ಬೇಸಿಗೆಯಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಕಾರಲ್ಲಿಡೋದು ಡೇಂಜರ್‌

Published : Jun 03, 2022, 05:26 PM IST

ಹೈಜೀನ್ ಆನ್ನು ಮೇಂಟೈನ್ ಮಾಡಲು ಮತ್ತು ಕರೋನಾದಿಂದ ರಕ್ಷಣೆಗಾಗಿ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಬಹಳ ಮುಖ್ಯವಾಗಿದೆ. ಹೆಚ್ಚಿನ ಜನ ಸ್ಯಾನಿಟೈಸರ್ ನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ಅದರಲ್ಲೂ ಬ್ಯಾಗ್ ನಲ್ಲಿ, ಕಾರ್ ನಲ್ಲಿ ಸ್ಯಾನಿಟೈಸರ್ ಇಟ್ಟುಕೊಳ್ಳುತ್ತಾರೆ.  ವಿಶೇಷವಾಗಿ ಕೊರೊನಾ ಬಂದ ನಂತರ, ಹ್ಯಾಂಡ್ ಸ್ಯಾನಿಟೈಸರ್ ಅನ್ನು ದಿನಕ್ಕೆ ನೂರಾರು ಬಾರಿ ಬಳಸಬೇಕಾಗುತ್ತದೆ.

PREV
16
 ಬೇಸಿಗೆಯಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಕಾರಲ್ಲಿಡೋದು ಡೇಂಜರ್‌

ಕಾರಿನಲ್ಲಿ ಪ್ರಯಾಣಿಸುವಾಗ, ಕಾರಿನಲ್ಲಿ ನೀವು ಹ್ಯಾಂಡ್ ಸ್ಯಾನಿಟೈಸರ್(Hand sanitizer) ಬಾಟಲಿಯನ್ನು ಸಹ ಹೊಂದಿರಬೇಕು. ಇದು ಬಹಳ ಮುಖ್ಯವೂ ಹೌದು. ಆದರೆ ಚಳಿಗಾಲ ಮತ್ತು ಮಳೆಗಾಲದಂತೆಯೇ  ಬೇಸಿಗೆಯಲ್ಲಿ ಈ ಹ್ಯಾಂಡ್ ಸ್ಯಾನಿಟೈಸರ್ ಬಾಟಲಿಯನ್ನು ಕಾರಿನೊಳಗೆ ಇಡಬಾರದು. ವಿಶೇಷವಾಗಿ ನಿಮ್ಮ ಕಾರನ್ನು ಓಪನ್ ಗ್ರೌಂಡ್ ನಲ್ಲಿ, ಉರಿ ಬಿಸಿಲಿನಲ್ಲಿ ನಿಲ್ಲಿಸುವುದಾದರೆ ಈ ತಪ್ಪನ್ನು ಯಾವತ್ತೂ ಮಾಡಲೇಬೇಡಿ.   

26

ಮೊದಲನೆಯದಾಗಿ, ಹ್ಯಾಂಡ್ ಸ್ಯಾನಿಟೈಸರ್ ಅನ್ನು ಕಾರಿನಲ್ಲಿ ಬಿಟ್ಟಾಗ, ಬೆಂಕಿ ಹೊತ್ತಿಕೊಳ್ಳುತ್ತದೆ ಎಂಬ ತಪ್ಪು ಕಲ್ಪನೆಯನ್ನು ತೆಗೆದುಹಾಕಿ. ಆದರೆ ಹಾಗೆ ಮಾಡುವುದರಿಂದ, ನಿಮ್ಮ ಕಾರು (Car) ಖಂಡಿತವಾಗಿಯೂ ಡೇಂಜರ್ ನಲ್ಲಿರುತ್ತೆ ಅನ್ನೋದಂತೂ ನಿಜಾ. ಆದುದರಿಂದ ಎಚ್ಚರಿಕೆಯಿಂದ ಇರೋದು ತುಂಬಾನೆ ಮುಖ್ಯ.. 

36

ಕಾರಲ್ಲಿ ಸ್ಯಾನಿಟೈಸರ್ ಬಿಡಬಾರದು ಏಕೆಂದರೆ ಶಾಖದಿಂದಾಗಿ, ಈ ಸ್ಯಾನಿಟೈಜರ್ ಗಳು ಕಾರಿನಲ್ಲಿ ಹರಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಕಾರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಂಕಿಯ ಕಿಡಿ ಇದ್ದರೆ, ಆಗ ಬೆಂಕಿ (Fire) ಹಿಡಿಯಲು ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಸ್ಯಾನಿಟೈಸರ್ ಗೆ ಬೇಗನೆ ಬೆಂಕಿ ಹತ್ತಿಕೊಳ್ಳುತ್ತದೆ.

46

ಈ ಹ್ಯಾಂಡ್ ಸ್ಯಾನಿಟೈಸರ್ ಬಾಟಲಿಗಳು ಅಪಾಯಕ್ಕೆ ಕಾರಣವಾಗಬಹುದು!  
ಯುನೈಟೆಡ್ ಸ್ಟೇಟ್ಸ್ ಅಗ್ನಿಶಾಮಕ ದಳವು ಹೊರಡಿಸಿದ ನೋಟಿಸ್ನಲ್ಲಿ ಕಾರಿನಲ್ಲಿ ಟ್ರಾನ್ಸ್ಪರೆಂಟ್ ಲಿಕ್ವಿಡ್ (Transparent Liquid)ಅನ್ನು ತುಂಬಿದ ಯಾವುದೇ ಪಾರದರ್ಶಕ ಬಾಟಲಿಯು ನಿಮ್ಮ ಕಾರು ಬೇಗನೆ ಬೆಂಕಿ ಹತ್ತಿಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದೆ. ಆದುದರಿಂದ ಎಚ್ಚರಿಕೆ ಇರಲಿ.

56

ನಿಮ್ಮ ಕಾರಿನಲ್ಲಿನ ಬಾಟಲಿಯಲ್ಲಿ ನೀರು (Water) ತುಂಬಿದ್ದರೂ ಸಹ, ಡೇಂಜರ್. ಇದಕ್ಕೆ ಕಾರಣ ರಿಫ್ಲಕ್ಷನ್. ಆದರೆ ನೀವು ನಿಮ್ಮ ಕಾರಿನಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಾಟಲಿಯನ್ನು ಬಿಟ್ಟಾಗ, ಅದರಲ್ಲಿರುವ ಆಲ್ಕೋಹಾಲ್ ಅಪಘಾತದ ಸಾಧ್ಯತೆಯನ್ನು ಅನೇಕ ಪಟ್ಟು ಹೆಚ್ಚಿಸುತ್ತದೆ. ಸೋ ಬಾಟಲಿ ಬಿಡ್ಲೇ ಬೇಡಿ.

66

ಯುಕೆ ಮೂಲದ ವೆಸ್ಟರ್ನ್ ಲೇಕ್ ಫೈರ್ ಬ್ರಿಗೇಡ್ ಸಹ ಎಲ್ಲಾ ಜನರು ಇದರ ಬಗ್ಗೆ ತಿಳಿದಿರುವುದು ಮುಖ್ಯ ಎಂದು ಹೇಳಿದೆ, ಇದರಿಂದ ಅಪಘಾತಗಳು (Accidents) ಸಂಭವಿಸುವ ಮೊದಲು ತಡೆಗಟ್ಟಬಹುದು. ಕೋವಿಡ್ ನಂತರ ಹ್ಯಾಂಡ್  ಸ್ಯಾನಿಟೈಸರ್ ಗಳ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ, ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.

Read more Photos on
click me!

Recommended Stories