ಫ್ಲಾಟ್ ಫುಟ್ ಸಮಸ್ಯೆ ನಿವಾರಿಸಲು ಈ ವ್ಯಾಯಾಮ ತಪ್ಪದೇ ಮಾಡಿ

First Published | Dec 23, 2022, 5:38 PM IST

ಫ್ಲಾಟ್ ಫುಟ್ ಅಥವಾ ಚಪ್ಪಟೆಯಾದ ಪಾದಗಳು ದೇಹದ ಸಮತೋಲನವನ್ನು ಹಾಳು ಮಾಡುವ ಕೆಲಸ ಮಾಡುತ್ತವೆ. ಅನೇಕ ಬಾರಿ ಇದು ಸ್ನಾಯು ಸೆಳೆತ, ನಡೆಯಲು ಕಷ್ಟವಾಗೋದು ಅಥವಾ ಬದಲಾವಣೆಗಳನ್ನು ಉಂಟುಮಾಡುತ್ತೆ. ಕೆಲವು ವ್ಯಾಯಾಮದ ಸಹಾಯದಿಂದ ಇದನ್ನು ಗುಣಪಡಿಸಬಹುದು. ಅವುಗಳ ಬಗ್ಗೆ ಇಲ್ಲಿ ತಿಳಿಯಿರಿ. 

ಫ್ಲಾಟ್ ಫುಟ್ (Flat foot) ಮಕ್ಕಳು ಮತ್ತು ವಯಸ್ಕರಲ್ಲಿ ಸಂಭವಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಇದರಲ್ಲಿ, ಅಂಗಾಲುಗಳಲ್ಲಿ ಸಾಕಷ್ಟು ಆರ್ಚ್ ರೂಪುಗೊಳ್ಳೋದಿಲ್ಲ. ಹುಟ್ಟಿದಾಗ, ನಾವೆಲ್ಲರೂ ಚಪ್ಪಟೆ ಪಾದಗಳನ್ನು ಹೊಂದುತ್ತೇವೆ, ಅದರೆ ನಡೆಯುತ್ತಾ ನಡೆಯುತ್ತಾ ಆರ್ಚ್ ಬರುತ್ತೆ. ಆದರೆ ಇದನ್ನು ಹೊಂದಿರದ ಜನರು ಚಪ್ಪಟೆ ಪಾದಗಳ ಗಂಭೀರ ಪರಿಣಾಮಗಳನ್ನು ಎದುರಿಸಬಹುದು. ಈ ಸಮಸ್ಯೆಯು ಆಕ್ಸಿಡೆಂಟಿಂದಾಗಿಯೂ ಸಂಭವಿಸಬಹುದು.

ಫ್ಲಾಟ್ ಫುಟ್ ನ ಲಕ್ಷಣಗಳು ಯಾವುವು?

ಓಡುವುದು, ಸಮತಟ್ಟಾದ ಸೋಲ್ ನಿಂದ ಜಿಗಿಯೋದು ಮುಂತಾದ ಚಟುವಟಿಕೆಗಳಲ್ಲಿ ತೊಂದರೆ ಉಂಟಾಗೋದು. ಇದಲ್ಲದೆ, ನಡಿಗೆಯಲ್ಲಿ ನೋವು(Pain) ಅಥವಾ ಬದಲಾವಣೆ, ಸ್ನಾಯು ಸೆಳೆತ, ಹಿಮ್ಮಡಿ ನೋವು ಉಂಟಾಗಬಹುದು.

Tap to resize

ಫ್ಲಾಟ್ ಫುಟ್ ಸರಿಪಡಿಸಲು ಕೆಲವು ಸುಲಭ ಮತ್ತು ಪರಿಣಾಮಕಾರಿ ವ್ಯಾಯಾಮಗಳನ್ನು ಇಲ್ಲಿ ಹೇಳಲಾಗಿದೆ. ಇದರ ಸಹಾಯದಿಂದ ನಿಮ್ಮ ಫ್ಲಾಟ್ ಫುಟ್ ರೋಗಲಕ್ಷಣಗಳನ್ನು ಕಡಿಮೆ ಮಾಡುವ ಮೂಲಕ ನೀವು ಆರ್ಚ್(Arch) ಮತ್ತೆ ರಚಿಸಬಹುದು.

ಪಾದಗಳನ್ನು ಒಳಗೆ ಮತ್ತು ಹೊರಗೆ ತಿರುಗಿಸಿ

ನಿಮ್ಮ ಕಾಲುಗಳನ್ನು ಚಾಚಿ ಹಾಸಿಗೆ ಮೇಲೆ ಅಥವಾ ಯೋಗ ಮ್ಯಾಟ್ ಮೇಲೆ ಕುಳಿತುಕೊಳ್ಳಿ.
ಕೈಗಳನ್ನು ನಿಮ್ಮ ಹಿಂದೆ ಇರಿಸಿಕೊಳ್ಳಿ.
ಈಗ ಎರಡೂ ಕಾಲುಗಳನ್ನು ಒಟ್ಟಿಗೆ ತಂದು ಕೈಗಳನ್ನು ದೇಹದ ಬದಿಯಲ್ಲಿ ಇರಿಸಿ.
ಈಗ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವಾಗ ಕಾಲ್ಬೆರಳುಗಳನ್ನು ಒಳಕ್ಕೆ ಬಾಗಿಸಿ.
ಉಸಿರನ್ನು ಹೊರಬಿಡುವಾಗ ಕಾಲ್ಬೆರಳುಗಳನ್ನು ಹೊರಮುಖವಾಗಿ ಬಾಗಿಸಿ
ನೀವು ಈ ವ್ಯಾಯಾಮವನ್ನು(Exercise) ದಿನಕ್ಕೆ 5-10 ರೌಂಡ್ 2-3 ಬಾರಿ ಮಾಡಬಹುದು.

ಹೆಬ್ಬೆರಳನ್ನು ಸೇರಿಸಿ

ಯೋಗ ಮ್ಯಾಟ್ ಮೇಲೆ  ಕಾಲುಗಳನ್ನು ಚಾಚಿ ಕುಳಿತುಕೊಳ್ಳಿ.
ಎರಡು ಕಾಲುಗಳ ನಡುವೆ ಸ್ವಲ್ಪ ಅಂತರವಿರಲಿ.
ಈಗ ಎರಡೂ ಕಾಲ್ಬೆರಳುಗಳನ್ನು ಮಧ್ಯದಲ್ಲಿ ತರಲು ಪ್ರಯತ್ನಿಸುತ್ತಿರುವಾಗ ಕಾಲ್ಬೆರಳುಗಳನ್ನು ಒಳಗೆ ಎಳೆಯಿರಿ.
ಈಗ ಎರಡೂ ಪಾದಗಳನ್ನು ಒಂದೇ ಸ್ಥಳದಿಂದ ತೆಗೆಯದೆ ಹೊರಕ್ಕೆ ಬಾಗಿಸಿ.
ಈ ವ್ಯಾಯಾಮವನ್ನು ಮಾಡುವಾಗ, ಸಾಮಾನ್ಯ ಉಸಿರಾಟವನ್ನು(Breathing) ಮುಂದುವರಿಸಿ ಮತ್ತು ಮೊಣಕಾಲು ಬಗ್ಗಿಸೋದನ್ನು ತಪ್ಪಿಸಿ.
ನೀವು ಪ್ರತಿದಿನ 5-10 ರೌಂಡ್ ಮಾಡಬಹುದು.
 

ಪಾದಗಳನ್ನು ತೆರೆಯಿರಿ ಮತ್ತು ಮುಚ್ಚಿರಿ

ಯೋಗ(Yoga) ಮ್ಯಾಟ್ ಮೇಲೆ ಕಾಲುಗಳನ್ನು ಚಾಚಿ ಕುಳಿತುಕೊಳ್ಳಿ.
ಎರಡೂ ಪಾದಗಳ ಕಾಲ್ಬೆರಳುಗಳನ್ನು ಅಕ್ಕಪಕ್ಕ ಇರಿಸಿ
ಈಗ ಉಸಿರನ್ನು ಹೊರಬಿಡುವಾಗ ಎರಡೂ ಪಾದಗಳನ್ನು ಪುಸ್ತಕದಂತೆ ಮುಚ್ಚಿರಿ.
ನಂತರ ಉಸಿರನ್ನು ಒಳಕ್ಕೆಳೆದುಕೊಳ್ಳುವಾಗ ಎರಡೂ ಕಾಲ್ಬೆರಳುಗಳನ್ನು ತೆರೆಯಿರಿ.
ನೀವು ಇದನ್ನು ಪ್ರತಿದಿನ 5 ರೌಂಡ್ ಮಾಡಬಹುದು.

ಕಾಲ್ಬೆರಳುಗಳನ್ನು ತಿರುಗಿಸಿ

ಯೋಗ ಮ್ಯಾಟ್ ಮೇಲೆ  ಕಾಲುಗಳನ್ನು ಚಾಚಿ ಕುಳಿತುಕೊಳ್ಳಿ.
ಎರಡು ಕಾಲುಗಳ ನಡುವೆ ಒಂದು ತೋಳಿನ ಅಂತರವಿರಲಿ.
ಪಾದಗಳನ್ನು ಸ್ಥಳದಿಂದ ತೆಗೆದುಹಾಕದೆ ಕಾಲ್ಬೆರಳುಗಳನ್ನು ಕ್ಲಾಕ್ ವೈಸ್ ಮತ್ತು ಆಂಟಿ ಕ್ಲಾಕ್ ವೈಸ್ ತಿರುಗಿಸಿ
ಉಸಿರು ತೆಗೆದುಕೊಳ್ಳುವಾಗ ಬೆರಳುಗಳು(Finger) ಹೊರಮುಖವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ನಂತರ ಉಸಿರು ಹೊರಬಿಡುವಾಗ ಬೆರಳುಗಳು ಒಳ ಮುಖವಾಗಿರಲಿ.
ಈ ವ್ಯಾಯಾಮವನ್ನು ಸಾಧ್ಯವಾದಷ್ಟು ನಿಧಾನವಾಗಿ ಮಾಡಿ.
ಇದನ್ನು ಪ್ರತಿದಿನ 5 ರೌಂಡ್ ಮಾಡಬಹುದು

ಸ್ಟ್ಯಾಂಡಿಂಗ್ ಆಂಕಲ್ ಸ್ಟ್ರೆಚ್(Standing ankle stretch)

ನಿಮ್ಮ ಕಾಲುಗಳನ್ನು ಸ್ವಲ್ಪ ದೂರದಿಂದ ಚಾಚಿ ಯೋಗ ಮ್ಯಾಟ್ ಮೇಲೆ ನಿಂತುಕೊಳ್ಳಿ.
ಈಗ ಪಾದಗಳ ಬೆರಳಿನ ಮೇಲೆ ಮತ್ತು ನಂತರ ಪಾದದ ಮೇಲೆ ಹೀಗೆ ತುಂಬಾ ಸಲ ಮಾಡಿ.  
ನೀವು ಪ್ರತಿದಿನ 5-6 ರೌಂಡ್ ಮಾಡಬಹುದು.
ಈ ಟಿಪ್ಸ್ ಫಾಲೋ ಮಾಡೋದ್ರಿಂದ ನಿಮ್ಮ ಫ್ಲಾಟ್ ಫುಟ್ನಲ್ಲಿ ಕೂಡ ಆರ್ಚ್ ರಚನೆಯಾಗಿ ನೀವು ಆರಾಮಾಗಿ ನಡೆಯುವಂತಾಗುತ್ತೆ.  

Latest Videos

click me!