ಮಕ್ಕಳಿಗೆ ಸಾಫ್ಟ್ ಡ್ರಿಂಕ್ಸ್ ನೀಡೋ ಮುನ್ನ ಇದನ್ನೊಮ್ಮೆ ಓದಿ

Published : Oct 20, 2022, 04:13 PM IST

ನೀವು ಇಷ್ಟ ಪಟ್ಟು ಕುಡಿಯುವಂತಹ ಸಾಫ್ಟ್ ಡ್ರಿಂಕ್ಸ್, ಸೋಡಾ, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿವೆ. ತಂಪು ಪಾನೀಯಗಳು ತೂಕ ಹೆಚ್ಚಳ, ಹಲ್ಲುಗಳಲ್ಲಿನ ಹುಳು, ನಿದ್ರೆಯ ಸಮಸ್ಯೆಗಳಿಗೆ ಸಹ ಕಾರಣವೆಂದು ನಂಬಲಾಗಿದೆ. ಸೋಡಾ ಕುಡಿಯುವ ಮಕ್ಕಳಲ್ಲಿ ನಡವಳಿಕೆಯ ಸಮಸ್ಯೆ ಮತ್ತು ಮಾನಸಿಕ ಸಮಸ್ಯೆ ಪ್ರಾರಂಭವಾಗಬಹುದು ಎಂದು ಕೆಲವು ಸಂಶೋಧನೆಗಳು ಕಂಡುಕೊಂಡಿವೆ. ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

PREV
17
ಮಕ್ಕಳಿಗೆ ಸಾಫ್ಟ್ ಡ್ರಿಂಕ್ಸ್ ನೀಡೋ ಮುನ್ನ ಇದನ್ನೊಮ್ಮೆ ಓದಿ

ಶಾಲಾ ಮಕ್ಕಳಲ್ಲಿ ಸೋಡಾ(Soda) ಕುಡಿಯೋ ಅಭ್ಯಾಸ ತುಂಬಾನೇ ಹೆಚ್ಚಾಗಿದೆ. ಇದರ ಬಗ್ಗೆ ಮಕ್ಕಳು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸೋದು ಮುಖ್ಯ. ಯಾಕಂದ್ರೆ ಹೆಚ್ಚು ಹೆಚ್ಚು ಸೋಡ ಕುಡಿಯೋದ್ರಿಂದ, ಬೊಜ್ಜು, ಹಲ್ಲಿನ ಸಮಸ್ಯೆ, ತಲೆನೋವು, ನಡವಳಿಕೆಯ ಸಮಸ್ಯೆ, ಮಾನಸಿಕ ಸಮಸ್ಯೆ, ಇತ್ಯಾದಿಗಳು ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಪ್ರಾರಂಭವಾಗಬಹುದು.

27

ಸಾಫ್ಟ್ ಡ್ರಿಂಕ್ಸ್ (Soft drinks) ನಡವಳಿಕೆಯ ಸಮಸ್ಯೆಗಳನ್ನು ಯಾಕೆ ಉಂಟುಮಾಡುತ್ತೆ?
ತಂಪು ಪಾನೀಯಗಳಲ್ಲಿ  ಸೋಡಿಯಂ ಬೆಂಜೊಯೇಟ್ ಕಂಡುಬರುತ್ತೆ ಎಂದು ಸಂಶೋಧಕರು ನಂಬುತ್ತಾರೆ, ಇದು ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ. ಇದಲ್ಲದೆ, ಇದರಲ್ಲಿ ಸಾಕಷ್ಟು ಕೆಫೀನ್ ಇದೆ, ಇದು ನಡವಳಿಕೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗೆಯೇ ಸಕ್ಕರೆಯು ಮಕ್ಕಳ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತೆ.

37

ಸೋಡಾ ಕುಡಿಯೋದರಿಂದ ಮಕ್ಕಳ ಮೇಲಾಗುವ ಪರಿಣಾಮಗಳೇನು?
ವರ್ತನೆ ಸಮಸ್ಯೆ(Behavioural problem)
ಚಿಕ್ಕ ವಯಸ್ಸಿನಿಂದಲೇ ಸೋಡಾ ಅಥವಾ ತಂಪು ಪಾನೀಯ ಸೇವಿಸಲು ಪ್ರಾರಂಭಿಸುವ ಮಕ್ಕಳು ಹೆಚ್ಚು ಅಗ್ಗ್ರೆಸಿವ್ ಆಗ್ತಾರೆ ಎಂದು ಅನೇಕ ಸಂಶೋಧನೆಗಳು ಕಂಡುಕೊಂಡಿವೆ. ಅವರು ನಡವಳಿಕೆ ಮತ್ತು ಭಾವನಾತ್ಮಕ ಸಮಸ್ಯೆ ಹೊಂದುತ್ತಾರೆ. ಇದಲ್ಲದೆ, ಖಿನ್ನತೆ, ಕೋಪ ಮತ್ತು ಆತ್ಮಹತ್ಯೆಯ ಚಟ ಇತ್ತೀಚೆಗೆ ಹೆಚ್ಚಾಗಿದೆ.

47

ಬಾಲ್ಯದ ಬೊಜ್ಜಿಗೆ(Obesity) ಕಾರಣ
ಸೋಡಾದಲ್ಲಿ ಜೀರೋ ಕ್ಯಾಲೋರಿ ಮತ್ತು ಸಾಕಷ್ಟು ಸಕ್ಕರೆ ಇದೆ, ಇದು ಬಾಲ್ಯದಲ್ಲಿ ಸ್ಥೂಲಕಾಯಕ್ಕೆ ಕಾರಣವಾಗುತ್ತೆ. ಇಷ್ಟೇ ಅಲ್ಲ, ಇದು ಟೈಪ್ 2 ಮಧುಮೇಹದ ಅಪಾಯವನ್ನು ಸಹ ಹೆಚ್ಚಿಸುತ್ತೆ. ಆದುದರಿಂದ ಮಕ್ಕಳಿಗೆ ಇದನ್ನು ನೀಡೋದನ್ನು ಸಾಧ್ಯವದಷ್ಟು ಅವಾಯ್ಡ್ ಮಾಡಿ.
 

57

ಹಸಿವಿನ ಕೊರತೆ(No hungry)
ತಂಪು ಪಾನೀಯ ಮಕ್ಕಳಲ್ಲಿ ಹಸಿವನ್ನು ಕಡಿಮೆ ಮಾಡುತ್ತೆ, ಇದು ಅವರ ದೇಹದ ಪೋಷಣೆಯನ್ನು ಕಡಿಮೆ ಮಾಡುತ್ತೆ  ಮತ್ತು ಅವರ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತೆ. ಹಾಗಾಗಿ ಮಕ್ಕಳು ಹೆಚ್ಚು ಸಾಫ್ಟ್ ಡ್ರಿಂಕ್ಸ್ ಸೇವಿಸದಿರೋ ಹಾಗೆ ನೋಡಿಕೊಳ್ಳಿ.  
 

67

ಹಲ್ಲಿನ ಉಳುಕು (Teeth cavity)
ಸ್ವೀಟ್ ಸೋಡಾ ಹಲ್ಲಿನ ಉಳುಕಿಗೆ ಕಾರಣವಾಗುತ್ತೆ. ಇದರ ಸೇವನೆಯು ಹಲ್ಲಿನ ಎನಾಮೆಲ್ ಮತ್ತು ಹಲ್ಲುಗಳಿಗೆ ಹಾನಿಯನ್ನುಂಟು ಮಾಡುತ್ತೆ.ಹಾಗಾಗಿ ದೊಡ್ಡವರು ಹಾಗು ಮಕ್ಕಳು ಸಾಫ್ಟ್ ಡ್ರಿಂಕ್ಸ್ ಸೇವನೆ ಕಡಿಮೆ ಮಾಡಬೇಕು. ಇದರಿಂದ ಹಲ್ಲುಗಳ ರಕ್ಷಣೆ ಮಾಡಲು ಸಾಧ್ಯವಾಗುತ್ತೆ.

77

ನಿದ್ರೆಯ(Sleep) ಮೇಲೆ ಪರಿಣಾಮ ಬೀರುತ್ತೆ 
ಅತಿಯಾದ ಕೆಫೀನ್ ಸೋಡಾ ಅಥವಾ ತಂಪು ಪಾನೀಯಗಳಲ್ಲಿ ಕಂಡುಬರುತ್ತೆ, ಇದು ಮಗುವಿನ ನಿದ್ರೆಯ ಸಮಸ್ಯೆಯನ್ನು ಹೆಚ್ಚಿಸುತ್ತೆ. ಇದರ ಸೇವನೆಯು ಮಕ್ಕಳಲ್ಲಿ ಆತಂಕದ ಲಕ್ಷಣಗಳನ್ನು ಉಂಟುಮಾಡಬಹುದು. ಆದುದರಿಂದ ಇಂತಹ ಆಹಾರಗಳನ್ನು ಸಾಧ್ಯವಾದಷ್ಟು ಮಕ್ಕಳಿಗೆ ಕೊಡೋದನ್ನು ಅವಾಯ್ಡ್ ಮಾಡಿ.

Read more Photos on
click me!

Recommended Stories