ಅಸಿಡಿಟಿ ವಿರುದ್ಧ ಹೋರಾಡಲು ಸಹಾಯ ಮಾಡುವ ಭಾರತೀಯ ಸೂಪರ್ ಫುಡ್‌ಗಳು

Published : Jun 26, 2023, 07:00 AM IST

ಎದೆಯುರಿ, ಹೊಟ್ಟೆ ಉಬ್ಬರಿಸುವಿಕೆ ರೀತಿಯ ಕಾಯಿಲೆಗಳು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತವೆ. ತಾವು ತಿನ್ನುವ  ಆಹಾರಗಳು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುವುದು ಎಲ್ಲರಿಗೂ ತಿಳಿದೇ ಇದೆ. ಹಾಗೇ ತಾವು ದಿನನಿತ್ಯ ಸೇವಿಸುವ  ಕೆಲವು ಆಹಾರಗಳು ಆಸಿಡಿಟಿಯಿಂದ ರಕ್ಷಿಸುವಲ್ಲಿ ಸಹಯ ಮಾಡುತ್ತವೆ. 

PREV
16
ಅಸಿಡಿಟಿ ವಿರುದ್ಧ ಹೋರಾಡಲು ಸಹಾಯ ಮಾಡುವ ಭಾರತೀಯ ಸೂಪರ್ ಫುಡ್‌ಗಳು

ಆಪಲ್ ಸೈಡರ್ ವಿನೆಗರ್:
ಪ್ರತಿದಿನ ಒಂದು ಲೋಟ ನೀರಿನಲ್ಲಿ ಆಪಲ್ ಸೈಡರ್ ವಿನೆಗರ್ ಸೇರಿಸಿ ಸೇವಿಸುವುದರಿಂದ ಹೊಟ್ಟೆಯ ಆಮ್ಲದ ಅಂಶ ಸುಧಾರಿಸುತ್ತದೆ ಮತ್ತು ಸುಧಾರಿತ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ.

 

26

ನೆಲ್ಲಿಕಾಯಿ/ಆಮ್ಲಾ:
ಆಮ್ಲಾವು ವಿಟಮಿನ್ ಸಿ ಯಿಂದ ತುಂಬಿರುತ್ತದೆ ಮತ್ತು ಗಾಯಗೊಂಡ ಹೊಟ್ಟೆಯ ಒಳಪದರ ಮತ್ತು ಅನ್ನನಾಳವನ್ನು ಗುಣಪಡಿಸುತ್ತದೆ. ದಿನಕ್ಕೆ ಎರಡು ಬಾರಿ ಒಂದು ಚಮಚ ಆಮ್ಲಾ ಪುಡಿಯನ್ನು ಸೇವಿಸುವುದರಿಂದ ಅಸಿಡಿಟಿಯನ್ನು ದೂರವಿಡಲು ಸಹಾಯವಾಗುತ್ತದೆ.

36

ಶುಂಠಿ
ಶುಂಠಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಸಮೀಕರಣಕ್ಕೆ ಸಹಾಯ ಮಾಡುತ್ತದೆ ಇದು mucus secretion (ಲೋಳೆಯ ಸ್ರವಿಸುವಿಕೆ) ಅನ್ನು ಉತ್ತೇಜಿಸುವ ಮೂಲಕ ನಿಮ್ಮ ಹೊಟ್ಟೆಯನ್ನು ಹುಣ್ಣುಗಳಿಂದ ರಕ್ಷಿಸುತ್ತದೆ.

46

ಏಲಕ್ಕಿ
ಏಲಕ್ಕಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ಹೊಟ್ಟೆಯ ಒಳಪದರದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಎದೆಯುರಿಗಳನ್ನು ಶಮನಗೊಳಿಸುತ್ತದೆ.

56
Image: Getty Images

ದಾಲ್ಚಿನ್ನಿ
ಅತ್ಯಂತ ಸುವಾಸನೆಯ ಮಸಾಲೆಗಳಲ್ಲಿ ಒಂದಾದ ದಾಲ್ಚಿನ್ನಿ ನೈಸರ್ಗಿಕ ಆಂಟಿ ಆಸಿಡ್ ಆಗಿದ್ದು ಅದು ಆಮ್ಲೀಯತೆಯನ್ನು ನಿವಾರಿಸಲು ಮತ್ತು ಭಾರೀ ಭೋಜನವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

66

ಮಜ್ಜಿಗೆ
ಹೊಟ್ಟೆಯಲ್ಲಿನ ಆಮ್ಲೀಯತೆ ಅಥವಾ ಆಸಿಡ್ ರಿಫ್ಲಕ್ಸ್ ಅನ್ನು ತಟಸ್ಥಗೊಳಿಸಲು ಸಹಾಯ ಮಾಡುವ ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುವ ಮಜ್ಜಿಗೆ ದೇಹವನ್ನು ತಂಪಾಗಿಸುವ ಪಾನೀಯಗಳಲ್ಲಿ ಒಂದಾಗಿದೆ.

Read more Photos on
click me!

Recommended Stories