ಹಬ್ಬದಲ್ಲಿ ಮಾವಿನ ತೋರಣ ಕಟ್ಟೋ ಹಿಂದಿದೆ ವೈಜ್ಞಾನಿಕ ಗುಟ್ಟು!

First Published | Aug 26, 2020, 6:47 PM IST

ಹಣ್ಣಿನ ರಾಜ ಮಾವು ರುಚಿಯಲ್ಲಷ್ಟೇ ಅಲ್ಲ ಹಲವು ಗುಣದಲ್ಲೂ ಅದ್ಭುತ. ಮಾವಿನ ಹಣ್ಣು  ಆರೋಗ್ಯಕ್ಕೆ ಉಪಯುಕ್ತ ಎಂಬುದು ಗೊತ್ತು. ಅದರೆ ಮಾವಿನ ಎಲೆಗಳೂ ಹಲವು ಪ್ರಯೋಜನಗಳನ್ನು ಹೊಂದಿವೆ ಎಂದರೆ ನಂಬುತ್ತೀರಾ? ಹೌದು ಮಾವಿನ ಎಲೆಗಳು  ಕೆಲವು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ.

ಮಧುಮೇಹ (ಟೈಪ್ 1 ಮತ್ತು 2) ಚಿಕಿತ್ಸೆಯಲ್ಲಿ ಎಳೆಯ ಮಾವಿನ ಎಲೆಗಳು ತುಂಬಾ ಉಪಯಕ್ತ.ಇದು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕಾಪೌಂಡ್‌ಗಳನ್ನು ಒಳಗೊಂಡಿದೆ. ಈ ಮಾವಿನ ಎಲೆ ಕಷಾಯ ಮಾಡಬಹುದು. ಎಳೆಎಲೆಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಅದರ ನೀರು ಕುಡಿಯಬಹುದು. ಮಧುಮೇಹ ಆಂಜಿಯೋಪತಿ, ರೆಟಿನೋಪತಿ ಮತ್ತು ಹೈಪರ್ ಗ್ಲೈಸೆಮಿಯಾಗಳಿಗೆ ಒಣಗಿದ ಮಾವಿನ ಎಲೆ ಪುಡಿಯನ್ನು ಸಹ ಸೇವಿಸಬಹುದು.
ಮಾವಿನ ಎಲೆಗಳಿಂದ ತಯಾರಿಸಿದ ಚಹಾವನ್ನು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಿಣದಲ್ಲಿರುತ್ತದೆ. ಮಾವಿನ ಎಲೆಗಳಲ್ಲಿರುವಪಾಲಿಫಿನಾಲ್ ರಕ್ತನಾಳಗಳನ್ನು ಬಲಪಡಿಸುತ್ತದೆ ಮತ್ತು ಉಬ್ಬಿರುವ ರಕ್ತನಾಳಗಳಿಂದ (varicose veins) ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಸೂಕ್ತ.
Tap to resize

ಮಾವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಮಾಡಿದ ಕಷಾಯದಿಂದ ಆಸ್ತಮಾ ಸೇರಿವಿವಿಧ ಉಸಿರಾಟದ ಸಮಸ್ಯೆಗಳಿಗೆ ಮದ್ದು. ವೂಪಿಂಗ್ ಕೆಮ್ಮಿಗೆ ಚಿಕಿತ್ಸೆ ನೀಡಲು ಕಷಾಯವನ್ನು ಸ್ವಲ್ಪ ಜೇನುತುಪ್ಪದೊಂದಿಗೆ ಸಹ ತೆಗೆದುಕೊಳ್ಳಬಹುದು. ನೆಗಡಿ ಮತ್ತು ಬ್ರಾಂಕೈಟಿಸ್‌ಗೆ ಇದು ಹೆಲ್ಪ್‌ಫುಲ್.
ಮಾವಿನ ಎಲೆಪುಡಿಯನ್ನು ಪ್ರತಿದಿನ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಮತ್ತು ಪಿತ್ತಜನಕಾಂಗದ ಕಲ್ಲುಗಳನ್ನು ಕರಗಿಸಬಹುದು. ಎಲೆಯನ್ನು ನೆರಳಿನಲ್ಲಿ ಒಣಗಿಸಿ, ನಂತರ ನುಣ್ಣಗೆ ಪುಡಿ ಮಾಡಿ ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಕುಡಿಯಬೇಕು. ಭೇದಿಗೂ ಇದನ್ನು ದಿನಕ್ಕೆ ಎರಡು ಮೂರು ಬಾರಿ ನೀರಿನೊಂದಿಗೆ ತೆಗೆದುಕೊಳ್ಳಬಹುದು.
ಮಾವಿನೆಲೆಯಲ್ಲಿ ಪಾಲಿಫಿನಾಲ್ ಎಂಬ ಅಂಶವಿದ್ದು, ಕಡಿಮೆ ರಕ್ತದೊತ್ತಡ ಇರೋರಿಗೆ ರಾಮಬಾಣ.
ಆ್ಯಂಟಿ ಬ್ಯಾಕ್ಟೀರಿಯಲ್‌ ಗುಣಗಳು ಇದರಲ್ಲಿಸಮೃದ್ಧವಾಗಿದೆ. ಮಾವಿನ ಎಲೆಗಳನ್ನು ಅಗಿಯುವುದರಿಂದ ಒಸಡು ಸಮಸ್ಯೆ ನಿವಾರಿಬಹುದು. ಆ್ಯಂಟಿ ಬ್ಯಾಕ್ಟೀರಿಯಲ್‌ ಅಂಶಗಳು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ. ಮಾವಿನ ಎಲೆಯ ರಸಹೊಟ್ಟೆಗೆ ಸಂಬಂಧಿಸಿದ ವಿವಿಧ ಕಾಯಿಲೆಗಳನ್ನು ಗುಣಪಡಿಸುತ್ತದೆ.
ಮಾವಿನ ಎಲೆಗಳು ಬಿಕ್ಕಳಿಕೆ ಮತ್ತು ಗಂಟಲಿನ ಸಮಸ್ಯೆಗಳಿಗೆ ಒಳ್ಳೆಯದು. ಮಾವಿನ ಎಲೆಗಳನ್ನು ಸುಟ್ಟು ಹೊಗೆಯನ್ನು ಉಸಿರಾಡುವುರಿಂದ ಗಂಟಲಿನ ತೊಂದರೆ ಮತ್ತು ಬಿಕ್ಕಳಿಕೆ ಗುಣಪಡಿಸುತ್ತದೆ ಎಂದು ನಂಬಲಾಗಿದೆ.
ಈ ಎಲೆಗಳಲ್ಲಿರುವ ಕಾಂಪೌಂಡ್‌ ಆತಂಕದ ಮಟ್ಟವನ್ನು ತಗ್ಗಿಸಲು ಹೆಲ್ಪ್‌ ಮಾಡುತ್ತದೆ. ಮಾವಿನ ಚಹಾದಲ್ಲಿ ಸ್ನಾನ ಮಾಡುವುದರಿಂದ ಮನಸ್ಸು ಮತ್ತು ದೇಹವು ರಿಲ್ಯಾಕ್ಸ್‌ ಆಗಿ ರಿಫ್ರೆಶ್‌ ಆಗುತ್ತದೆ. ಒಣಗಿದ ಮಾವಿನ ಎಲೆಯೂ ಉಪಯೋಗಕ್ಕೆ ಬರುವುದರಿಂದ ಅದರ ತೋರಣ ಕಟ್ಟಲಾಗುತ್ತದೆ.

Latest Videos

click me!