ಒಂದು ಕಾಲನ್ನು ಹೊರಗಿಟ್ಟು ಮಲಗಿದ್ರೆ ಉತ್ತಮ ನಿದ್ರೆ ಯಾಕೆ ಬರುತ್ತೆ?
ಕಂಬಳಿಯಿಂದ ಒಂದು ಕಾಲನ್ನು ಹೊರ ಹಾಕಿ ಮಲಗೋದ್ರಿಂದ ವ್ಯಕ್ತಿ ವೇಗವಾಗಿ ಮತ್ತು ಉತ್ತಮವಾಗಿ ನಿದ್ರೆ ಮಾಡಲು ಏಕೆ ಕಾರಣವಾಗುತ್ತದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಪದೇ ಪದೇ ಹರಿದಾಡುತ್ತಿರಬಹುದು. ಅದರ ಹಿಂದೆ ಒಂದು ವಿಜ್ಞಾನವಿದೆ. ನಿಮಗೂ ಅದರ ಬಗ್ಗೆ ತಿಳಿಯಲು ಆಸಕ್ತಿ ಇದ್ರೆ ಇಲ್ಲಿದೆ ನೋಡಿ ಮಾಹಿತಿ.
ವಾಸ್ತವವಾಗಿ, ಪಾದಗಳು ದೇಹದ ತಾಪಮಾನವನ್ನು ಕಡಿಮೆ ಮಾಡುತ್ತವೆ. ಇದು ನರಗಳು (Nerves) ಮತ್ತು ಅಪಧಮನಿಗಳ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ, ಇದು ನಿಮ್ಮ ಪಾದಗಳು ಶಾಖಕ್ಕೆ ಒಡ್ಡಿಕೊಂಡಾಗ ಹಿಗ್ಗುತ್ತದೆ. ಈ ಕಾರಣದಿಂದಾಗಿ ಇದು ದೇಹದ ಇತರ ಎಲ್ಲಾ ಅಂಗಗಳಿಗಿಂತ ವೇಗವಾಗಿ ಪಾದಗಳನ್ನು ತಂಪಾಗಿಸುತ್ತದೆ.
ಇದಕ್ಕೆ ಮತ್ತೊಂದು ಕಾರಣವೆಂದರೆ ನಿಮ್ಮ ಪಾದಗಳ ಕೆಳ ಭಾಗದಲ್ಲಿ ಕೂದಲು ಇರುವುದಿಲ್ಲ ಮತ್ತು ಕೂದಲಿನ ಕೊರತೆಯು ಶಾಖವು ವೇಗವಾಗಿ ಆವಿಯಾಗಲು ಕಾರಣವಾಗುತ್ತದೆ. ಇದರಿಂದ ದೇಹಕ್ಕೆ ಬೇಕಾದ ತಂಪು ಸಿಗುತ್ತದೆ. ಇದರಿಂದ ಬೇಗನೆ ನಿದ್ರೆ ಮಾಡಲು ಸಹಾಯವಾಗುತ್ತೆ.
ನಿಮ್ಮ ಪಾದಗಳು ತಂಪಾದ ವಾತಾವರಣಕ್ಕೆ (cold temperature) ಒಡ್ಡಿಕೊಂಡಾಗ ಅದು ದೇಹದ ಇತರ ಭಾಗಗಳನ್ನು ಅಷ್ಟೇ ಬೇಗ ತಣ್ಣಗಾಗಲು ಸಹಾಯ ಮಾಡುತ್ತದೆ, ಆದ್ದರಿಂದ ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಕೇವಲ ಒಂದು ಕಾಲನ್ನು ಹೊರ ಹಾಕುವ ತಂತ್ರವು ಹೇಗೆ ಕೆಲಸ ಮಾಡುತ್ತೆ ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ನೀವು ಒಂದು ಕಾಲನ್ನು ಹೊರ ತೆಗೆದಾಗ, ತಂಪಾಗಿಸುವ ಪ್ರಕ್ರಿಯೆ ನಿಧಾನವಾಗುತ್ತದೆ, ಇದರಿಂದ ನೀವು ರಾತ್ರಿಯಲ್ಲಿ ಶೀತವನ್ನು ಅನುಭವಿಸುವುದಿಲ್ಲ ಮತ್ತು ನೀವು ಆರಾಮವಾಗಿ ಮಲಗಬಹುದು. ಆದ್ದರಿಂದ, ನೀವು ಒಂದು ಕಾಲನ್ನು ಹೊರಗೆ ಇರಿಸಿ ಮಲಗುವುದು ಒಳ್ಳೆಯದು.
ಒಂದು ಪಾದದ ಟ್ರಿಕ್ ಪೂರ್ಣ ಪ್ರಯೋಜನ ಪಡೆಯುವುದು ಹೇಗೆ?
ನೀವು ಒಂದು ಪಾದದ ಟ್ರಿಕ್‌ನ ಪೂರ್ಣ ಪ್ರಯೋಜನ ಪಡೆಯಲು ಬಯಸಿದರೆ, ನೀವು ಕೆಲವು ಸಣ್ಣ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವು ಯಾವುವು? ಅದರಿಂದ ಏನು ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ.
ನಿಮ್ಮ ಸುತ್ತಲಿನ ತಾಪಮಾನದ (temperature) ಬಗ್ಗೆ ಗಮನ ಹರಿಸೋದು ಮುಖ್ಯ. ಈ ತಂತ್ರ ಮುಖ್ಯವಾಗಿ ಬೇಸಿಗೆಯ ದಿನಗಳಲ್ಲಿ ಸಹಾಯಕ್ಕೆ ಬರುತ್ತದೆ. ಚಳಿಗಾಲದಲ್ಲಿ ನೀವು ನಿಮ್ಮ ಪಾದಗಳನ್ನು ನಿಮ್ಮ ಕಂಬಳಿಯಿಂದ ಹೊರತೆಗೆದರೆ ಅದು ನಿಮಗೆ ಶೀತವನ್ನು ಉಂಟುಮಾಡಬಹುದು. ಇದು ನಿಮ್ಮ ನಿದ್ರೆಗೆ ಭಂಗ ತರಬಹುದು. ಆವಾಗ, ನೀವು ಪಾದಗಳನ್ನು ಮತ್ತೆ ನಿಮ್ಮ ಕಂಬಳಿಯೊಳಗೆ ತರಬೇಕಾಗಬಹುದು.
ಯಾವಾಗಲೂ ಸರಿಯಾದ ಫ್ಯಾಬ್ರಿಕ್ ಬೆಡ್ ಶೀಟ್ ಮತ್ತು ಬ್ಲಾಂಕೆಟ್ ಬಳಸಿ. ಬೇಸಿಗೆಯಲ್ಲಿ ಫ್ಲಾನೆಲ್ ಬೆಡ್ ಶೀಟ್ ಸೂಕ್ತವಲ್ಲ. ಅಂತೆಯೇ, ಶೀತ ಹವಾಮಾನಕ್ಕೆ ಕತ್ತರಿ ಕಂಬಳಿಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಆದುದರಿಂದ ಸಮಯಕ್ಕೆ ಸರಿಯಾದ ಬೆಡ್ ಶೀಟ್ ಗಳನ್ನು ಬಳಕೆ ಮಾಡೋದು ಉತ್ತಮ.
ನಿಮ್ಮ ದೇಹದ ತಾಪಮಾನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ರಾತ್ರಿಯಾದಾಗ, ನಿಮ್ಮ ದೇಹದ ತಾಪಮಾನವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದುದರಿಂದ ರಾತ್ರಿ ಗ್ಯಾಜೆಟ್ ಬಳಕೆಯನ್ನು (using gadget) ಕಡಿಮೆ ಮಾಡಿ, ಏಕೆಂದರೆ ಅವುಗಳಿಂದ ಹೊರಸೂಸುವ ಬೆಳಕು ನಿಮ್ಮ ನಿದ್ರೆಯನ್ನು ಹಾಳು ಮಾಡಬಹುದು.
ಮಲಗಿರುವಾಗ ನಿಮ್ಮ ದೇಹ ಮತ್ತು ಮನಸ್ಸನ್ನು ಸಾಧ್ಯವಾದಷ್ಟು ವಿಶ್ರಾಂತಿಗೊಳಿಸಲು ಪ್ರಯತ್ನಿಸಿ. ನೀವು ವಿಶ್ರಾಂತಿ ಪಡೆಯುವಾಗ, ಒಂದು ಕಾಲನ್ನು ಹೊರಗಿಟ್ಟು ಮಲಗಿ, ಇದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರಲು ಸಹಾಯ ಮಾಡುತ್ತೆ. ಪ್ರತಿದಿನ ಹೀಗೆ ಮಲಗಿ ಉತ್ತಮ ನಿದ್ರೆ ನಿಮ್ಮದಾಗಿಸಿಕೊಳ್ಳಬಹುದು.