ಪೋಷಕಾಂಶ ಭರಿತ ಒಣ ಹಣ್ಣುಗಳು (dry fruits) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ದೇಹವನ್ನು ಆರೋಗ್ಯವಾಗಿಡಲು, ಪ್ರತಿದಿನ ಬೆರಳೆಣಿಕೆಯಷ್ಟು ಒಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಇವುಗಳಲ್ಲಿ ಒಂದು ಗೋಡಂಬಿ, ಇದನ್ನು ತಿನ್ನುವ ಮೂಲಕ ದೇಹದಲ್ಲಿನ ಅನೇಕ ಪೋಷಕಾಂಶಗಳ ಕೊರತೆ ನಿವಾರಣೆಯಾಗುತ್ತೆ. ಈ ಒಣ ಹಣ್ಣಿನಲ್ಲಿ ಫೈಬರ್, ಪ್ರೋಟೀನ್, ಮ್ಯಾಂಗನೀಸ್, ಸತು, ತಾಮ್ರದಂತಹ ಎಲ್ಲಾ ಪೋಷಕಾಂಶಗಳಿವೆ.