ನೀವು ಕೂಡ ಪದೇ ಪದೇ ಮೂಗಿಗೆ ಬೆರಳು ಹಾಕ್ತೀರಾ? ಭಾರಿ ಡೇಂಜರ್

First Published | Nov 9, 2022, 5:14 PM IST

ಒಬ್ಬೊಬ್ಬರಿಗೆ ಒಂದೊಂದು ಕೆಟ್ಟ ಅಭ್ಯಾಸಗಳಿರುತ್ತವೆ. ಕೆಲವರಿಗೆ ಉಗುರು ಕಚ್ಚುವ ಅಭ್ಯಾಸ ಇದ್ದರೆ, ಇನ್ನೂ ಕೆಲವರಿಗೆ ಮೂಗಿಗೆ ಬೆರಳು ಹಾಕುವ ಅಭ್ಯಾಸ ಇರುತ್ತದೆ. ಇದನ್ನು ನೀವು ಸ್ನಾನ ಮಾಡುವಾಗ ಮಾಡಿದರೆ ಸಮಸ್ಯೆ ಇಲ್ಲ, ಆದರೆ ದಿನದಲ್ಲಿ ಹೆಚ್ಚಿನ ಸಮಯ ಮೂಗಿಗೆ ಬೆರಳು ಹಾಕಿಕೊಂಡು ಇದ್ದರೆ ಇದರಿಂದ ತುಂಬಾ ಸಮಸ್ಯೆ ಉಂಟಾಗುತ್ತೆ. ಪದೇ ಪದೇ ಮೂಗಿಗೆ ಬೆರಳು ಹಾಕುವ ಅಭ್ಯಾಸದ ಕೆಟ್ಟ ಪರಿಣಾಮಗಳ ಬಗ್ಗೆ ಇಲ್ಲಿ ವಿವರವಾಗಿ ಹೇಳಲಿದ್ದೇವೆ, ಅದರ ನಂತರ ನೀವು ಖಂಡಿತವಾಗಿಯೂ ಈ ಅಭ್ಯಾಸವನ್ನು ಸುಧಾರಿಸುತ್ತೀರಿ.

ಎಲ್ಲರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರಲ್ಲೂ ಒಂದು ಕೆಟ್ಟ ಗುಣ ಇದ್ದೇ ಇರುತ್ತದೆ, ಅದರಲ್ಲಿ ಮೂಗಿಗೆ ಬೆರಳು ಹಾಕುವುದು (nose picking) ಸಹ ಒಂದು. ಇದು ತುಂಬಾ ಕೆಟ್ಟದಾಗಿ ಕಾಣುತ್ತದೆ. ಆದರೆ ಈ ಅಭ್ಯಾಸವು ಹೇಗಿದೆಯೆಂದರೆ ಅದನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಆದರೆ ನಿಮ್ಮ ಈ ತಪ್ಪು ಅಭ್ಯಾಸವು ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂದು ನಿಮಗೆ ಗೊತ್ತಿರಲಿಕ್ಕಿಲ್ಲ. 

ಇಂದು ಈ ಲೇಖನದಲ್ಲಿ ಮೂಗಿಗೆ ಪದೇ ಪದೇ ಬೆರಳು ಹಾಕುವಂತಹ ಅಭ್ಯಾಸದ ಕೆಟ್ಟ ಪರಿಣಾಮಗಳ (bad effects) ಬಗ್ಗೆ ವಿವರವಾಗಿ ಹೇಳುತ್ತೇವೆ, ಅದರ ನಂತರ ನೀವು ಖಂಡಿತವಾಗಿಯೂ ಈ ಅಭ್ಯಾಸವನ್ನು ಸುಧಾರಿಸುತ್ತೀರಿ. ಹಾಗಿದ್ರೆ ಬನ್ನಿ ಮೂಗಿಗೆ ಬೆರಳು ಹಾಕೋದ್ರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಅನ್ನೋದನ್ನು ನೋಡೋಣ.

Latest Videos


ಮೂಗಿಗೆ ಬೆರಳು ಹಾಕುವುದರ ಅನಾನುಕೂಲತೆಗಳು
- ನೀವು ಮೂಗಿಗೆ ಬೆರಳನ್ನು ಪದೇ ಪದೇ ಹಾಕುತ್ತಿದ್ದರೆ, ನಿಮ್ಮ ಮೂಗಿನ ಅಂಗಾಂಶವನ್ನು ಕತ್ತರಿಸಬಹುದು. ಇದು ಮೂಗಿನ ಸೋಂಕುಗಳಿಗೆ (nose infection) ಕಾರಣವಾಗಬಹುದು. ಈ ಕಾರಣದಿಂದಾಗಿ ನ್ಯುಮೋನಿಯಾದ ಅಪಾಯ ಉಂಟಾಗುವ ಸಾಧ್ಯತೆ ಇದೆ. ಆದುದರಿಂದ ಇದನ್ನು ಮಾಡದೇ ಇದ್ದರೆ ಉತ್ತಮ. 
 

- ಮೂಗಿಗೆ ಪದೇ ಪದೇ ಬೆರಳು ಹಾಕುವುದರಿಂದ ಅದರಲ್ಲಿ ಊತ ಉಂಟಾಗಬಹುದು ಮತ್ತು ಇದು ಮೂಗಿನ ಹೊಳ್ಳೆಗಳನ್ನು ಕಿರಿದಾಗಿಸಬಹುದು. ಇದು ಕೊಳಕು ಬ್ಯಾಕ್ಟೀರಿಯಾಗಳು (bacteria) ಕೈಗಳ ಮೇಲೆ ಕುಳಿತುಕೊಳ್ಳಲು ಕಾರಣವಾಗುತ್ತದೆ, ಇದು ಇತರ ಸೋಂಕಿತ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.  

- ಮೂಗಿಗೆ ಪದೇ ಪದೇ ಬೆರಳು ಹಾಕುತ್ತಿದ್ದರೆ ಅದರಲ್ಲಿ ಗಾಯ ಉಂಟಾಗುವ ಸಾಧ್ಯತೆ ತುಂಬಾನೆ ಹೆಚ್ಚಿದೆ. ಈ ಕಾರಣದಿಂದಾಗಿ ನೋವು ಉಂಟಾಗಬಹುದು. ಇದು ಮೂಗಿನ ಒಳಗೆ ಗುಳ್ಳೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಇದನ್ನು ಮಾಡದಂತೆ ನಿಮ್ಮನ್ನು ನೀವು ತಡೆಯಿರಿ.

ಇದಲ್ಲದೆ,  ಪದೇ ಪದೇ ಮೂಗಿಗೆ ಬೆರಳು ಹಾಕೋದರಿಂದ ಎರಡು ಮೂಗಿನ ಹೊಳ್ಳೆಗಳ ನಡುವಿನ ತಡೆಗೋಡೆ ಸೆಪ್ಟಮ್ ನಲ್ಲಿ ರಂಧ್ರವನ್ನು ಉಂಟುಮಾಡಬಹುದು. ಇದನ್ನು ರಂಧ್ರಯುಕ್ತ ಸೆಪ್ಟಮ್ ಎಂದು ಕರೆಯಲಾಗುತ್ತದೆ. ಇಂದಿನಿಂದ, ನೀವು ಈ ಅಭ್ಯಾಸವನ್ನು ಸಾಧ್ಯವಾದಷ್ಟು ಬೇಗ ಸುಧಾರಿಸಬೇಕು.

ಈ ಅಭ್ಯಾಸವನ್ನು ದೂರ ಮಾಡೋದು ಹೇಗೆ? 
ಈ ಅಭ್ಯಾಸವನ್ನು ಜನರು ಹೆಚ್ಚಾಗಿ ತಮ್ಮ ಮೂಗನ್ನು ಹೈಡ್ರೇಟ್ (hydrate nose) ಮಾಡುವ ಮೂಲಕ ಸುಧಾರಿಸಬಹುದು. ಸಲೈನ್ ನಸಲ್ ಸ್ಪ್ರೇಗಳನ್ನು ಬಳಸುವ ಮೂಲಕ ಈ ಸಮಸ್ಯೆಯನ್ನು ಸುಧಾರಿಸಬಹುದು. ಆದರೆ ಇದನ್ನು ಅತಿಯಾಗಿ ಬಳಸಬೇಡಿ. ಕೆಲವು ಸಂದರ್ಭಗಳಲ್ಲಿ ನೀವು ಹೆಚ್ಚು ಸ್ಪ್ರೇ ಬಳಸುವಾಗ ಅವು ನಿಮ್ಮ ಮೂಗನ್ನು ಇನ್ನಷ್ಟು ಒಣಗಿಸಬಹುದು.

ಇನ್ನೂ ಎಣ್ಣೆಯನ್ನು ಬಳಸುವ ಮೂಲಕ ನೀವು ಮೂಗು ಡ್ರೈ (dry nose) ಆಗೋದನ್ನು ತಪ್ಪಿಸಬಹುದು. ಅದಕ್ಕಾಗಿ ತೆಂಗಿನ ಎಣ್ಣೆಯನ್ನು ಬಳಸಬಹುದು. ತೆಂಗಿನ ಎಣ್ಣೆಯನ್ನು ಸ್ವಲ್ಪ ತೆಗೆದುಕೊಂಡು ಅದನ್ನು ಮೂಗಿನ ತಡೆಗೋಡೆಯ ಮೇಲೆ ಹಚ್ಚಬೇಕು. ಇದರಿಂದ ಮೂಗು ಡ್ರೈ ಆಗೋದಿಲ್ಲ. ಅಲ್ಲದೇ ಪದೇ ಪದೇ ಮೂಗಿಗೆ ಬೆರಳು ಹಾಕುವ ಸಂದರ್ಭ ಕೂಡ ಬರೋದಿಲ್ಲ.

click me!