವಾ ಯಾವುದೇ ಹಣ್ಣನ್ನು ಸೇವಿಸಿ ಮತ್ತು ನಂತರ ಹಾಲಿನ ಚಹಾ ಕುಡಿಯಿರಿ.
2. ಹಾಲು ಸೇರಿಸಿ ಹೆಚ್ಚು ಚಹಾ ಕುಡಿಯಬೇಡಿ, ಇದು ಚಹಾದಲ್ಲಿ ಕನಿಷ್ಠ ಸ್ವಲ್ಪ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ.
3. ಚಹಾವನ್ನು ಕುದಿಸಿದ ನಂತರ, ಅದಕ್ಕೆ ಒಂದು ಟೀಸ್ಪೂನ್ ಹಾಲನ್ನು ಸೇರಿಸೋದರಿಂದ ಅದರ ಪೌಷ್ಠಿಕಾಂಶ ಇನ್ನಷ್ಟು ಉತ್ತಮವಾಗಿರುತ್ತೆ.
4. ನೀವು ದಿನಕ್ಕೆ 3-4 ಕಪ್ ಟೀ ಕುಡಿಯುವ ಅಭ್ಯಾಸ ಹೊಂದಿದ್ದರೆ, ಆರಂಭದಲ್ಲಿ ನೀವು ಗ್ರೀನ್ ಟೀ(Green tea)ಅಥವಾ ವಿಭಿನ್ನ ರುಚಿ ಮತ್ತು ಎಲೆಗಳನ್ನು ಹೊಂದಿರುವ ಚಹಾದಂತಹ ವಿವಿಧ ರೀತಿಯ ಚಹಾ ಟ್ರೈ ಮಾಡಬಹುದು. ( ದಾಸವಾಳ ಚಹಾ, ರೋಸ್ ಟೀ) ಮತ್ತು ಕ್ರಮೇಣ ಅದನ್ನು ದಿನಕ್ಕೆ 1 ಕಪ್ ಗೆ ಇಳಿಸಿ.
5. ಸಂಜೆ ಚಹಾ ಕುಡಿಯೋದನ್ನು ತಪ್ಪಿಸಿ ಏಕೆಂದರೆ ಇದು ನಿದ್ರೆಗೆ ಭಂಗ ತರಬಹುದು ಮತ್ತು ಊತಕ್ಕೆ(Swelling) ಕಾರಣವಾಗಬಹುದು.
6. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯೋದರಿಂದ ಹಸಿವು ಕಡಿಮೆಯಾಗುತ್ತೆ ಮತ್ತು ಯಾವುದೇ ಪೋಷಕಾಂಶಗಳನ್ನು ಹೊಂದಿರೋದಿಲ್ಲ, ಆದ್ದರಿಂದ ಇದನ್ನು ಯಾವಾಗಲೂ ಊಟದ ನಡುವೆ ತೆಗೆದುಕೊಳ್ಳಬೇಕು.