ಈ ಸಮಸ್ಯೆ ನಿಮಗಿದ್ದರೆ ಹೂಕೋಸು ಸೇವಿಸೋದು ಭಾರಿ ಡೇಂಜರ್!

First Published Dec 23, 2022, 6:44 PM IST

ಹೂಕೋಸು ಅಥವಾ ಕಾಲಿಫ್ಲವರ್ ನ್ನು ಹೆಚ್ಚಿನ ಜನರು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ನಿಮಗೆ ಗೊತ್ತಾ? ಹೂಕೋಸನ್ನು ಕೆಲವರು ತಿನ್ನಬಾರದು, ಯಾಕೆಂದ್ರೆ ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹಾಗಾಗಿ ಹೂಕೋಸು ತಿನ್ನೋದರಿಂದ ಯಾವೆಲ್ಲಾ ರೋಗಗಳ ಅಪಾಯ ಇದೆ ಎಂದು ಇಲ್ಲಿ ತಿಳಿದುಕೊಳ್ಳೋಣ.

ಹೂಕೋಸು(Cauliflower) ಒಂದು ತರಕಾರಿಯಾಗಿದ್ದು, ಇದು ಪ್ರತಿ ಋತುವಿನಲ್ಲಿಯೂ ಕಂಡುಬರುತ್ತದೆ. ಚಳಿಗಾಲದಲ್ಲಿ ಇದನ್ನು ಹೆಚ್ಚು ತಿನ್ನಲಾಗುತ್ತೆ ಯಾಕಂದ್ರೆ ಈ ಋತುವಿನಲ್ಲಿ ಕಾಲಿಫ್ಲವರ್ ಉತ್ಪಾದನೆಯೂ ಹೆಚ್ಚಾಗಿರುತ್ತೆ. ಹೂಕೋಸಿನಲ್ಲಿ  ಅನೇಕ ರೀತಿಯ ಅಡುಗೆ ಮತ್ತು ಪರಾಠಾಗಳನ್ನು ಸಹ ಮಾಡಲಾಗುತ್ತೆ. ಇದು ತಿನ್ನಲು ತುಂಬಾ ರುಚಿಕರವಾಗಿರುತ್ತೆ. ಆದರೆ ಈ ತರಕಾರಿಯನ್ನು ಕೆಲವರು ತಿನ್ನಬಾರದು, ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಯಾರು ಕಾಲಿಫ್ಲವರ್ ಸೇವಿಸಬಾರದು ಅನ್ನೋದರ ಬಗ್ಗೆ ತಿಳಿಯೋಣ. 

ಹೂಕೋಸಿನ ಅನಾನುಕೂಲಗಳು ಯಾವುವು?: ಹೂಕೋಸು ಸೇವನೆಯ ಕೆಲವು ಅಡ್ಡಪರಿಣಾಮಗಳಿವೆ. ಇದು ಸಂಕೀರ್ಣ ಕಾರ್ಬೋಹೈಡ್ರೇಟ್ ಗಳನ್ನು(Carbohydrate) ಹೊಂದಿರುತ್ತದೆ, ಅವು ಜೀರ್ಣಾಂಗವ್ಯೂಹದಲ್ಲಿ ಸಂಪೂರ್ಣವಾಗಿ ವಿಘಟನೆಯಾಗುವುದಿಲ್ಲ. ಈ ಕಾರ್ಬೋಹೈಡ್ರೇಟುಗಳು ಕರುಳಿನ ಬ್ಯಾಕ್ಟೀರಿಯಾಗಳಿಂದ ತಿನ್ನಲ್ಪಡುತ್ತವೆ ಮತ್ತು ಹೊಟ್ಟೆ ಉಬ್ಬರ ಮತ್ತು ವಾಸನೆಯುಕ್ತ ಗ್ಯಾಸ್ ಬಿಡುಗಡೆಗೆ ಕಾರಣವಾಗಬಹುದು.

-ಹೂಕೋಸಿನಲ್ಲಿ  ಕ್ಯಾಲ್ಸಿಯಂ(Calcium), ರಂಜಕ, ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಕಬ್ಬಿಣದ ಅಂಶಗಳ ಜೊತೆಗೆ, ವಿಟಮಿನ್ ಎ, ಬಿ, ಸಿ, ಅಯೋಡಿನ್ ಮತ್ತು ಪೊಟ್ಯಾಸಿಯಮ್ ಸಹ ಸಣ್ಣ ಪ್ರಮಾಣದಲ್ಲಿವೆ .ಹಾಗಾಗಿ ಯಾವುದು ಕೂಡ ದೇಹಕ್ಕೆ ಅತಿಯಾಗಬಾರದು.  

- ಹೂಕೋಸನ್ನು ಅತಿಯಾಗಿ ತಿನ್ನೋದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದು.  ಇದಲ್ಲದೆ, ಗ್ಯಾಸ್(Gas)  ಸಮಸ್ಯೆಯೂ ಆಗಬಹುದು. ಹಾಗಾಗಿ ಯೂರಿಕ್ ಆಮ್ಲ ಹೆಚ್ಚಿರುವವರು ಹೂಕೋಸನ್ನು ಸೇವಿಸಬಾರದು.ನಿಮಗೆ ಕಿಡ್ನಿ ಸಮಸ್ಯೆ ಇದ್ರೆ ನೀವೂ ಸಹ ಇದನ್ನು ತಿನ್ನೋದನ್ನು ಅವಾಯ್ಡ್ ಮಾಡಿ.

- ಥೈರಾಯ್ಡ್ ನಿಂದ(Thyroid) ಬಳಲುತ್ತಿರುವ ಜನರು ಹೂಕೋಸನ್ನು ಸೇವಿಸಬಾರದು. ಇದು ಅವರ ಥೈರಾಯ್ಡ್ ಸಮಸ್ಯೆ ಹೆಚ್ಚಿಸಬಹುದು. ಗರ್ಭಾವಸ್ಥೆಯಲ್ಲಿಯೂ ಹೂಕೋಸನ್ನು ಸೇವಿಸಬಾರದು, ಇದು ಹುಟ್ಟಲಿರುವ ಮಗುವಿಗೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ.
 

ಹೂಕೋಸಿನ ಪ್ರಯೋಜನಗಳು ಯಾವುವು?: ನೀವು ಹೃದ್ರೋಗಿಯಾಗಿದ್ದರೆ(Heart problem), ಹೂಕೋಸು ಸೇವಿಸೋದು ಒಳ್ಳೆಯದು. ಯಾಕಂದ್ರೆ  ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಹೂಕೋಸಿನಲ್ಲಿರುವ ವಿಟಮಿನ್ ಮೂಳೆಗಳನ್ನು ಬಲಪಡಿಸುತ್ತೆ.

ನಿಮ್ಮ ತೂಕ(Weight) ಹೆಚ್ಚಾಗಿದ್ದರೆ ಹೂಕೋಸು ಸೇವಿಸಬೇಕು. ಇದು ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿದೆ, ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತೆ. ಇದಲ್ಲದೇ ಕಾಲಿಫ್ಲವರ್ ಸೇವಿಸೋದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಆದರೆ ನಿಮಗೆ ಮೇಲೆ ತಿಳಿಸಿದ ಸಮಸ್ಯೆ ಇದ್ದರೆ, ಇದನ್ನು ಅವಾಯ್ಡ್ ಮಾಡೋದು ಉತ್ತಮ. 

click me!