ಕೂದಲಿಗೆ ಅರಿಶಿನದಿಂದ ಲಾಭಗಳು:
- ಕೂದಲು ಬೇಗನೆ ಬೆಳ್ಳಗಾಗುತ್ತಿದ್ದರೆ ಅರಿಶಿನ ಬಳಸಿ. ಇದರಲ್ಲಿರುವ ಕರ್ಕ್ಯುಮಿನ್ ಬಿಳಿ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ.
- ತಲೆಹೊಟ್ಟು ಸಮಸ್ಯೆ ಇದ್ದರೆ ಕೂದಲಿಗೆ ಅರಿಶಿನ ಬಳಸಿ. ಅರಿಶಿನದಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ತಲೆಹೊಟ್ಟು ಸಮಸ್ಯೆಯಿಂದ ಮುಕ್ತಿ ನೀಡುತ್ತವೆ.
- ಅರಿಶಿನದಲ್ಲಿರುವ ಬಹಳಷ್ಟು ಅಂಶಗಳು ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಕೂದಲು ತುದಿಗಳು ಒಡೆಯದಂತೆ ಮಾಡುತ್ತವೆ.
- ತಲೆಯಲ್ಲಿ ತುರಿಕೆ ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಅರಿಶಿನ ಬಳಸುವುದರಿಂದ ಈ ಸಮಸ್ಯೆಯಿಂದ ಹೊರಬರಬಹುದು. ಅರಿಶಿನದಲ್ಲಿರುವ ಅಲರ್ಜಿ ನಿರೋಧಕ ಗುಣಗಳು ತಲೆಯಲ್ಲಿ ತುರಿಕೆಯನ್ನು ಕಡಿಮೆ ಮಾಡುತ್ತವೆ.