ಆರೋಗ್ಯಕರ ಮತ್ತು ಸದೃಢವಾಗಿರಲು ಆರೋಗ್ಯಕರ ಆಹಾರವನ್ನು (healthy food) ತೆಗೆದುಕೊಳ್ಳುವುದು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ನೀವು ಏನು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ ಎಂಬುದು ನೇರವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಹಾರಗಳ ಸರಿಯಾದ ಕ್ರಮ ನಿರ್ಲಕ್ಷಿಸುವುದು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಅನೇಕ ಜನರು ಆರೋಗ್ಯಕರ ಆಹಾರ ಸೇವಿಸ್ತಾರೆ, ಆದರೆ ಅದರಿಂದ ಅವರ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗಲ್ಲ. ಯಾಕೀಗೆ ಎಂದು ಯೋಚ್ನೆ ಮಾಡ್ತಿದ್ದೀರಾ?
ನಾವು ಆರೋಗ್ಯಕರವಾಗಿರಲು ಕೇವಲ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಸಾಕಾಗುವುದಿಲ್ಲ, ನಿಮ್ಮ ತಿನ್ನುವ ವಿಧಾನ, ತಯಾರಿಸುವ ವಿಧಾನ, ಆಹಾರದ ಗುಣಮಟ್ಟ (food quality), ಸಮಯ ಮತ್ತು ಪ್ರಮಾಣವು ಪ್ರಮುಖ ಪಾತ್ರ ವಹಿಸುತ್ತದೆ. ನೀವು ಈ ನಿಯಮಗಳನ್ನು ಅನುಸರಿಸದಿದ್ದರೆ, ನೀವು ಆರೋಗ್ಯವಾಗಿರಲು ಕಷ್ಟವಾಗಬಹುದು.
ನಿಮ್ಮ ಆಹಾರವನ್ನು ನೀವು ಬೇಯಿಸುವ ವಿಧಾನವು ಸಹ ಅದರ ಪೌಷ್ಠಿಕಾಂಶದ ಮೌಲ್ಯವನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ಹುರಿದ ಬ್ರೊಕೋಲಿ (fried broccoli) ನಿಮ್ಮ ದೇಹಕ್ಕೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಅಂತೆಯೇ, ನೀವು ಅವುಗಳನ್ನು ತಯಾರಿಸುವ ವಿಧಾನದಿಂದ ಪೋಷಕಾಂಶಗಳು ನಷ್ಟವಾಗುತ್ತೆ ಮತ್ತು ಅವುಗಳಲ್ಲಿ ವಿಷಕಾರಿ ಅಂಶಗಳು ಸಹ ಉತ್ಪತ್ತಿಯಾಗುತ್ತವೆ. ಹಾಗಿದ್ರೆ ಯಾವ ರೀತಿಯ ಆಹಾರ ತಯಾರಿಸುವ ವಿಧಾನವನ್ನು ಅವಾಯ್ಡ್ ಮಾಡಬೇಕು ನೋಡೋಣ.
ಏರ್ ಫ್ರೈಯಿಂಗ್ (air frying)
ಮಾಂಸ ಮತ್ತು ಚೀಸ್ ನಂತಹ ಏರ್ ಫ್ರೈಯಿಂಗ್ ಅಹಾರಗಳಲ್ಲಿ ಪೌಷ್ಠಿಕಾಂಶದ ಮೌಲ್ಯ ಕಡಿಮೆ ಇರುತ್ತೆ. ಹೆಚ್ಚಿನ ತಾಪಮಾನದಲ್ಲಿ ಅಡುಗೆ ಮಾಡುವುದರಿಂದ ಸುಧಾರಿತ ಗ್ಲೈಕೇಷನ್ ಎಂಡ್ ಪ್ರಾಡಕ್ಟ್ಸ್ (AGE) ಗೆ ಕಾರಣವಾಗಬಹುದು. ಇದರಿಂದಾಗಿ ಜನರು ಹೆಚ್ಚಾಗಿ ಮಧುಮೇಹ (Diabetic), ಅಥೆರೋಸ್ಕ್ಲೆರೋಸಿಸ್, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ ಮತ್ತು ಅಲ್ಝೈಮರ್ ಕಾಯಿಲೆಯಂತಹ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತೆ.
ಗ್ರಿಲಿಂಗ್ (grilling)
ಗ್ರಿಲ್ ಮಾಡುವ ಆಹಾರಗಳು ಉತ್ತಮ ರುಚಿಯನ್ನು ಹೊಂದಿರುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಹೆಚ್ಚಿನ ತಾಪಮಾನ ಮತ್ತು ತೆರೆದ ಬೆಂಕಿಯಲ್ಲಿ ಅಡುಗೆ ಮಾಡುವುದರಿಂದ ಆಹಾರದಲ್ಲಿ ಹಾನಿಕಾರಕ ಸಂಯುಕ್ತಗಳು ಉತ್ಪತ್ತಿಯಾಗಬಹುದು., ಇದನ್ನು ಹೆಟೆರೊಸೈಕ್ಲಿಕ್ ಅಮೈನ್ಗಳು (HCA) ಮತ್ತು ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು (PAH) ಎಂದು ಕರೆಯಲಾಗುತ್ತದೆ. ಇವು ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳ ಅಪಾಯ ಹೆಚ್ಚಿಸಬಹುದು.
ನಾನ್-ಸ್ಟಿಕ್ ಪ್ಯಾನ್ ಗಳಲ್ಲಿ ಅಡುಗೆ (non stick pan)
ನಾನ್-ಸ್ಟಿಕ್ ಪ್ಯಾನ್ಗಳು ಸಾಮಾನ್ಯವಾಗಿ ಟೆಫ್ಲಾನ್ ಎಂದು ಕರೆಯಲ್ಪಡುವ ಪಾಲಿಟೆಟ್ರಾಫ್ಲೋರೊಇಥಿಲೀನ್ (PTFA) ಲೇಪನವನ್ನು ಹೊಂದಿರುತ್ತವೆ. ಅಂತಹ ಪಾತ್ರೆಗಳನ್ನು ಅತಿಯಾಗಿ ಬಿಸಿಮಾಡುವುದು ಅಥವಾ ಅವುಗಳ ಮೇಲೆ ಲೋಹದ ಪಾತ್ರೆಗಳನ್ನು ಬಳಸುವುದರಿಂದ ವಿಷಕಾರಿ ಹೊಗೆ ಮತ್ತು ಕಣಗಳನ್ನು ಬಿಡುಗಡೆ ಮಾಡಬಹುದು, ಅದು ನಿಮ್ಮ ಆಹಾರದೊಂದಿಗೆ ಬೆರೆಯಬಹುದು. ಇದು ಸಹ ಆರೋಗ್ಯಕ್ಕೆ ಮಾರಕವಾ