ನೀವು ಆರೋಗ್ಯವಾಗಿರಲು ಬಯಸಿದರೆ, ಹೃದಯದ ಬಗ್ಗೆ ಕಾಳಜಿ ವಹಿಸೊದು ತುಂಬಾ ಮುಖ್ಯ. ಹೃದಯವು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಇತ್ತೀಚಿನ ದಿನಗಳಲ್ಲಿ, ಕಳಪೆ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಹೃದ್ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಹೃದಯಾಘಾತದ (heart attack) ಪ್ರಕರಣಗಳು ವಯಸ್ಸಾದವರಲ್ಲಿ ಮಾತ್ರವಲ್ಲದೆ ಯುವಕರಲ್ಲಿಯೂ ಹೆಚ್ಚುತ್ತಿವೆ. ಹೃದ್ರೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ.