ಚರ್ಮವನ್ನು ಸ್ವಚ್ಛಗೊಳಿಸಲು, ಮಾರುಕಟ್ಟೆಯಲ್ಲಿ ಅನೇಕ ರೀತಿಯ ಫೇಸ್ ವಾಶ್ (Face Wash) ಲಭ್ಯವಿವೆ. ಆದರೆ ನೀವು ಚರ್ಮವನ್ನು ಕೆಮಿಕಲ್ ಫ್ರೀ ಆಗಿ ಸ್ವಚ್ಛಗೊಳಿಸಲು ಬಯಸಿದರೆ, ಆ ರೀತಿಯಲ್ಲಿ ಮನೆಯಲ್ಲಿ ಫೋಮಿಂಗ್ ಫೇಸ್ ವಾಶ್ ತಯಾರಿಸಿ. ಅಲೋವೆರಾ ಜೆಲ್, ಜೇನುತುಪ್ಪ (Honey Bee) ಮತ್ತು ಅಡುಗೆ ಸೋಡಾದಿಂದ ಮಾಡಿದ ಈ ಫೇಸ್ ವಾಶ್ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತೆ. ಅದನ್ನು ಹೇಗೆ ತಯಾರಿಸುವುದು ನೋಡೋಣ…
ಅಲೋವೆರಾ ಮತ್ತು ಜೇನುತುಪ್ಪದಿಂದ ಮಾಡಿದ ಈ ಹೋಮ್ ಮೇಡ್ ಫೋಮಿಂಗ್ ಫೇಸ್ ವಾಶ್ (homemade face wash) ಚರ್ಮವನ್ನು ಹೊರಗಿನಿಂದ ಮಾತ್ರವಲ್ಲದೆ ಒಳಗಿನಿಂದ ಸಹ ಸ್ವಚ್ಛಗೊಳಿಸುತ್ತದೆ. ಅದನ್ನ ಹೇಗೆ ಮಾಡೋದು ಅನ್ನೋದನ್ನು ತಿಳಿಯಲು ಮುಂದೆ ಓದಿ…
ಬೇಕಾಗುವ ಸಾಮಾಗ್ರಿಗಳು:
• 2 ಟೀಚಮಚ ಅಲೋವೆರಾ ಜೆಲ್
• 1 ಟೇಬಲ್ ಸ್ಪೂನ್ ಜೇನುತುಪ್ಪ
• 1 ಟೀ ಸ್ಪೂನ್ ಬೇಕಿಂಗ್ ಸೋಡಾ
• 2 ಟೇಬಲ್ ಸ್ಪೂನ್ ತುರಿದ ಸೋಪು
• ಅರ್ಧ ಕಪ್ ಬಿಸಿ ಬಿಸಿ ನೀರು
ಇವಿಷ್ಟು ಇದ್ದರೆ ಸಾಕು ಮನೆಯಲ್ಲಿಯೇ ಸುಲಭವಾಗಿ ಫೇಸ್ ವಾಶ್ ತಯಾರಿಸಬಹುದು.
ಫೇಸ್ ವಾಶ್ ತಯಾರಿಸೋದು ಹೇಗೆ ಅನ್ನೋದನ್ನು ನೋಡಿ :
• ಮೊದಲಿಗೆ ಒಂದು ಬೌಲ್ ನಲ್ಲಿ 1 ಟೀಸ್ಪೂನ್ ಬೇಕಿಂಗ್ ಸೋಡಾವನ್ನು (baking soda) ತೆಗೆದುಕೊಂಡು ಅದಕ್ಕೆ 2 ಟೀಸ್ಪೂನ್ ನೀರನ್ನು ಸೇರಿಸಿ ಪಕ್ಕಕ್ಕೆ ಇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ.
• ಈಗ ಸಾಬೂನನ್ನು ಗ್ರೇಟರ್ ಸಹಾಯದಿಂದ ತುರಿದುಕೊಳ್ಳಿ.
• ಈಗ, ಒಂದು ಬೌಲ್ ನಲ್ಲಿ 2 ಟೇಬಲ್ ಸ್ಪೂನ್ ತುರಿದ ಸಾಬೂನನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಅರ್ಧ ಕಪ್ ಬಿಸಿ ಕುದಿಸಿದ ನೀರನ್ನು ಸೇರಿಸಿ. ತುರಿದ ಸಾಬೂನು ಸಂಪೂರ್ಣವಾಗಿ ಕರಗುವವರೆಗೆ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ.
• ಈ ಸೋಪಿನ ದ್ರಾವಣಕ್ಕೆ 2 ಟೇಬಲ್ ಸ್ಪೂನ್ ಅಲೋವೆರಾ ಜೆಲ್ (aloe vera gel), 1 ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು ಅಡುಗೆ ಸೋಡಾವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ.
• ಈಗ ಅದನ್ನು ಖಾಲಿ 200 ಮಿಲೀ ಬಾಟಲಿಯಲ್ಲಿ ತುಂಬಿಸಿ.
• ಈಗ ಮನೆಯಲ್ಲಿ ತಯಾರಿಸಿದ ಫೋಮಿಂಗ್ ಫೇಸ್ ವಾಶ್ (foaming face wash) ಬಳಸಲು ಸಿದ್ಧವಾಗಿದೆ.
• ಈಗ, ನಿಮ್ಮ ಮುಖವನ್ನು ನೀರಿನಿಂದ ಒದ್ದೆ ಮಾಡಿ ಮತ್ತು ಫೇಸ್ ವಾಶ್ ನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ 3 ನಿಮಿಷಗಳ ಕಾಲ ನಿಧಾನವಾಗಿ ಉಜ್ಜಿಕೊಳ್ಳಿ ಮತ್ತು ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.
• ಅಲೋವೆರಾ ಜೆಲ್ ಚರ್ಮಕ್ಕೆ ಅಗತ್ಯವಾದ ತೇವಾಂಶ ಮತ್ತು ತಂಪನ್ನು ಒದಗಿಸುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಟ್ಯಾನಿಂಗ್ (tanning) ನಿವಾರಣೆ ಮಾಡುತ್ತೆ. ಇದು ಸನ್ ಬರ್ನ್ ನಿಂದ ಪರಿಹಾರವನ್ನು ಸಹ ಒದಗಿಸುತ್ತದೆ.
• ಅದೇ ಸಮಯದಲ್ಲಿ, ಅಡುಗೆ ಸೋಡಾವು ನಿಮ್ಮ ಚರ್ಮವನ್ನು ಸ್ವಚ್ಛ ಮತ್ತು ಕಲೆ ರಹಿತವಾಗಿಸಲು ಸಹಾಯ ಮಾಡುತ್ತದೆ. ಆದುದರಿಂದ ಕೆಮಿಕಲ್ ಯುಕ್ತ ಫೇಸ್ ವಾಶ್ ಬದಲು ಮನೆಯಲ್ಲಿಯೇ ನೀವು ನ್ಯಾಚುರಲ್ ಫೋಮಿಂಗ್ ಫೇಸ್ ವಾಶ್ ಬಳಕೆ ಮಾಡಬಹುದು.