ರೂಮಿಗೆ ಹೋಗ್ತೀರಿ, ಆದ್ರೆ ಯಾಕೆ ಹೋದೆ ಅಂತಾನೆ ನೆನಪಿರಲ್ಲ… ನಿಮಗೂ ಹೀಗಾಗುತ್ತಾ?

First Published | Dec 22, 2022, 5:41 PM IST

ವಯಸ್ಸಾದಂತೆ ಅಲ್ಲ, ಇತ್ತೀಚಿನ ದಿನಗಳಲ್ಲಿ ನಾವು ಸಣ್ಣ ಪುಟ್ಟ ವಿಷಯಗಳನ್ನು ಸಹ ಮರೆಯುತ್ತಿದ್ದೇವೆ. ಏನೋ ಮಾಡಲು ಹೋಗ್ತೀವಿ, ಆದ್ರೆ ಏನು ಅನ್ನೋದನ್ನೆ ಮರೆಯುತ್ತೇವೆ. ಯಾಕೆ ಈಗಾಗುತ್ತೆ? ಇದೇನು ಮರೆಯುವ ಕಾಯಿಲೆಯ ಲಕ್ಷಣವೇ ಎಂದು ತಲೆಕೆಡಿಸಿಕೊಳ್ಳಬೇಡಿ. ಇದನ್ನು ಡೋರ್ ವೇ ಎಫೆಕ್ಟ್ ಎನ್ನಲಾಗುತ್ತೆ. ಬನ್ನಿ ಈ ಕುರಿತು ಮಾಹಿತಿ ತಿಳಿಯೋಣ. 

ನಾವೆಲ್ಲರೂ ಒಂದಲ್ಲ ಒಂದು ಬಾರಿ ಈ ಸಮಸ್ಯೆ ಎದುರಿಸಿದ್ದೇವೆ. ಕೀ ತರಲು ರೂಮ್ ಗೆ ಹೋಗುತ್ತೀರಿ, ಅಲ್ಲಿ ಹೋದ ಮೇಲೆ ಯಾಕೆ ನಾನು ರೂಮ್ ಗೆ ಬಂದೆ ಎಂದು ನಿಮ್ಮನ್ನೇ ನೀವು ಪ್ರಶ್ನಿಸುತ್ತೀರಿ, ಅಲ್ಲದೇ. ಫ್ರಿಡ್ಜ್  ಡೋರ್ ಓಪನ್ ಮಾಡುತ್ತೀರಿ. ಆದರೆ ಅಲ್ಲಿಂದ ಏನು ತೆಗೋಳೋಕೆ ಬಂದ್ರಿ ಅನ್ನೋದು ಮಾತ್ರ ನೆನಪಾಗೋದೆ ಇಲ್ಲ. ಅಷ್ಟೇ ಯಾಕೆ ಫ್ರೆಂಡ್ಸ್ ಜೊತೆಗೋ ಅಥವಾ ಫ್ಯಾಮಿಲಿ ಜೊತೆಗೊ ಏನನ್ನೋ ಹೇಳಲು ತುಂಬಾ ಅವಸರ ಅವಸರದಲ್ಲಿ ಬಂದಿರುತ್ತೀರಿ…. ಆದರೆ ಅಲ್ಲಿ ಬಂದ ಮೇಲೆ ಮಾತ್ರ ಏನು ಹೇಳಬೇಕು ಅನ್ನೋದೆ ನೆನಪಿರೋದಿಲ್ಲ. ಈ ಅನುಭವ ನಿಮಗೂ ಆಗಿದೆ ಅಲ್ವಾ? 

ಈ ತಪ್ಪುಗಳು ಮುಜುಗರವನ್ನುಂಟುಮಾಡಬಹುದಾದರೂ, ಅವು ಸಾಮಾನ್ಯವೂ ಆಗಿವೆ. ಇದನ್ನು 'ಡೋರ್ ವೇ ಎಫೆಕ್ಟ್'  (doorway effect) ಎಂದು ಕರೆಯಲಾಗುತ್ತದೆ, ಮತ್ತು ಇದು ನಮ್ಮ ಮನಸಸ್ಸು ಹೇಗೆ ಸಂಘಟಿತವಾಗಿವೆ ಎಂಬುದರ ಕೆಲವು ಪ್ರಮುಖ ಲಕ್ಷಣಗಳನ್ನು ತಿಳಿಸುತ್ತವೆ. ಇದನ್ನು ಅರ್ಥಮಾಡಿಕೊಳ್ಳುವುದರಿಂದ ನಮ್ಮ ಸಮಸ್ಯೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತೆ. 

Tap to resize

ನಿಮಗೆ ವಯಸ್ಸಾಗುತ್ತಿಲ್ಲ, ನೀವು ನಿಮ್ಮ ಸ್ಮರಣೆಯನ್ನು ಕಳೆದುಕೊಳ್ಳುತ್ತಿಲ್ಲ, ಮತ್ತು ನಿಮ್ಮ ಬ್ರೈನ್ ಫೇಡ್ ಕ್ಷಣವು ನೀವು ಯೋಚಿಸುವಷ್ಟು ಸಿಂಪಲ್ ಆಗಿಲ್ಲ. ಈ ಬ್ರೈನ್-ಫೇಡ್ ಸಮಸ್ಯೆಗೆ 'ಡೋರ್ ವೇ ಎಫೆಕ್ಟ್' ಎಂದು ಕರೆಯಲಾಗುತ್ತೆ. ನಾವು ಯಾವುದೇ ವಿಷ್ಯದ ಬಗ್ಗೆ ಸರಿಯಾಗಿ ಫೋಕಸ್ (not focusing) ಮಾಡಲು ಸಾಧ್ಯವಾಗದೇ ಇದ್ದಾಗ ಈ ಸಮಸ್ಯೆ ಕಂಡು ಬರುತ್ತೆ. 

ಅಂತಹ ಮರೆಯುವಿಕೆ ಏಕೆ ಸಂಭವಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ: ನಾವು ಆ ವಿಷಯದ ಬಗ್ಗೆ ಸಾಕಷ್ಟು ಗಮನ ಹರಿಸದೇ ಇದ್ದಾಗ, ಅಥವಾ ಹೆಚ್ಚು ಸಮಯದ ಬಳಿಕ ಆ ವಸ್ತುವನ್ನು ಹುಡುಕಲು ಬಂದಾಗ, ಅಥವಾ ಅದು ಅದು ಅಷ್ಟೊಂದೇನು ಮುಖ್ಯವಾಗಿಲ್ಲದೇ ಇದ್ದಾಗ ಇದು ಸಂಭವಿಸುತ್ತೆ. ಆದರೆ ನೊಟ್ರೆ ಡೇಮ್ ವಿಶ್ವವಿದ್ಯಾಲಯದ ಸಂಶೋಧಕರ ತಂಡದಿಂದ  ಸಂಪೂರ್ಣ ವಿಭಿನ್ನ ಕಲ್ಪನೆ ಹೊರ ಬಿದ್ದಿದೆ, ಈ ಮರೆತು ಹೋಗಲು ವಿವಿಧ ಕಾರಣಗಳಿವೆ ಎಂದು ಅಲ್ಲಿನ ಸಂಶೋಧಕರು ತಿಳಿಸಿದ್ದಾರೆ. 

ಕೆಲವೊಮ್ಮೆ 'ಸ್ಥಳ ನವೀಕರಣ ಪರಿಣಾಮ' (location updating effect) ಕೂಡ ಮರೆತು ಹೋಗುವಂತೆ ಮಾಡುತ್ತೆ. ಅಂದರೆ, ನೀವು ಒಂದು ಕಡೆಯಿಂದ ಬೇರೆ ಕಡೆಗೆ ಹೋದಾಗ ಅಲ್ಲಿ ಹೊಸ ವಸ್ತುಗಳನ್ನು ನೋಡುವುದರಿಂದ ಹಳೆಯ ವಸ್ತುಗಳನ್ನು ಮರೆಯುವ ಸಾಧ್ಯತೆ ಹೆಚ್ಚಾಗಿರುತ್ತೆ ಎಂದು ಸಂಶೋಧನೆ ತಿಳಿಸಿದೆ. ಕೆಲವು ಜನರು ದ್ವಾರದ ಮೂಲಕ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಹಾದು ಹೋಗುವಾಗ ವಿಷಯಗಳನ್ನು ಮರೆತು ಬಿಡುತ್ತಾರೆ. ಹಳೆಯ ಕೋಣೆಯ ನೆನಪುಗಳು ಹೊಸ ಕೋಣೆಯಲ್ಲಿ ಪ್ರಸ್ತುತವಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಬಾಗಿಲಿನ ಮೂಲಕ ಹಾದು ಹೋದ ನಂತರ ಮೆದುಳು ರಿಫ್ರೆಶ್ (mind refresh) ಆಗುವುದರಿಂದ ಜನರು ವಿಷಯಗಳನ್ನು ಮರೆತುಬಿಡುತ್ತಾರೆ ಎಂದು  ನೊಟ್ರೆ ಡೇಮ್ ವಿಶ್ವವಿದ್ಯಾಲಯದ ಸಂಶೋಧಕರು 2011 ರಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡು ಹಿಡಿದಿದ್ದಾರೆ, ಆದುದರಿಂದ ಅದನ್ನು 'ಡೋರ್ ವೇ ಎಫೆಕ್ಟ್' ಎನ್ನಲಾಗುತ್ತೆ. 

ಬಿಎಂಸಿ ಸೈಕಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು, 'ಡೋರ್ ವೇ ಎಫೆಕ್ಟ್' (doorway effect) ನೈಜವಾಗಿದ್ದರೂ, ನಿಮ್ಮ ಮೆದುಳು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತಿರುವಾಗ ಮಾತ್ರ ಅದು ಸಂಭವಿಸುತ್ತದೆ ಎಂದು ಕಂಡುಹಿಡಿದಿದೆ. ಇಲ್ಲವಾದರೆ ನೀವು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತೆ ಎಂದು ತಿಳಿದು ಬಂದಿದೆ. 

ಈ ಸಂಶೋಧನೆಯಲ್ಲಿ ಅಂತಹ ಮರೆತು ಹೋಗುವ ಪರಿಣಾಮವು ಭೌತಿಕ ಗಡಿಗಳಲ್ಲಿ (ಉದಾಹರಣೆಗೆ, ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಬಾಗಿಲಿನ ಮೂಲಕ ಚಲಿಸುವುದು) ಮತ್ತು ಆಧ್ಯಾತ್ಮಿಕ ಗಡಿಗಳು (ಉದಾಹರಣೆಗೆ, ದ್ವಾರದ ಮೂಲಕ ಹಾದು ಹೋಗುವುದನ್ನು ಕಲ್ಪಿಸಿಕೊಳ್ಳುವುದು, ಅಥವಾ ಕಂಪ್ಯೂಟರ್‌ನಲ್ಲಿ ಒಂದು ಡೆಸ್ಕ್ಟಾಪ್ ವಿಂಡೋ ದಿಂದ ಇನ್ನೊಂದಕ್ಕೆ ಚಲಿಸುವಾಗ) ಸಂಭವಿಸುತ್ತದೆ ಎಂದು ಸೂಚಿಸುತ್ತದೆ. ತಮ್ಮ ಅಧ್ಯಯನದಲ್ಲಿ, ಅವರು ವಾಸ್ತವಿಕ ಮತ್ತು ಭೌತಿಕ ಪರಿಸರಗಳನ್ನು ಬಳಸಿಕೊಂಡು ಈ ಪರಿಣಾಮವನ್ನು ಪರಿಕಲ್ಪಿತವಾಗಿ ಪುನರಾವರ್ತಿಸುವ ಗುರಿಯನ್ನು ಹೊಂದಿದ್ದರು.

ಈ ಸಂಶೋಧನೆಯಲ್ಲಿ ಸ್ಪರ್ಧಿಗಳಲ್ಲಿ 'ಡೋರ್ ವೇ ಎಫೆಕ್ಟ್'  ಸಂಭವಿಸಲು ಪ್ರಾರಂಭಿಸಿತು ಎಂದು ಸಂಶೋಧಕರು ಕಂಡುಕೊಂಡರು. ಸ್ಪರ್ಧಿಗಳು ವಿಷಯಗಳನ್ನು ಮರೆಯುತ್ತಿದ್ದರು. ಸ್ಪರ್ಧಿಗಳ ಮೆಮೊರಿಯನ್ನು ಓವರ್‌ಲೋಡ್ ಮಾಡುವುದರಿಂದ ಅವರು 'ಡೋರ್ ವೇ ಎಫೆಕ್ಟ್'ಗೆ ಹೆಚ್ಚು ಒಳಗಾಗುತ್ತಾರೆ ಎಂದು ತಿಳಿದು ಬಂತು.

ಒಟ್ಟಿನಲ್ಲಿ ಹೇಳೋದೇನೆಂದರೆ ನಿಮ್ಮ ಮನಸ್ಸು ಅತಿಯಾಗಿ ಕೆಲಸ ಮಾಡಿದಾಗ ಮಾತ್ರ  'ಡೋರ್ ವೇ ಎಫೆಕ್ಟ್'  ಸಂಭವಿಸುತ್ತದೆ - ಮತ್ತು ನೀವು ಅದನ್ನು ನಿಜವಾಗಿಯೂ ತಡೆಗಟ್ಟುವ ಏಕೈಕ ಮಾರ್ಗವೆಂದರೆ ನೀವು ಕೋಣೆಯನ್ನು ಪ್ರವೇಶಿಸುವ ಮೂಲಕ ಸಾಧಿಸಲು ಉದ್ದೇಶಿಸಿರುವ ಏಕೈಕ ಕಾರ್ಯದ ಮೇಲೆ ನಿರಂತರವಾಗಿ ಕೇಂದ್ರೀಕರಿಸುವುದು, ಮನಸ್ಸನ್ನು ನಿಯಂತ್ರಿಸೋದರಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತೆ.
 

Latest Videos

click me!