ಈ ಗಿಡಮೂಲಿಕೆ ಬಳಸಿದ್ರೆ 5 ನಿಮಿಷಗಳಲ್ಲಿ ನಿದ್ರೆ ಬರುತ್ತೆ! ಟ್ರೈ ಮಾಡಿ ನೋಡಿ

First Published | Oct 21, 2022, 3:11 PM IST

ನಿದ್ರಾಹೀನತೆ ಗಂಭೀರವಾದ ಸಮಸ್ಯೆಯಾಗಿದೆ. ಆದರೆ ಇಂದಿನ ದಿನಗಳಲ್ಲಿ ಈ ಸಮಸ್ಯೆ ತುಂಬಾ ಸಾಮಾನ್ಯವಾಗುತ್ತಿದೆ. ನಿದ್ರಾಹೀನತೆಯು ಹಠಾತ್ ಆಗಿ ಬರುವಂತಹ ಸಮಸ್ಯೆಯಲ್ಲ, ಇದು ನಿಮ್ಮ ಅಕಾಲಿಕ ನಿದ್ರೆ, ಕಳಪೆ ಆಹಾರ ಪದ್ಧತಿ, ಅತಿಯಾದ ಆತಂಕ, ಜಡ ದಿನಚರಿಯ ಪರಿಣಾಮವಾಗಿದೆ. ನಿಮ್ಮ ಲೈಫ್ ಸ್ಟೈಲ್ ಸರಿಯಾಗಿ ಇರದೇ ಇದ್ದರೆ, ನೀದ್ರಾಹೀನತೆ ಸಮಸ್ಯೆ ಹೆಚ್ಚಾಗಿ ಕಾಡುತ್ತೆ. ಈ ಸಮಸ್ಯೆ ನಿವಾರಿಸಲು ಏನು ಮಾಡಬೇಕು ಅನ್ನೋದರ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತೇವೆ. 

ನಿದ್ರಾಹೀನತೆ(Sleeplessness) ಅಥವಾ ಕಳಪೆ ನಿದ್ರೆಯಿಂದಾಗಿ  ಉಂಟಾಗುವ ಅತ್ಯಂತ ಗಂಭೀರ ಸಮಸ್ಯೆಗಳೆಂದರೆ ಹೈ ಬಿಪಿ, ಮಧುಮೇಹ, ಹೃದಯಾಘಾತ, ಹೃದಯ ವೈಫಲ್ಯ ಅಥವಾ ಪಾರ್ಶ್ವವಾಯು ಸಂಭವ ಹೆಚ್ಚು. ಇದಲ್ಲದೆ, ಬೊಜ್ಜು, ಖಿನ್ನತೆ, ದುರ್ಬಲ ರೋಗನಿರೋಧಕ ಶಕ್ತಿ ಮತ್ತು ಕಡಿಮೆ ಸೆಕ್ಸ್ ಡ್ರೈವ್ ನ ಅಪಾಯವೂ ಇದೆ. ಹಾಗಾಗಿ, ನಿದ್ರಾಹೀನತೆಯ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡೋದು ಅತ್ಯಗತ್ಯ.

ನಿದ್ರಾಹೀನತೆಯನ್ನು ಗುಣಪಡಿಸಲು, ಯೋಗಾಸನ ಮತ್ತು ಪರಿಣಾಮಕಾರಿ ಗಿಡಮೂಲಿಕೆಗಳನ್ನು ಆಯುರ್ವೇದದಲ್ಲಿ ಹೇಳಲಾಗಿದೆ, ಇದನ್ನು ಟ್ರೈ ಮಾಡಿದ್ರೆ ಕೆಲವೇ ದಿನಗಳಲ್ಲಿ ಮಲಗಿದ ತಕ್ಷಣ ನಿಮಗೆ ಬೇಗ ನಿದ್ರೆ ಬರಲು ಕಾರಣವಾಗುತ್ತೆ. ಚೆನ್ನಾಗಿ ನಿದ್ರೆ(Sleep) ಮಾಡಲು ಆಯುರ್ವೇದ ಔಷಧಿಗಳು ಯಾವುವು ಎಂದು ತಿಳಿಯೋಣ.

Tap to resize

ಪ್ರತಿದಿನ ಎಷ್ಟು ಗಂಟೆಗಳ ನಿದ್ರೆ ಅವಶ್ಯಕ?
ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ನಿದ್ರೆಯ ಅಗತ್ಯವು ಬದಲಾಗುತ್ತೆ. ಹಾಗಾಗಿ, ನವಜಾತ ಶಿಶುಗಳಿಗೆ 1 ವರ್ಷದವರೆಗೆ 12-16 ಗಂಟೆಗಳ ನಿದ್ರೆಯ ಅಗತ್ಯವಿದೆ. ಇದಲ್ಲದೆ, 1-2 ವರ್ಷದ ಮಗುವಿಗೆ 11-14 ಗಂಟೆಗಳ ನಿದ್ರೆಯ ಅಗತ್ಯವಿದೆ, 3-5 ವರ್ಷಗಳ ಮಗುವಿಗೆ 10-13 ಗಂಟೆಗಳ ನಿದ್ರೆಯ ಅಗತ್ಯವಿದೆ. 

6-12 ವರ್ಷಗಳ ಮಗುವಿಗೆ 9-12 ಗಂಟೆಗಳ ನಿದ್ರೆ ಬೇಕು, 13-18 ವರ್ಷದವರಿಗೆ 8-10 ಗಂಟೆಗಳ ನಿದ್ರೆಯ ಅಗತ್ಯವಿದೆ, ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ 7-8 ಗಂಟೆಗಳ ನಿದ್ರೆಯ ಅಗತ್ಯವಿದೆ. ನಿಮಗೆ ನಿಮ್ಮ ವಯಸ್ಸಿಗೆ ಸರಿಯಾದ ನಿದ್ರೆ ಬಾರದೇ ಇದ್ದರೆ, ನೀವು ಆಯುರ್ವೇಡ ಗಿಡಮೂಲಿಕೆಗಳನ್ನು ಬಳಕೆ ಮಾಡಬಹುದು. ಅದಕ್ಕಾಗಿ ಯಾವೆಲ್ಲಾ ಆಯುರ್ವೇದ ಔಷಧಿ(Ayurvedic medicine) ಬಳಕೆ ಮಾಡಬಹುದು ನೋಡೋಣ.

ನಿದ್ರಾಹೀನತೆಯಲ್ಲಿ ಶಂಖಪುಷ್ಪ(Shankha pushpa) ಪ್ರಯೋಜನಕಾರಿ
ಶಂಖಪುಷ್ಪ ತನ್ನ ವಾತ ಸಮತೋಲನ ಮತ್ತು ಮೇಧಾ ಗುಣಲಕ್ಷಣಗಳಿಂದಾಗಿ ಮನಸ್ಸನ್ನು ಶಾಂತಗೊಳಿಸುವ ಕೆಲಸ ಮಾಡುತ್ತೆ. ಇದು ನಿದ್ರಾಹೀನತೆಯನ್ನು ಗುಣಪಡಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ. ಹಾಗಾಗಿ ಶಂಖಪುಷ್ಪದ ಟೀ ಮಾಡಿ ಸೇವಿಸೋದ್ರಿಂದ ನಿದ್ರಾ ಹೀನತೆಯನ್ನು ಸರಿಪಡಿಸಿಕೊಳ್ಳಬಹುದು.    

ನೀವು ನಿದ್ರೆ ಮಾಡದಿದ್ದಾಗ ಬ್ರಾಹ್ಮಿ(Bramhi) ತಿನ್ನಿ
ಉತ್ತಮ ರಾತ್ರಿಯ ನಿದ್ರೆಯನ್ನು ಪಡೆಯಲು ಬ್ರಾಹ್ಮಿ ಉತ್ತಮ ಮೂಲಿಕೆಯಾಗಿದೆ. ಇದು ವಿಶ್ರಾಂತಿಯ ನಿದ್ರೆಯನ್ನು ಉತ್ತೇಜಿಸೋದು ಮಾತ್ರವಲ್ಲದೆ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತೆ ಮತ್ತು ನಿಮ್ಮ ಏಕಾಗ್ರತೆ, ಜಾಗರೂಕತೆಯನ್ನು ಸುಧಾರಿಸುವ  ಕೆಲಸ ಸಹ ಮಾಡುತ್ತೆ. ಆಯುರ್ವೇದದಲ್ಲಿ ಬ್ರಾಹ್ಮಿಯನ್ನು ಮೆದುಳಿನ ಟಾನಿಕ್ ಎಂದು ಪರಿಗಣಿಸಲಾಗಿದೆ.

ಜಟಮಾಂಸಿ(Jatamansi) ನಿದ್ರಾಹೀನತೆಗೆ ಆಯುರ್ವೇದ ಔಷಧಿಯಾಗಿದೆ
ನಿದ್ರಾಹೀನತೆಗೆ ಚಿಕಿತ್ಸೆ ನೀಡುವಲ್ಲಿ ಜಟಮಾಂಸಿ ಪರಿಣಾಮಕಾರಿ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಈ ಮೂಲಿಕೆ ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುತ್ತೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತೆ. ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹ  ಜಟಮಾಂಸಿಯನ್ನು ಬಳಸಲಾಗುತ್ತೆ.

Latest Videos

click me!