ಮೊಡವೆ ಕಡಿಮೆಯಾಗಬೇಕಾ? ಇವನ್ನೆಲ್ಲಾ ಮುಟ್ಟಲೇ ಬೇಡಿ!

First Published | Oct 16, 2023, 4:24 PM IST

ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಅದು ಮೊಡವೆಗಳು. ಇದು ಯಾಕೆ ಕಾಡುತ್ತೆ ಅನ್ನೋದೇ ಕೆಲವರಿಗೆ ಗೊತ್ತಿರೋದಿಲ್ಲ. ಆದರೆ ನಿಮಗೊಂದು ಸತ್ಯ ಗೊತ್ತಾ? ಕೆಲವೊಮ್ಮೆ ನಾವು ತಿನ್ನುವ ಆಹಾರದಿಂದಲೇ ಮೊಡವೆಗಳು ಕಾಡುತ್ತವೆಯಂತೆ. 
 

ಮೊಡವೆ ಅಥವಾ ಗುಳ್ಳೆಗಳು ನಾವೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಅನುಭವಿಸಿದ ಸಮಸ್ಯೆ. ವಿಶೇಷವಾಗಿ, ಮೊಡವೆ ಪೀಡಿತ ಚರ್ಮವನ್ನು ಹೊಂದಿರುವ ಜನರು ಚರ್ಮದ ಬಿರುಕುಗಳ ಸಮಸ್ಯೆ ಹೊಂದಿರುತ್ತಾರೆ. ಹೀಗಿರುವಾಗ ಚರ್ಮದ ಸಮಸ್ಯೆ ಕಾಡುತ್ತೆ. ಆದರೆ ಕೆಲವೊಮ್ಮೆ ನಾವು ತಿನ್ನುವ ಆಹಾರಗಳಿಂದಲೇ ಮೊಡವೆ ಕಾಣಿಸಿಕೊಳ್ಳುತ್ತೆ. ಆದರೆ ಮೊಡವೆಗಳಿಗೆ (pimples) ಆಹಾರ ನೇರವಾಗಿ ಕಾರಣವಲ್ಲ ಎಂದು ನೀವು ಇಲ್ಲಿ ಅರ್ಥಮಾಡಿಕೊಳ್ಳಬೇಕು. ಆದರೆ ನೀವು ತಿನ್ನುವ ಕೆಲವೊಂದು ಆಹಾರಗಳಿಂದ ಮೊಡವೆಗಳು ಕಾಣಿಸೋದಂತೂ ನಿಜ.
 

ವಿಶೇಷವಾಗಿ ನಿಮ್ಮ ಚರ್ಮವು ಎಣ್ಣೆಯುಕ್ತ (oily skin) ಮತ್ತು ಮೊಡವೆ ಪೀಡಿತವಾಗಿದ್ದರೆ ಅಥವಾ ಕರುಳಿನ ಆರೋಗ್ಯವು ಉತ್ತಮವಾಗಿಲ್ಲದಿದ್ದರೆ, ತಿನ್ನುವುದು ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಇಂದು ಈ ಲೇಖನದಲ್ಲಿ, ಯಾವ ಆಹಾರಗಳಿಂದ ಮೊಡವೆ ಹೆಚ್ಚುತ್ತದೆ ಅನ್ನೋದನ್ನು ನೋಡೋಣ. 

Tap to resize

ಡೈರಿ ಉತ್ಪನ್ನ (Diary Products)
ನಿಮ್ಮ ಚರ್ಮವು ತುಂಬಾ ಎಣ್ಣೆಯುಕ್ತ ಅಥವಾ ಮೊಡವೆ ಪೀಡಿತವಾಗಿದ್ದರೆ, ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಮೊಡವೆ ಸಮಸ್ಯೆ ಹೆಚ್ಚಾಗುತ್ತದೆ. ಆದರೆ, ಡೈರಿ ಉತ್ಪನ್ನಗಳು ಮತ್ತು ಮೊಡವೆಗಳ ನಡುವಿನ ಸಂಬಂಧವು ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಡೈರಿ ಉತ್ಪನ್ನಗಳನ್ನು ಸೇವಿಸಿದ ನಂತರ ಮುಖದಲ್ಲಿ ಮೊಡವೆ ಕಾಣಿಸಿಕೊಂಡರೆ, ಡೈರಿ ಉತ್ಪನ್ನಗಳನ್ನು ಅವಾಯ್ಡ್ ಮಾಡಿ.

ಎಣ್ಣೆಯುಕ್ತ ಆಹಾರ (Oily food)
ನೀವು ಎಣ್ಣೆಯುಕ್ತ ಆಹಾರ ತಿನ್ನಲು ಬಯಸಿದರೆ ಮತ್ತೆ ಮತ್ತೆ ಮೊಡವೆ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಎಣ್ಣೆಯುಕ್ತ ಆಹಾರ ಅತಿಯಾದ ಸೇವನೆಯು ಚರ್ಮದಲ್ಲಿ ತೈಲ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಫ್ರೆಂಚ್ ಫ್ರೈಸ್, ಫ್ರೈಡ್ ಚಿಕನ್ ಇತ್ಯಾದಿಗಳನ್ನು ನಿಮ್ಮ ಆಹಾರದಿಂದ ಹೊರಗಿಡಲು ಪ್ರಯತ್ನಿಸಿ.

ಸಕ್ಕರೆ (Sugar)
ನೀವು ಸಿಹಿ ಆಹಾರವನ್ನು ಇಷ್ಟಪಡುವವರಾಗಿದ್ದರೆ, ನೀವು ಯಾವಾಗಲೂ ಮೊಡವೆ ಸಮಸ್ಯೆ ಎದುರಿಸಬೇಕಾಗಬಹುದು. ಸಂಸ್ಕರಿಸಿದ ಬಿಳಿ ಸಕ್ಕರೆಯಿಂದ ಹಿಡಿದು ಸೋಡಾ, ಜ್ಯೂಸ್, ಕ್ಯಾಂಡಿಗಳು ಇತ್ಯಾದಿಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿದೆ. ಅವುಗಳನ್ನು ತೆಗೆದುಕೊಳ್ಳುವುದರಿಂದ ಇನ್ಸುಲಿನ್ ಸ್ಪೈಕ್ ಉಂಟಾಗುತ್ತದೆ. ಅದೇ ಸಮಯದಲ್ಲಿ, ದೇಹದಲ್ಲಿ ಉರಿಯೂತ ಉಂಟಾಗುತ್ತೆ, ಈ ಕಾರಣದಿಂದಾಗಿ ಚರ್ಮದ ಬಿರುಕುಗಳ ಸಮಸ್ಯೆ ಉಂಟಾಗಬಹುದು. 

ಸಂಸ್ಕರಿಸಿದ ಆಹಾರಗಳು (processed food)
ನೀವು ಮೊಡವೆಗಳಿಂದ ದೂರವಿರಲು ಬಯಸಿದರೆ, ಸಂಸ್ಕರಿಸಿದ ಆಹಾರಗಳಿಂದ ದೂರವಿರುವುದು ಒಳ್ಳೆಯದು. ಸಂಸ್ಕರಿಸಿದ ಆಹಾರಗಳಲ್ಲಿ, ಸಂರಕ್ಷಕಗಳು ಮತ್ತು ಅನಾರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ, ಇದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇದು ಮಾತ್ರವಲ್ಲ, ಇದು ನಿಮ್ಮ ಮೊಡವೆ ಸಮಸ್ಯೆ ಇನ್ನಷ್ಟು ಹೆಚ್ಚಿಸುತ್ತದೆ.

ಪ್ರೋಟೀನ್ ಪೂರಕಗಳು (protein supplements)
ಸಾಮಾನ್ಯವಾಗಿ, ನಾವು ಆರೋಗ್ಯವಾಗಿರಲು ಪ್ರೋಟೀನ್ ಪೂರಕಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಪ್ರೋಟೀನ್ ಪೂರಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ, ಅದು ಮೊಡವೆ ಸಮಸ್ಯೆಗಳಿಗೆ ಕಾರಣವಾಗಬಹುದು.

ಚಾಕೊಲೇಟ್ (Chocolate)
ಹೆಚ್ಚಿನ ಜನರು ಚಾಕೊಲೇಟ್ ತಿನ್ನಲು ಇಷ್ಟಪಡುತ್ತಾರೆ, ಆದರೆ ಕೆಲವೊಮ್ಮೆ ಇದು ಮೊಡವೆ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಚಾಕೊಲೇಟ್ ಮತ್ತು ಮೊಡವೆಗಳ ನಡುವಿನ ಸಂಬಂಧವು ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲವಾದರೂ, ಅನೇಕ ಜನರು ಚಾಕೊಲೇಟ್ ತಿನ್ನುವುದರಿಂದ ಮೊಡವೆಗಳ ಸಮಸ್ಯೆ ಅನುಭವಿಸಿರೋದು ಪತ್ತೆಯಾಗಿದೆ. ವಿಶೇಷವಾಗಿ ಹಾಲಿನ ಚಾಕೊಲೇಟ್. ನಿಮಗೆ ಇದೇ ರೀತಿಯ ಏನಾದರೂ ಸಂಭವಿಸಿದರೆ, ನೀವು ಚಾಕೊಲೇಟ್ನಿಂದ ಸ್ವಲ್ಪ ದೂರವಿರಬೇಕು.

ಸೋಯಾ ಉತ್ಪನ್ನಗಳು (Soya product)
ಸೋಯಾ ಉತ್ಪನ್ನಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸೋಯಾ ಉತ್ಪನ್ನಗಳನ್ನು ನಿಯಮಿತವಾಗಿ ತಿನ್ನಲು ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ, ಇದು ಫೈಟೊ ಈಸ್ಟ್ರೊಜೆನ್ಗಳನ್ನು ಹೊಂದಿರುತ್ತದೆ, ಇದು ನಿಮ್ಮ ಹಾರ್ಮೋನುಗಳ ಸಮತೋಲನವನ್ನು ಹಾಳು ಮಾಡುತ್ತದೆ. ಇದು ನಿಮ್ಮ ಚರ್ಮವನ್ನು ಎಣ್ಣೆಯುಕ್ತವಾಗಿಸಬಹುದು ಮತ್ತು ಮೊಡವೆ ಸಮಸ್ಯೆಯನ್ನು ಉಂಟು ಮಾಡಬಹುದು.

Latest Videos

click me!