ಸಮ್ಮರ್ ನಲ್ಲಿ ಅಂಡರ್ ಆರ್ಮ್ ವಾಸನೆ ನಿವಾರಿಸಲು ಬೆಸ್ಟ್ ಟ್ರಿಕ್ಸ್

Published : Jun 03, 2022, 05:33 PM IST

ಬೇಸಿಗೆ ಕಾಲ ಎಂದರೆ ಹೆಚ್ಚು ಬೆವರುವ ಸಮಯ, ಈ ದಿನಗಳಲ್ಲಿ ಎಷ್ಟೊಂದು ಬೆವರುತ್ತೆ ಅಂದ್ರೆ, ಯಾಕಪ್ಪಾ ಈ ಬೇಸಿಗೆ ಕಾಲ ಬರುತ್ತೆ ಎಂದು ಜನ ತಲೆ ಚಚ್ಚಿಕೊಳ್ಳುತ್ತಾರೆ. ಈ ಸಮಯದಲ್ಲಿ ಜನರ ಅಂಡರ್ ಆರ್ಮ್ ಗಳಿಂದ ಸ್ಮೆಲ್ ಬರಲು ಶುರುವಾಗುತ್ತದೆ. ಈ ಕಾರಣದಿಂದಾಗಿ, ಅನೇಕ ಬಾರಿ ಅವರು ಮುಜುಗರವನ್ನು ಸಹ ಎದುರಿಸಬೇಕಾಗುತ್ತೆ. ಈ ಸಮಸ್ಯೆಯನ್ನು ನಿವಾರಿಸಲು, ಜನರು ಹೆಚ್ಚಾಗಿ ಡಿಯೋಡರೆಂಟ್ ಅಥವಾ ಸುಗಂಧ ದ್ರವ್ಯವನ್ನು ಬಳಸುತ್ತಾರೆ. ಆದರೆ ಇದನ್ನು ಹೆಚ್ಚಾಗಿ ಬಳಸಿದ್ರೆ ಸಮಸ್ಯೆಗಳು ಸಹ ಹೆಚ್ಚುತ್ತೆ.   

PREV
16
ಸಮ್ಮರ್ ನಲ್ಲಿ ಅಂಡರ್ ಆರ್ಮ್ ವಾಸನೆ ನಿವಾರಿಸಲು ಬೆಸ್ಟ್ ಟ್ರಿಕ್ಸ್

ಡಿಯೋಡ್ರಂಟ್, ಪರ್ಫ್ಯೂಮ್ ಮೊದಲಾದ ಉತ್ಪನ್ನದ ಬಳಕೆಯಿಂದಾಗಿ ಅನೇಕ ಬಾರಿ ಅಂಡರ್ ಆರ್ಮ್ (Under arm)ಕಪ್ಪು ಬಣ್ಣಕ್ಕೆ ತಿರುಗುತ್ತೆ. ಇದಲ್ಲದೆ, ಇದು ಅಂಡರ್ ಆರ್ಮ್ ಗಳಲ್ಲಿ ಕಿರಿಕಿರಿ ಉಂಟುಮಾಡಬಹುದು. ಆದ್ದರಿಂದ , ನೀವು ಈ ವಾಸನೆಯನ್ನು ತೊಡೆದುಹಾಕಲು ಬಯಸಿದರೆ, ಕೆಲವು ಸುಲಭವಾದ ಮನೆಮದ್ದುಗಳನ್ನು ಬಳಕೆ ಮಾಡಬಹುದು. ಅವು ಯಾವುವು ಅನ್ನೋದನ್ನು ತಿಳಿದುಕೊಳ್ಳೋಣ. 

26

ಅಂಡರ್ ಆರ್ಮ್ ಗಳ ವಾಸನೆಯನ್ನು ತೊಡೆದುಹಾಕಬಹುದಾದ ಕೆಲವು ಸುಲಭ ನೈಸರ್ಗಿಕ ಮಾರ್ಗಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.  ಇಲ್ಲಿದೆ ಅಂಡರ್ ಆರ್ಮ್ ಗಳಿಂದ ವಾಸನೆಯನ್ನು ತೆಗೆದುಹಾಕಲು ಮನೆಮದ್ದುಗಳು. ಅವುಗಳನ್ನು ಬಳಸುವ ಮೂಲಕ ಕೆಟ್ಟ ವಾಸನೆಯನ್ನು(Bad smell) ನಿವಾರಿಸಿ. 

36

ಹಸಿ ಆಲೂಗಡ್ಡೆ (Potato)
ಅಂಡರ್ ಆರ್ಮ್ ಗಳ ವಾಸನೆಯಿಂದ ನೀವು ತೊಂದರೆಗೀಡಾಗಿದ್ದರೆ, ಅದನ್ನು ತೆಗೆದುಹಾಕಲು ಕಚ್ಚಾ ಆಲೂಗಡ್ಡೆಯನ್ನು ಬಳಸಿ. ಹೌದು ಆಲೂಗಡ್ಡೆಯನ್ನು ಅಡುಗೆಗೆ ಮಾತ್ರವಲ್ಲ, ಅಂಡರ್ ಆರ್ಮ್ ವಾಸನೆ ನಿವಾರಿಸಲು ಸಹ ಬಳಕೆ ಮಾಡಬಹುದು. ಇದು ಅಂಡರ್ ಆರ್ಮ್ ಗಳಿಂದ ಬರುವ ಸ್ಮೆಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. 
 

46

ಆಲೂಗಡ್ಡೆಯನ್ನು ಬಳಸಲು, ಮೊದಲನೆಯದಾಗಿ, ಆಲೂಗಡ್ಡೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ, ಇದನ್ನು ಅಂಡರ್ ಆರ್ಮ್ ಗಳಲ್ಲಿ 5 ನಿಮಿಷಗಳ ಕಾಲ ಉಜ್ಜಿ ಮತ್ತು ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಈ ಟಿಪ್ಸ್ (Tips)ಅನ್ನು ಪಾಲಿಸುವ ಮೂಲಕ, ನೀವು ಕೆಲವೇ ದಿನಗಳಲ್ಲಿ ಈ ಸಮಸ್ಯೆಯನ್ನು ಹೊರಬರುತ್ತೀರಿ.
 

56

ಆಪಲ್ ವಿನೆಗರ್(Apple vinegar) ಬಳಸಿ
ಅಂಡರ್ ಆರ್ಮ್ ವಾಸನೆಯನ್ನು ತೆಗೆದುಹಾಕುವಲ್ಲಿ ಆಪಲ್ ವಿನೆಗರ್ ಸಹ ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ಬಳಸಲು, ಮೊದಲಿಗೆ, 1 ಕಪ್ ಆಪಲ್ ವಿನೆಗರ್ ತೆಗೆದುಕೊಂಡು, ಅದಕ್ಕೆ ಅರ್ಧ ಕಪ್ ನೀರು ಸೇರಿಸಿ ಮಿಕ್ಸ್ ಮಾಡಿ.  ನಂತರ ಅದನ್ನು ಅಂಡರ್ ಆರ್ಮ್ ಗೆ ಹಚ್ಚಿ,  ರಾತ್ರಿಯಿಡೀ ಬಿಡಿ. ಬೆಳಿಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಿಂದ ಅಂಡರ್ ಆರ್ಮ್ ಗಳನ್ನು ಸ್ವಚ್ಛಗೊಳಿಸಿ. ಕೆಲವೇ ದಿನಗಳಲ್ಲಿ ಅಂಡರ್ ಆರ್ಮ್ ವಾಸನೆ ನಿವಾರಣೆಯಾಗುತ್ತೆ.

66


ರಾಕ್ ಸಾಲ್ಟ್ ನ(Rock salt) ಬಳಕೆ
ಕಲ್ಲುಪ್ಪಿನ ಬಳಕೆಯು ದೇಹದ ವಾಸನೆಯನ್ನು ತೆಗೆದುಹಾಕುತ್ತೆ . ಇದನ್ನು ಬಳಸಲು, ಸ್ನಾನದ ನೀರಿಗೆ ಒಂದು ಟೀಸ್ಪೂನ್ ಕಲ್ಲುಪ್ಪನ್ನು ಸೇರಿಸಿ. ನಂತರ ಈ ನೀರಿನಿಂದ ಸ್ನಾನ ಮಾಡಿ. ಇದು ದೇಹದ ಬೆವರು ವಾಸನೆಯನ್ನು ತೆಗೆದುಹಾಕುತ್ತದೆ. ಜೊತೆಗೆ ದೇಹದಿಂದ ಹೊರಬರುವ ಹೆಚ್ಚುವರಿ ಬೆವರನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ.

Read more Photos on
click me!

Recommended Stories