ಅಶ್ವಗಂಧ - ಮಕಾ ಬೇರು ಮಹಿಳೆಯರ ಸೆಕ್ಸ್ ಡ್ರೈವ್ ಹೆಚ್ಚಿಸೋ ಗಿಡಮೂಲಿಕೆಗಳು

First Published | Aug 27, 2020, 6:40 PM IST

ನಿಮ್ಮ ಸಂಗಾತಿಯೊಂದಿಗೆ ಒಳ್ಳೆ ಸಂಬಂಧವನ್ನು ಬೆಳೆಸಲು ಮತ್ತು ಒಟ್ಟಾರೆ ಆರೋಗ್ಯ ಸುಧಾರಿಸಲು ಆರೋಗ್ಯಕರ ಲೈಂಗಿಕ ಜೀವನ ಅಗತ್ಯ. ಇದು ಮಹಿಳೆ ಹಾಗೂ ಪುರಷರು ಇಬ್ಬರಿಗೂ ಅನ್ವಯ. ಮಹಿಳೆಯರಲ್ಲಿ ಸೆಕ್ಸ್ ಡ್ರೈವ್ ಕುಸಿಯುತ್ತಿದ್ದರೆ, ಭಯಪಡುವ ಅಗತ್ಯವಿಲ್ಲ. ಇಲ್ಲಿವೆ ಮದಕ್ಕೆ ಮನೆ ಮದ್ದು. ಗಿಡಮೂಲಿಕೆಗಳ ಬಗ್ಗೆ  ಇಲ್ಲಿದೆ ಮಾಹಿತಿ.

ಲೈಂಗಿಕ ಬಯಕೆಯನ್ನು ಉತ್ತೇಜಿಸಲು ಆಹಾರ ಮತ್ತು ವ್ಯಾಯಾಮ ಉತ್ತಮ ಪರಿಹಾರ. ಇವುಗಳ ಜೊತೆ ಕೆಲವು ಗಿಡಮೂಲಿಕೆಗಳಸೇವನೆಯೂ ಲೈಂಗಿಕ ಸಮಸ್ಯೆಗಳಿಗೆ ಮದ್ದಾಗುತ್ತದೆ.ಆ ಗಿಡ ಮೂಲಿಕೆಗಳ ಬಗ್ಗೆ ತಿಳಿದು ಕೊಳ್ಳಿ.
ಅಶ್ವಗಂಧ ಬೇರು -ಅಶ್ವಗಂಧವನ್ನು ಆಯುರ್ವೇದದ ರಾಜ ಎನ್ನುತ್ತಾರೆ. ಇದು ಒಂದು ಪ್ರಾಚೀನ ಔಷಧೀಯ ಸಸ್ಯ. ಅಶ್ವಗಂಧದ ಬೇರು ಚಂದ್ರನಾಡಿಗೆ ರಕ್ತದ ಹರಿವನ್ನು ಹೆಚ್ಚಿಸಿ, ಲೈಂಗಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
Tap to resize

ಸುಮಾ ಬೇರು -ಸುಮಾಗಿಡದ ಬೇರುಗಳನ್ನು ಸಾಂಪ್ರದಾಯಿಕ ಔಷಧದಲ್ಲಿ ಶತಮಾನಗಳಿಂದಸೂ ಬಳಸಲಾಗುತ್ತದೆ. ಇದನ್ನು ಜಿನ್‌ಸೆಂಗ್ ಎಂದೂ ಕರೆಯುತ್ತಾರೆ.
ಮಕಾ ಬೇರು -ಪೆರುವಿನ ಆಂಡಿಸ್ ಪರ್ವತಗಳಲ್ಲಿ ಬೆಳೆಯುವ ಮಕಾ ಬೇರುಗಳು ಬ್ರೊಕೊಲಿ ಮತ್ತು ಮೂಲಂಗಿ ಸಸ್ಯ ಕುಟುಂಬಕ್ಕೆ ಸೇರಿದ ಗಿಡಮೂಲಿಕೆ.ಫಲವತ್ತತೆ ಮತ್ತು ಸೆಕ್ಸ್ ಡ್ರೈವ್ ಹೆಚ್ಚಿಸಲು ಮಕಾ ಬೇರನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಮಕಾಬೇರಿನಲ್ಲಿರುವ ಅಯೋಡಿನ್ ಅಂಶವು ಮಹಿಳೆಯ ಹಾರ್ಮೋನ್ ಸಮತೋಲನವನ್ನು ಕಾಪಾಡುತ್ತದೆ. ಅದರಲ್ಲಿ ಸತು ಮಟ್ಟ ಹೆಚ್ಚಿದ್ದು, ಅದು ಲೈಂಗಿಕ ಹಾರ್ಮೋನುಗಳಿಗೆ ಅಗತ್ಯವಾದ ಖನಿಜ.
ಟೋಂಗ್ಕಟ್ ಅಲಿ -ಟೋಂಗ್ಕಟ್ ಅಲಿ ಒಂದು ಗಿಡಮೂಲಿಕೆಯ ಔಷಧಿ. ಆಗ್ನೇಯ ಏಷ್ಯಾದ ಸಾಂಪ್ರದಾಯಿಕ ಔಷಧವೂ ಹೌದು.ಕಡಿಮೆ ಕಾಮಾಸಕ್ತಿ ಹೊಂದಿರುವ ಮಹಿಳೆಯರಿಗೆ ಇದನ್ನು ನೀಡಲಾಗುತ್ತದೆ. ಒತ್ತಡಕ್ಕೆ ಉತ್ತಮ ಮದ್ದಿದು.ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿ, ಮೆದುಳಿನ ಕಾರ್ಯವನ್ನು ಸುಗಮಗೊಳಿಸುತ್ತದೆ.
ಓಟ್ಸ್ -ಓಟ್ಸ್ ಶಕ್ತಿಯುತವಾದ ಆಂಟಿಆಕ್ಸಿಡೆಂಟ್‌ಗಳು ಮತ್ತು ಬೀಟಾ-ಗ್ಲುಕನ್ ಹೊಂದಿರುತ್ತದೆ. ಅದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದಯವನ್ನು ಫಿಟ್‌ ಆಗಿಡಬಲ್ಲದು.
ಮುಯಿರಾ ಪುಮಾ -ಅಮೆಜಾನ್‌ ಮಳೆಕಾಡುಗಳಲ್ಲಿ ಸಿಗುವ ಮುಯಿರಾ ಪುಮಾ ಗಿಡ ಬಿಳಿ ಹೂವುಗಳನ್ನು ಹೊಂದಿರುತ್ತದೆ. ಇದರ ಬೇರನ್ನು ಸೆಕ್ಸ್‌ ಡ್ರೈವ್‌ ಬೂಸ್ಟ್‌ ಮಾಡಲು ಬಳಸುತ್ತಾರೆ. ಈ ಮೂಲಿಕೆಯನ್ನು ಉಪಯೋಗಿಸಿದ ಮಹಿಳೆಯರಕಾಮಾಸಕ್ತಿ, ಆಸೆ, ಲೈಂಗಿಕ ಆನಂದ ಮತ್ತು ಪರಾಕಾಷ್ಠೆಗಳನ್ನು ಹೆಚ್ಚಿಸುತ್ತದೆ, ಎಂದಿದ್ದಾರೆ.ಇದರ ಪರಿಣಾಮಒಟ್ಟಾರೆ ಮಹಿಳೆಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಹಕಾರಿ.
ಕ್ಯಾಟುಬಾ -ಕ್ಯಾಟುಬಾದಲ್ಲಿರುವ ಆಕ್ಟೀವ್‌ ಕಾಪೌಂಡ್‌ ಕಾಮಾಸಕ್ತಿಪ್ರಚೋದಿಸುತ್ತದೆ. ಇದು ಮೆದುಳಿನಲ್ಲಿ ಡೋಪಮೈನ್ ಮಟ್ಟವನ್ನು ಹೆಚ್ಚಿಸಬಲ್ಲದು.

Latest Videos

click me!