ಮಹಿಳೆಯರು ಆರೋಗ್ಯವಾಗಿರಲು, ದೇಹದಲ್ಲಿ ಹಾರ್ಮೋನು ಬ್ಯಾಲೆನ್ಸ್ (hormone balance) ಆಗಿರೋದು ಬಹಳ ಮುಖ್ಯ. ಹಾರ್ಮೋನುಗಳ ಲೆವೆಲ್ ಬದಲಾವಣೆಯಾದಾಗ, ರೋಗಲಕ್ಷಣಗಳು ಮಹಿಳೆಯರ ದೇಹದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಹಾರ್ಮೋನುಗಳ ಬದಲಾವಣೆಯು ಋತುಚಕ್ರ, ಸೆಕ್ಸ್ ಮತ್ತು ಫರ್ಟಿಲಿಟಿ ಮೇಲೂ ಪರಿಣಾಮ ಬೀರುತ್ತದೆ.
ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ಲೈಂಗಿಕ ಹಾರ್ಮೋನುಗಳು (sexual hormone) ಮಹಿಳೆಯರ ದೇಹದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈಸ್ಟ್ರೊಜೆನ್ ಹಾರ್ಮೋನ್ ಲೆವೆಲ್ ಹೆಚ್ಚಾದ್ರೆ ಮಹಿಳೆಯರಿಗೆ ಹಲವು ಸಮಸ್ಯೆ ಕಾಡುತ್ತೆ. ಕಳಪೆ ಆಹಾರ, ತೂಕ ಬದಲಾವಣೆಗಳು, ಕೆಫೀನ್ ಸೇವನೆ, ಒತ್ತಡ, ನಿದ್ರೆಯ ಕೊರತೆ ಅಥವಾ ಲೈಫ್ ಸ್ಟೈಲ್ ಕೆಟ್ಟದಾಗಿದ್ರೆ ಮಹಿಳೆಯರ ಈಸ್ಟ್ರೊಜೆನ್ ಹಾರ್ಮೋನ್ ಲೆವೆಲ್ ಮೇಲೆ ಪರಿಣಾಮ ಬೀರಬಹುದು.
ಈಸ್ಟ್ರೊಜೆನ್ ಹೆಚ್ಚಾದ್ರೆ ಪಿರಿಯಡ್ಸ್ ಸಮಯದಲ್ಲಿ (periods time)ಹೆಚ್ಚಿನ ರಕ್ತಸ್ರಾಮ, ಅತಿಯಾದ ನೋವು, ಇರೆಗ್ಯುಲರ್ ಪಿರಿಯಡ್ಸ್, ಮೂಡ್ ಸ್ವಿಂಗ್, ತೂಕ ಹೆಚ್ಚಳ ಎಲ್ಲಾನೂ ಕಾಣಿಸಿಕೊಳ್ಳುತ್ತೆ. ಇದನ್ನು ಕಡಿಮೆ ಮಾಡಲು, ಮಹಿಳೆಯರು ತಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಅದಕ್ಕಾಗಿ ಯಾವ ರೀತಿಯ ಆಹಾರ ಸೇವಿಸಬೇಕು ಅನ್ನೋದನ್ನು ತಿಳಿಯೋಣ.
ಈಸ್ಟ್ರೊಜೆನ್ ಹಾರ್ಮೋನ್ ಮಟ್ಟವನ್ನು (estrogen hormone level) ಕಡಿಮೆ ಮಾಡಲು ಆಹಾರದಲ್ಲಿ ಈ ಬದಲಾವಣೆಗಳನ್ನು ಮಾಡಿ. ಈಸ್ಟ್ರೊಜೆನ್ ಹಾರ್ಮೋನ್ ಹೆಚ್ಚಾದಾಗ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಅದರ ಮಟ್ಟವನ್ನು ಕಡಿಮೆ ಮಾಡಲು, ಆಹಾರದಲ್ಲಿ ಕೆಲವು ಬದಲಾವಣೆ ಮಾಡೋದು ಬಹಳ ಮುಖ್ಯ, ಆದರೆ ಕೆಲವು ಆಹಾರಗಳಿಂದ ದೂರವಿರುವುದು ಸಹ ಬಹಳ ಮುಖ್ಯ.
ಈಸ್ಟ್ರೊಜೆನ್ ಮಟ್ಟವನ್ನು ನಿಯಂತ್ರಿಸಲು, ನಿಮ್ಮ ಆಹಾರದಲ್ಲಿ ಎಲೆಕೋಸು ಮತ್ತು ಹೂಕೋಸಿನಂತಹ ಕ್ರೂಸಿಫರಸ್ ತರಕಾರಿಗಳನ್ನು ಸೇರಿಸಿ. ಈ ತರಕಾರಿಗಳು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತವೆ ಮತ್ತು ಅನೇಕ ರೀತಿಯ ಪೋಷಕಾಂಶಗಳು ಮತ್ತು ಫೈಬರ್ ಅನ್ನು ಹೊಂದಿರುತ್ತವೆ.
ಎಲೆಕೋಸು, ಹೂಕೋಸು ಮುಂತಾದ ಕ್ರೂಸಿಫರಸ್ ತರಕಾರಿಗಳು(cruciferous vegetables) ಈಸ್ಟ್ರೊಜೆನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ರೂಸಿಫರಸ್ ತರಕಾರಿಗಳಲ್ಲಿ ಕ್ಯಾಲೊರಿ ಕಡಿಮೆ ಇದ್ದು , ಫೋಲೇಟ್ ಹೆಚ್ಚಾಗಿರುತ್ತೆ. ಅವು ವಿವಿಧ ಪೋಷಕಾಂಶಗಳು ಮತ್ತು ಫೈಬರ್ ಅನ್ನು ಹೊಂದಿರುತ್ತವೆ.ಹಾಗಾಗಿ ಇವುಗಳನ್ನು ಸೇವಿಸೋದು ಉತ್ತಮ.
ನಿಮ್ಮ ಆಹಾರದಲ್ಲಿ ಪ್ರೋಬಯಾಟಿಕ್ ಗಳನ್ನು ಸೇರಿಸಿ. ಇದು ದೇಹದಿಂದ ಹೆಚ್ಚುವರಿ ಈಸ್ಟ್ರೊಜೆನ್ ತೆಗೆದುಹಾಕಲು ಸಹಾಯ ಮಾಡುತ್ತದೆ. ಗ್ರೀನ್ ಟೀ (green tea), ಕೋಕೋ ಮತ್ತು ಹಾಗಲಕಾಯಿಯಂತಹ ಪಿತ್ತಜನಕಾಂಗವನ್ನು ಶುದ್ಧೀಕರಿಸುವ ಆಹಾರಗಳನ್ನು ಸೇವಿಸೋದು ಉತ್ತಮ.
ಕಡಿಮೆ ಸಕ್ಕರೆ (low sugar) ಸೇವಿಸಿ. ಹೆಚ್ಚಿನ ಪ್ರಮಾಣದ ಸಕ್ಕರೆ ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುತ್ತೆ. ಹೆಚ್ಚು ಸಕ್ಕರೆ ತಿನ್ನೋದು ಕೊಬ್ಬಿನ ಕೋಶಗಳನ್ನು ಹೆಚ್ಚಿಸುತ್ತದೆ, ಇದು ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕಡಿಮೆ ಸಕ್ಕರೆ ಪದಾರ್ಥಗಳನ್ನು ಸೇವಿಸಿ ಮತ್ತು ಹೆಚ್ಚಿನ ಕ್ಯಾಲೊರಿ ವಸ್ತುಗಳಿಂದ ದೂರವಿರಿ.
ಸಂಸ್ಕರಿಸಿದ ಆಹಾರಗಳು ಮತ್ತು ಕಾರ್ಬೋಹೈಡ್ರೇಟ್ ಗಳಿಂದ ದೂರವಿರಬೇಕು. ಧಾನ್ಯಗಳನ್ನು ತಿನ್ನಲು ಮರೆಯೋದೆ ಬೇಡ. ಅಷ್ಟೇ ಅಲ್ಲದೇ ಆಹಾರದಲ್ಲಿ ಫೈಬರ್ ಸೇವನೆಯನ್ನು ಹೆಚ್ಚಿಸಿ. ಪ್ರತಿದಿನ ನಿಮ್ಮ ಆಹಾರದಲ್ಲಿ ಕನಿಷ್ಠ 30 ಗ್ರಾಂ ಫೈಬರ್ ಸೇರಿಸಿ. ಇದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತೆ.