ಕೂದಲು ಉದುರುವುದ ತಡೆಯಲು ಈ ನ್ಯಾಚುರಲ್ ರೆಮಿಡಿ ಟ್ರೈ ಮಾಡಿ

First Published Aug 27, 2020, 7:00 PM IST

ಆರೋಗ್ಯಯುತ ಉದ್ದ ಕೂದಲು ಎಲ್ಲರ ಕನಸು. ಆದರೆ ಕೂದಲು ಉದುರುವುದು, ತಲೆ ಹೊಟ್ಟು ಕಾಮನ್‌ ಸಮಸ್ಯೆ. ಮಾರುಕಟ್ಟೆಯಲ್ಲಿ ವಿವಿಧ ಶ್ಯಾಂಪೂ ಹಾಗೂ ಎಣ್ಣೆಗಳು ಸಿಗುತ್ತವೆ. ದುಬಾರಿ ಜೊತೆಗೆ ಕೂದಲಿಗೆ ಹಾನಿಯಾಗುವ ಕೆಮಿಕಲ್ಸ್‌ ಸಹ ಇರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಮನೆಯಲ್ಲೇ ಮಾಡುವ ನೈಸರ್ಗಿಕ ಉಪಾಯಗಳಿವೆ. ನಿಮಗೆ  ಕೂದಲು ಉದುರುವ ಪ್ರಾಬ್ಲಮ್ ಇದ್ದರೆ, ಇಲ್ಲಿದೆ ನೋಡಿ ಟಿಪ್ಸ್‌.

ನಿಮಗೆ ಕೂದಲು ಉದುರುವ ಪ್ರಾಬ್ಲಮ್ ಇದ್ದರೆ, ಇಲ್ಲಿದೆ ನೋಡಿ ಟಿಪ್ಸ್‌. ಇವುಗಳನ್ನು ಬಳಸಿ ಸ್ಟ್ರಾಂಗ್‌ ಸುಂದರ ಕೂದಲು ನಿಮ್ಮದಾಗಿಸಿಕೊಳ್ಳಿ.
undefined
ಅಲೋವೆರಾ: ಅಲೋವೆರಾ ಒಂದು ನಿರ್ದಿಷ್ಟ ಎನ್ಜೈಮ್‌ ಹೊಂದಿದ್ದು ಅದು ಕೂದಲನ್ನು ರಕ್ಷಿಸಲು ಮತ್ತು ಪೋಷಿಸಿ,ಕೂದಲು ಉದುರುವುದನ್ನು ತಡೆಯುತ್ತದೆ ಹಾಗೂ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
undefined
ಒಂದು ಕಪ್ ಅಲೋವೆರಾಕ್ಕೆ ಮೂರನೇ ಒಂದು ಭಾಗ ಮೆಂತೆ ಪುಡಿ ಸೇರಿಸಿ ಮತ್ತು ಒಂದು ಗಂಟೆಯ ನಂತರ ಕೂದಲ ಬುಡಕ್ಕೆ ಮಿಶ್ರಣವನ್ನು ಹಚ್ಚಿ ನಂತರ ತೊಳೆಯಿರಿ.
undefined
ನೆಲ್ಲಿಕಾಯಿ: ಆಂಟಿಆಕ್ಸಿಡೆಂಟ್‌, ಖನಿಜಗಳು ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ನೆಲ್ಲಿಕಾಯಿ ಕೂದಲಿನ ಬೆಳವಣಿಗೆಗೆ ಬೆಸ್ಟ್‌. ಅದು ಕೂದಲನ್ನು ಬೇರಿನಿಂದಬಲಪಡಿಸುತ್ತದೆ. ನೆಲ್ಲಿಕಾಯಿ ರಸವನ್ನು ಸೇವಿಸುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
undefined
ನೆಲ್ಲಿಕಾಯಿ ಪುಡಿ, ಗೋರಂಟಿ ಪುಡಿ ಮತ್ತು ಬ್ರಾಹ್ಮಿ ಪುಡಿಯನ್ನು ಸಮ ಪ್ರಮಾಣಗಳಲ್ಲಿ ಸೆರೆಸಿ, ಅದಕ್ಕೆ ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.ಕೂದಲಿನ ಬುಡಕ್ಕೆ ನಿಂಬೆ ಮತ್ತು ನೆಲ್ಲಿಕಾಯಿ ರಸವನ್ನು 20 ನಿಮಿಷಗಳ ಕಾಲ ಹಚ್ಚಿ. ನಂತರ, ಈ ನೆಲ್ಲಿಕಾಯಿ ಪೇಸ್ಟ್ ಹಚ್ಚಬೇಕು ಮತ್ತು 2 ಗಂಟೆಕಾಲ ಒಣಗಲು ಬಿಡಿ. ಇದು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ.
undefined
ಬೇವು: ನಾಲ್ಕು ಕಪ್ ನೀರಿಗೆ ಒಂದು ಕಪ್ ಬೇವಿನ ಎಲೆ ಸೇರಿಸಿ ಮತ್ತು 10 ನಿಮಿಷ ಕುದಿಸಿ. ಬೇವಿನ ನೀರನ್ನು ತಣ್ಣಗಾದ ನಂತರ ಇದನ್ನು ರಾತ್ರಿ ನೆತ್ತಿಗೆ ಹಚ್ಚಿ ಬೆಳಿಗ್ಗೆ ಕೂದಲನ್ನು ತೊಳೆಯಿರಿ. ಇದು ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ.
undefined
ಮೆಂತ್ಯೆ: ಎರಡು ಚಮಚ ಮೆಂತೆ ಮತ್ತು ಹೆಸರು ಬೇಳೆ, ಮೂರು ಚಮಚ ಸೀಗೆ ಪುಡಿ, ನಿಂಬೆ ರಸ ಮತ್ತು 15 ಕರಿಬೇವಿನ ಎಲೆಗಳನ್ನು ಸೇರಿಸಿ. ಪೇಸ್ಟ್ ತಯಾರಿಸಿ ಕೊಳ್ಳಿ. ಸ್ನಾನ ಮಾಡುವಾಗ ಪೇಸ್ಟ್ ಅನ್ನು ಶಾಂಪೂನಂತೆ ಅಪ್ಲೈ ಮಾಡಿ.
undefined
ಆಲದ ಮರದ ಬೇರು: ಆಲದ ಮರದ ಬೇರಿಗೆ ನಿಂಬೆ ರಸವನ್ನು ಸೇರಿಸಿ.ಕೂದಲಿನ ಬುಡಕ್ಕೆ ಪೇಸ್ಟ್ ಅನ್ನು ಆಪ್ಲೈ ಮಾಡಿದರೆ, ಕೂದಲು ಉದುರುವುದನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
undefined
ಎಳ್ಳು: ಎಳ್ಳಿನಲ್ಲಿ ಮೆಗ್ನೀಷಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ, ಇದು ಉದುರಿದ ಕೂದಲನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ನಿತ್ಯದ ಆಹಾರದಲ್ಲಿ ಎಳ್ಳನ್ನು ಸೇರಿಸುವುದು ಸಹ ಅಷ್ಟೇ ಪ್ರಯೋಜನಕಾರಿ.
undefined
click me!