ಮೂತ್ರಕೋಶದ ಸಮಸ್ಯೆ ಬರೋ ಮುನ್ನ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ

First Published | Nov 13, 2022, 10:58 AM IST

ಶೌಚಾಲಯದ ಸಮಸ್ಯೆ ಉಂಟಾಗುವವರೆಗೂ ಹೆಚ್ಚಿನ ಜನರು ತಮ್ಮ ಮೂತ್ರಕೋಶದ ಬಗ್ಗೆ ಮರೆತುಬಿಡುತ್ತಾರೆ. ಉತ್ತಮ ಮೂತ್ರಕೋಶದ ಆರೋಗ್ಯವನ್ನು ಇಟ್ಟುಕೊಳ್ಳುವುದು ಭವಿಷ್ಯದ ಸಮಸ್ಯೆಗಳನ್ನು ತಡೆಗಟ್ಟಬಹುದು. ಕೆಲವು ಆರೋಗ್ಯಕರ ಜೀವನಶೈಲಿ ಬದಲಾವಣೆಗಳು ನಿಮ್ಮ ಮೂತ್ರಕೋಶಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡಬಹುದು. 

ನಿಮ್ಮ ಮೂತ್ರಕೋಶವನ್ನು ಆರೋಗ್ಯಕರವಾಗಿಡಲು (healthy bladder) ನೀವೇನು ಮಾಡುತ್ತೀರಾ? ಏನು ಇಲ್ಲ ಅಲ್ವಾ? ಯಾಕಂದ್ರೆ ನಮ್ಮ ಮೂತ್ರ ಕೋಶಕ್ಕೆ ಯಾವುದಾದರೂ ಸಮಸ್ಯೆ ಬರೋವರೆಗೂ ನಾವು ಆ ಬಗ್ಗೆ ಯೋಚನೆ ಮಾಡೋದೇ ಇಲ್ಲ. ಅಲ್ಲೇ ನೀವು ತಪ್ಪು ಮಾಡ್ತಿರೋದು.. ನಿಮ್ಮ ಆಹಾರವು ನಿಮ್ಮ ಮೂತ್ರಕೋಶ ಮತ್ತು ಒಟ್ಟಾರೆ ಆರೋಗ್ಯ ಎರಡರ ಮೇಲೂ ಗಮನಾರ್ಹ ಪರಿಣಾಮ ಬೀರುತ್ತದೆ. ಆದುದರಿಂದ ಆರೋಗ್ಯಯುತ ಆಹಾರ ಕ್ರಮವನ್ನು ನೀವು ಅಳವಡಿಸಿಕೊಳ್ಳಬೇಕು. ಕೆಲವು ಆಹಾರ ಪದಾರ್ಥಗಳು ರೋಗಗಳನ್ನು ತಡೆಗಟ್ಟಲು ಸಹಾಯ ಮಾಡಿದ್ರೆ, ಇತರವು ಅನಾರೋಗ್ಯಕ್ಕೆ ಕಾರಣವಾಗಬಹುದು. ಬ್ಲೇಡರ್ ಆರೋಗ್ಯವಾಗಿರಲು ನೀವು ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು ಅನ್ನೊದನ್ನು ನೋಡೋಣ. 
 

ನೀರು ಕುಡಿಯಿರಿ (drink water)
ಹೈಡ್ರೇಟ್ ಆಗಿರುವುದು ಬಹಳ ಮುಖ್ಯ. ಪ್ರತಿದಿನ ಕನಿಷ್ಠ ಎರಡು ಲೀಟರ್, ಸುಮಾರು 64 ಔನ್ಸ್ ನೀರನ್ನು ಕುಡಿಯುವ ಗುರಿ ಹೊಂದಿದ್ರೆ ನೀವು ಆರೋಗ್ಯದಿಂದ ಇರುವಿರಿ. ದಿನವಿಡೀ ನೀರು ಕುಡಿಯುವುದು ಮೂತ್ರವನ್ನು ದುರ್ಬಲಗೊಳಿಸಲು ಮತ್ತು ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ಸಹಾಯ ಮಾಡುತ್ತದೆ. 

Tap to resize

ಇನ್ನು ನೀವು ತುಂಬಾ ಕಡಿಮೆ ನೀರು ಸೇವಿಸಿದ್ರೆ ಇದರಿಂದ ಹೆಚ್ಚು ಗಾಢ ಹಳದಿ ಮೂತ್ರಕ್ಕೆ ಕಾರಣವಾಗಬಹುದು, ಅದು ಕೆಟ್ಟ ವಾಸನೆಯೊಂದಿಗೆ ಬರುತ್ತದೆ ಮತ್ತು ಮೂತ್ರಕೋಶವನ್ನು ಕಿರಿಕಿರಿಗೊಳಿಸುತ್ತದೆ. ಇದರಿಂದ ಪದೇ ಪದೇ ಮೂತ್ರ ಸಹ (urine infection) ಬರಬಹುದು. ಅಲ್ಲದೇ ಸಾಕಷ್ಟು ನೀರನ್ನು ಕುಡಿಯದಿರುವುದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ, ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಸಹ ಹೆಚ್ಚಿಸುತ್ತೆ. ಇದು ಮೂತ್ರನಾಳದ ಸೋಂಕಿಗೆ ಅಥವಾ ಮೂತ್ರನಾಳದಲ್ಲಿ ಕಲ್ಲಿನ ರಚನೆಗೆ ಕಾರಣವಾಗಬಹುದು ಹುಷಾರಾಗಿರಿ.

ನಿಂಬೆ ಮತ್ತು ನಿಂಬೆ ರಸ
ಈ ಹಣ್ಣುಗಳಲ್ಲಿನ ಸಿಟ್ರಿಕ್ ಆಮ್ಲವು ಕೊಡ್ನಿ ಸ್ಟೋನ್ ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು "ಯೂರಿನರಿ ಡೈವರ್ಶನ್" ಎಂದು ಕರೆಯಲ್ಪಡುವ ಶಸ್ತ್ರಚಿಕಿತ್ಸೆಗೆ ಒಳಗಾದ ಕೆಲವು ರೋಗಿಗಳಿಗೆ ಪ್ರಯೋಜನ ನೀಡುತ್ತೆ. ನಿಂಬೆ ಅಥವಾ ನಿಂಬೆ ರಸವನ್ನು (lemon juice) ನೀರಿಗೆ ಸೇರಿಸಬಹುದು. ಸಲಾಡ್ ಡ್ರೆಸ್ಸಿಂಗ್ ಗಳಲ್ಲಿ ಬಳಸಬಹುದು, ಅಥವಾ ಹೆಚ್ಚುವರಿ ಪರಿಮಳಕ್ಕಾಗಿ ಆಹಾರದ ಮೇಲೆ ಸಿಂಪಡಿಸಬಹುದು. ಪ್ರತಿದಿನ ಅರ್ಧ ಕಪ್ ನಿಂಬೆ ಜ್ಯೂಸ್ ಕುಡಿಯೋದು ಬೆಸ್ಟ್.

ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ ಬಳಸಿ 
ನಿಮ್ಮ ಆಹಾರದಲ್ಲಿ ಆಲಿವ್ ಎಣ್ಣೆ ಬಳಸಿ (extra virging olive oil).  ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆಯು ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು, ರಕ್ತದೊತ್ತಡವನ್ನು ಕಡಿಮೆ ಮಾಡಲು, ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟಗಳನ್ನು ಕಡಿಮೆ ಮಾಡಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೀಜಗಳು : 
ಆಲಿವ್ ಎಣ್ಣೆ ಅಥವಾ ಸಾವಯವ ಕ್ಯಾನೋಲಾ ಎಣ್ಣೆ, ತರಕಾರಿ ಎಣ್ಣೆ, ಆವಕಾಡೊ ಮತ್ತು ಅಗಸೆ ಬೀಜಗಳಂತಹ ಆರೋಗ್ಯಕರ ಕೊಬ್ಬುಗಳಿಂದ (healthy fats) ಸಮೃದ್ಧವಾಗಿರುವ ಆಹಾರಗಳ ಮೇಲೆ ಗಮನ ಹರಿಸಿ. ಕೆಲವು ಮೀನುಗಳು, ಉದಾಹರಣೆಗೆ ಸ್ಯಾಬಲ್ ಫಿಶ್, ಸಾಲ್ಮನ್, ಟ್ರೌಟ್, ಹೆರ್ರಿಂಗ್ ಮತ್ತು ಸಾರ್ಡಿನ್ ಸಹ ಉತ್ತಮ ಕೊಬ್ಬಿನ ಮೂಲಗಳಾಗಿವೆ. ಕರಿದ, ಸುಟ್ಟ ಅಥವಾ ಸಂಸ್ಕರಿಸಿದ ಮಾಂಸಗಳು, ಹಾಗೆಯೇ ಕ್ಯಾನ್ಡ್ ಆಹಾರಗಳು, ಅಕ್ಕಿ ಮತ್ತು ಸಕ್ಕರೆಯನ್ನು ತಪ್ಪಿಸಿ. ಬದಲಾಗಿ, ಸಂಪೂರ್ಣ ಧಾನ್ಯದ ಆಹಾರಗಳನ್ನು ಸೇವಿಸಿ..

 ಹಣ್ಣುಗಳು ಮತ್ತು ತರಕಾರಿಗಳು 
ಪ್ರತಿದಿನ ಕನಿಷ್ಠ ಐದು ಬಾರಿ ಹಣ್ಣುಗಳು ಮತ್ತು ತರಕಾರಿಗಳನ್ನು (fruits and vegetables) ತಿನ್ನಬೇಕು. ಪ್ರತಿ ಊಟದ ಸಮಯದಲ್ಲಿ, ನಿಮ್ಮ ತಟ್ಟೆಯ ಕನಿಷ್ಠ ಮೂರನೇ ಎರಡರಷ್ಟು ಭಾಗವನ್ನು ತರಕಾರಿಗಳು, ಹಣ್ಣುಗಳು, ಸಂಪೂರ್ಣ ಧಾನ್ಯಗಳು ಅಥವಾ ಬೀನ್ಸ್ ನಿಂದ ಮತ್ತು ಒಂದು ಭಾಗವನ್ನು ಚಿಕನ್ ಅಥವಾ ಮೀನಿನಂತಹ ಪ್ರೋಟೀನ್ ಗಳಿಂದ ತುಂಬಲು ಪ್ರಯತ್ನಿಸಿ. ಹಣ್ಣುಗಳಿಗಿಂತ ಹೆಚ್ಚು ತರಕಾರಿಗಳನ್ನು ತಿನ್ನಲು ಪ್ರಯತ್ನಿಸಿ.

ಮೂತ್ರಕೋಶದ ಕಿರಿಕಿರಿ ತಪ್ಪಿಸಿ  
ಕೆಲವು ಆಹಾರ ಪದಾರ್ಥಗಳು ಮತ್ತು ದ್ರವಗಳು ಮೂತ್ರಕೋಶದಲ್ಲಿ ಕಿರಿಕಿರಿ ಉಂಟುಮಾಡಬಹುದು. ಮಸಾಲೆಯುಕ್ತ ಆಹಾರ (spicy food), ಕೆಫೀನ್ಯುಕ್ತ ಮತ್ತು ಕಾರ್ಬೋನೇಟೆಡ್ ಪಾನೀಯಗಳು, ಚಾಕೊಲೇಟ್, ಚಹಾ, ವಿನೆಗರ್, ಕಿತ್ತಳೆ ರಸ, ಟೊಮೆಟೊ ಆಧಾರಿತ ಆಹಾರಗಳು ಅಥವಾ ಆಲ್ಕೋಹಾಲ್ ಯುಕ್ತ ಪಾನೀಯಗಳನ್ನು ತಪ್ಪಿಸಿ. 

ನಿಮ್ಮ ಮೂತ್ರಕೋಶದ ಮೇಲಿನ ಪರಿಣಾಮ ಕಡಿಮೆ ಮಾಡಲು ಅವುಗಳನ್ನು ನಿಮ್ಮ ಆಹಾರದೊಂದಿಗೆ ಸೇರಿಸಬೇಡಿ ಅಥವಾ ನೀರಿನೊಂದಿಗೆ ದುರ್ಬಲಗೊಳಿಸಲು ಪ್ರಯತ್ನಿಸಿ. ಜೊತೆಗೆ ಮೂತ್ರಕೋಶದಲ್ಲಿ ಕಿರಿಕಿರಿ ಉಂಟುಮಾಡುವ ತಂಬಾಕು ಸೇವನೆ ನಿಲ್ಲಿಸಿ, ಮತ್ತು ಇದು ಮೂತ್ರಕೋಶದ ಕ್ಯಾನ್ಸರ್ ಮತ್ತು ಇತರ ಪರಿಸ್ಥಿತಿಗಳಿಗೆ ಪ್ರಮುಖ ಕಾರಣವಾಗಿದೆ.

Latest Videos

click me!