ತೆಳ್ಳಗೆ ಅಂತ ಬೇಜಾರಾ? ದಪ್ಪ ಆಗಬೇಕು ಅಂದ್ರೆ ಹೀಗ್ ಮಾಡಿ

First Published | Jun 3, 2022, 1:25 PM IST

ಬೊಜ್ಜು (Obesity) ಅನ್ನೋದು ಒಂದು ಗಂಭೀರ ಸಮಸ್ಯೆ. ಜನರು ಹೆಚ್ಚಾಗಿ ತೂಕ ಕಡಿಮೆ ಮಾಡುವ ಬಗ್ಗೆ ಯೋಚಿಸುತ್ತಾರೆ. ಇನ್ನೂ ಕೆಲವು ಜನರು ತಮ್ಮ ತೆಳ್ಳಗಿನ ಮತ್ತು ದುರ್ಬಲ ದೇಹದಿಂದ ತೊಂದರೆಗೀಡಾಗುತ್ತಾರೆ. ಅಂತಹ ಜನರನ್ನು ಇತರರು ತುಂಬಾ ತಮಾಷೆ ಮಾಡುತ್ತಾರೆ. ಒಣ ಹಪ್ಪಳ ಅಥವಾ ಒಣ ಕಟ್ಟಿಗೆ ಹೀಗೆ ಏನೇನೋ ಹೆಸರುಗಳಿಂದ ಕರೆದು ಕೀಟಲೆ ಮಾಡುತ್ತಾರೆ. ತೂಕವನ್ನು ಹೆಚ್ಚಿಸಲು ಅನೇಕ ಮಾರ್ಗಗಳಿವೆ ಆದರೆ ನೀವು  ಆರೋಗ್ಯಕರವಾಗಿ ಮತ್ತು ತೂಕ ಹೆಚ್ಚಿಸಬೇಕು ಎಂದಾದರೆ ಹಾಲಿನ ಜೊತೆ ಈ ಆಹಾರಗಳನ್ನು ಸೇವಿಸಿ. 

ಹಾಲಿನ(Milk) ಪ್ರಯೋಜನಗಳು

ಹಾಲು ಕ್ಯಾಲೋರಿ, ಪ್ರೋಟೀನ್ ಮತ್ತು ಇತರ ಪೋಷಕಾಂಶಗಳ ಉತ್ತಮ ಮೂಲ. ಹಾಲು ಮತ್ತು ಹಾಲಿನ ಉತ್ಪನ್ನಗಳು ತೂಕ ಹೆಚ್ಚಲು ಸಹಾಯ ಮಾಡುತ್ತೆ. ಕ್ರೀಡಾಪಟುಗಳು, ಬಾಡಿಬಿಲ್ಡರ್ಸ್ ಮತ್ತು ತೆಳ್ಳಗಿನ ಜನರ ತೂಕ ಹೆಚ್ಚಿಸಿಕೊಳ್ಳಲು ಹಾಲು ಸೇವಿಸೋದು ಉತ್ತಮ. ಕೆಲವು ಜನರು ತೂಕ ಹೆಚ್ಚಳಕ್ಕಾಗಿ ಸಿಹಿತಿಂಡಿ ಮೊದಲಾದ ಹೈ ಕ್ಯಾಲೊರಿ ಆಹಾರ ಸೇವಿಸುತ್ತಾರೆ, ಇದು ತಪ್ಪು. ಈ ವಸ್ತುಗಳು ದೇಹದಲ್ಲಿ ಕೆಟ್ಟ ಕೊಬ್ಬನ್ನು ತುಂಬುತ್ತವೆ ಮತ್ತು ಇದರಿಂದ ಪೋಷಕಾಂಶಗಳ (Vitamins) ಕೊರತೆ ಉಂಟಾಗುತ್ತದೆ.

ಹಾಲು ಕೊಬ್ಬು ಮತ್ತು ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುವುದರಿಂದ ತೂಕ  ಹೆಚ್ಚಿಸಲು (Weight gain) ಉತ್ತಮ ಆಯ್ಕೆ. ಆದಾಗ್ಯೂ, ಕೇವಲ ಹಾಲನ್ನು ಸೇವಿಸುವುದರಿಂದ, ತೂಕ ಹೆಚ್ಚಾಗುವುದಿಲ್ಲ. ಹಾಲಿನೊಂದಿಗೆ ಕೆಲವು ವಸ್ತುಗಳನ್ನು ಸೇವಿಸಬಹುದು, ಇದು ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ.

Tap to resize

ಹಾಲಿನೊಂದಿಗೆ ಪ್ರೋಟೀನ್

ಪ್ರೋಟೀನ್ ಶೇಕ್ ಗಳು(Protein shake) ವ್ಯಕ್ತಿಯ ತೂಕವನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಎಕ್ಸರ್ಸೈಜ್ ನಂತರ ತಕ್ಷಣ ಪ್ರೊಟೀನ್ ಶೇಕ್ ಕುಡಿದರೆ, ಸ್ನಾಯುಗಳ ಬೆಳವಣಿಗೆಗೆ ಶೇಕ್ ಹೆಚ್ಚು ಪರಿಣಾಮಕಾರಿ. ಆದಾಗ್ಯೂ, ಶೇಕ್ ನಲ್ಲಿ ಸಕ್ಕರೆಯನ್ನು ಬಳಸಬೇಡಿ ಎಂಬುದನ್ನು ನೆನಪಿನಲ್ಲಿಡಿ.

ಹಾಲು ಮತ್ತು ಡ್ರೈ ಫ್ರೂಟ್ ಗಳು (Dry fruits)

ಡ್ರೈ ಫ್ರೂಟ್ ಗಳು ಪೋಷಕಾಂಶಗಳು ಮತ್ತು ಕ್ಯಾಲೊರಿಗಳಿಂದ ಸಮೃದ್ಧವಾಗಿವೆ, ಕಾಲು ಕಪ್ ಡ್ರೈ ಕ್ರಾನ್ಬೆರಿಗಳು ಸುಮಾರು 130 ಕ್ಯಾಲೋರಿಗಳನ್ನು ಹೊಂದಿರುತ್ತವೆ. ಹಾಲು-ಒಣದ್ರಾಕ್ಷಿ, ಹಾಲು-ಬಾದಾಮಿಯಂತಹ ಸಂಯೋಜನೆಗಳು ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ ದೇಹವನ್ನು ಅನೇಕ ಗಂಭೀರ ರೋಗಗಳಿಂದ ರಕ್ಷಿಸುತ್ತವೆ.

ಹಾಲು ಮತ್ತು ಮೊಟ್ಟೆ(Egg)

ತೂಕವನ್ನು ಹೆಚ್ಚಿಸಲು ನೀವು ಪ್ರತಿದಿನ ಬೆಳಿಗ್ಗೆ ತಿಂಡಿಗೆ ಹಾಲಿನೊಂದಿಗೆ ಮೊಟ್ಟೆ ತಿನ್ನಬೇಕು. ಹಾಲು ಮತ್ತು ಮೊಟ್ಟೆಗಳೆರಡೂ ಪ್ರೋಟೀನ್ ಭಂಡಾರವಾಗಿದೆ. ಮೊಟ್ಟೆಗಳು ಪ್ರೋಟೀನ್ ಜೊತೆಗೆ ಆರೋಗ್ಯಕರ ಕೊಬ್ಬುಗಳು ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುತ್ತವೆ.

ಹಾಲು ಮತ್ತು ಓಟ್ ಮೀಲ್(Oat milk)

ಹಾಲು ಮತ್ತು ಓಟ್ ಮೀಲ್ ಎರಡೂ ಪ್ರೋಟೀನ್ ನ ಉತ್ತಮ ಮೂಲ. ಇದಲ್ಲದೆ, ಓಟ್ ಮೀಲ್ ಫೈಬರ್ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ತೂಕ ಹೆಚ್ಚಿಸಲು ಸಿಹಿ ಓಟ್ ಮೀಲ್ ತಯಾರಿಸಿ ಮತ್ತು ಅದರಲ್ಲಿ ಬಾಳೆಹಣ್ಣು ಮತ್ತು ಡ್ರೈ ಫ್ರೂಟ್ ಗಳನ್ನು ಹಾಲಿನೊಂದಿಗೆ ಬೆರೆಸಿ.

ಹಾಲು ಮತ್ತು ಜೇನುತುಪ್ಪ(Honey)

ಹಾಲು ಮತ್ತು ಜೇನುತುಪ್ಪಗಳೆರಡೂ ಸಕ್ಕರೆಯ ಉತ್ತಮ ಮೂಲವಾಗಿರುವುದರಿಂದ ತೂಕ ಹೆಚ್ಚಿಸಲು  ಜೇನುತುಪ್ಪದೊಂದಿಗೆ ಹಾಲನ್ನು ಸೇರಿಸಿ ಕುಡಿಯಬಹುದು. ಇದಲ್ಲದೆ, ಹಾಲಿನಲ್ಲಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಗಳಂತಹ ಅನೇಕ ಇತರ ಪೋಷಕಾಂಶಗಳಿವೆ, ಇದು ಸ್ನಾಯುಗಳ ಶಕ್ತಿ ಹೆಚ್ಚಿಸುವ  ಕೆಲಸ ಮಾಡುತ್ತದೆ.

ಹಾಲು ಮತ್ತು ಖರ್ಜೂರ(Dates)

ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಖರ್ಜೂರವು ಕ್ಯಾಲ್ಸಿಯಂ, ಫೈಬರ್ ಮತ್ತು ವಿಟಮಿನ್ ಸಿಯನ್ನು ಹೊಂದಿರುತ್ತದೆ, ಇದು ಆರೋಗ್ಯಕ್ಕೆ ಉತ್ತಮ. ಒಣಗಿದ ಖರ್ಜೂರವನ್ನು ಹಾಲಿನೊಂದಿಗೆ ಬಳಸಿದರೆ, ಅದು ತೂಕ ಹೆಚ್ಚಾಗಲು ತುಂಬಾ ಪರಿಣಾಮಕಾರಿ. ಪ್ರತಿದಿನ ಬೆಳಿಗ್ಗೆ, ಖರ್ಜೂರವನ್ನು ಹಾಲಿನಲ್ಲಿ ನೆನೆಸಿ ಕುದಿಸಿ ಕುಡಿಯುವ ಮೂಲಕ, ತೂಕವು ವೇಗವಾಗಿ ಹೆಚ್ಚಾಗುತ್ತದೆ ಮತ್ತು ಅನೇಕ ರೋಗಗಳನ್ನು ಸಹ ತೆಗೆದುಹಾಕಲಾಗುತ್ತದೆ.

ಹಾಲು ಮತ್ತು ಒಣದ್ರಾಕ್ಷಿ(Dry grapes)

ಒಣದ್ರಾಕ್ಷಿಯ ಎಲ್ಲಾ ಪೋಷಕಾಂಶಗಳ ಪ್ರಯೋಜನವನ್ನು ಪಡೆಯಲು ಬಯಸಿದರೆ, ಅವುಗಳನ್ನು ಒಂದು ಕಪ್ ಪೂರ್ಣ ಕೊಬ್ಬಿನ ಹಾಲಿನಲ್ಲಿ ರಾತ್ರಿಯಿಡೀ ನೆನೆಸಿ ಮರುದಿನ ಸೇವಿಸಿ. ಸಕ್ಕರೆ ಮುಕ್ತ ನಟ್ ಬಟರ್ ನಲ್ಲಿ ಬೆರೆಸಿ ಒಣದ್ರಾಕ್ಷಿಗಳನ್ನು ತಿನ್ನಬಹುದು. ಇದರಿಂದ ತೂಕ ಹೆಚ್ಚಾಗಬಹುದು.

ಹಾಲು ಮತ್ತು ಬಾಳೆಹಣ್ಣು(Banana)

ತೂಕ ಹೆಚ್ಚಿಸಲು, ಒಂದು ಲೋಟ ಅಧಿಕ ಹಾಲನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಎರಡು ಬಾಳೆಹಣ್ಣುಗಳನ್ನು ಸೇರಿಸಿ. ಇವುಗಳನ್ನು ಮಿಶ್ರಣ ಮಾಡಿ, ಇದನ್ನು ಒಂದು ಲೋಟಕ್ಕೆ ಹಾಕಿ ಮತ್ತು ಅದಕ್ಕೆ ಜೇನುತುಪ್ಪ ಮತ್ತು ಡ್ರೈ ಫ್ರೂಟ್ ಸೇರಿಸಿ.  ಹಸುವಿನ ಹಾಲಿನ ಬದಲಿಗೆ ಬಾದಾಮಿ ಹಾಲನ್ನು ಸಹ ಬಳಸಬಹುದು. ಬಾದಾಮಿ ಹಾಲಿನಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ ಮತ್ತು  ದೈನಂದಿನ ಕ್ಯಾಲೋರಿ ಸೇವನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
 

Latest Videos

click me!