ಬೆಳಗ್ಗೆ ಬ್ರೇಕ್‌ಫಾಸ್ಟ್‌ ಮಾಡದೇ ದಿನ ಕಳಿತೀರಾ? ಸಾಲು ಸಾಲು ಸಮಸ್ಯೆಗಳು ಕಾಡುತ್ತೆ!

First Published | Aug 18, 2023, 12:42 PM IST

ಇತ್ತೀಚಿನ ದಿನಗಳಲ್ಲಿ ಎಲ್ಲರದ್ದೂ ಅವಸರದ ಜೀವನವೇ ಆಗಿ ಹೋಗಿದೆ. ಒಂದು ವೇಳೆ ನೀವು ಅವಸರದಲ್ಲಿ ಹಸಿವಿನಿಂದ ಮನೆಯಿಂದ ಹೊರಬಂದರೆ, ಈ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಬೆಳಗ್ಗೆ ಬ್ರೇಕ್ ಫಾಸ್ಟ್ ಸೇವಿಸದೇ ಇದ್ದರೆ, ಏನೇನಾಗುತ್ತೆ ಅನ್ನೋದನ್ನು ನೋಡೋಣ. 

ನೀವು ಆಗಾಗ್ಗೆ ಗ್ಯಾಸ್ಟ್ರಿಕ್, ತಲೆತಿರುಗುವಿಕೆ, ಬಿಪಿ ಸಮಸ್ಯೆಗಳನ್ನು ಹೊಂದಿದ್ದರೆ, ಮನೆಯಿಂದ ಹೊರಡುವ ಮೊದಲು ನೀವು ಉಪಾಹಾರ ಸೇವಿಸಿದ್ದೀರಾ ಅನ್ನೋದನ್ನು ಥಿಂಕ್ ಮಾಡಿ.  ಉತ್ತರ ಇಲ್ಲ ಎಂದಾದರೆ, ಈ ಎಲ್ಲಾ ಸಮಸ್ಯೆಗಳ ಮೂಲವೆಂದರೆ ಬ್ರೇಕ್ ಫಾಸ್ಟ್ (breakfast) ಮಾಡದೇ ಇರೋದು. ಇದು ಮಾತ್ರವಲ್ಲ, ಇನ್ನೂ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಸಹ ಕಂಡು ಬರುತ್ತವೆ.  
 

ಮುಂಜಾನೆಯ ಬ್ರೇಕ್ ಫಾಸ್ಟ್ ನಮ್ಮ ದಿನದ ಪ್ರಮುಖ ಊಟವಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ, ಇದರಿಂದಾಗಿಯೇ ನೀವು ದಿನವಿಡೀ ಸಕ್ರಿಯರಾಗಿರಲು ಸಹಾಯವಾಗುತ್ತೆ ಮತ್ತು ಆರೋಗ್ಯಕರ ಉಪಾಹಾರವು (healthy breakfast) ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಆದರೆ ನೀವು ಅದನ್ನು ಬಿಟ್ಟುಬಿಟ್ಟರೆ, ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. 
 

Latest Videos


ಕೆಲಸ ಮಾಡುವ ವೃತ್ತಿಪರರು, ಕಾಲೇಜಿಗೆ ಹೋಗುವ ದಿನಚರಿ ಹೇಗಿರುತ್ತೆ ಎಂದರೆ, ಅವರ ಅವಸರದ ಜೀವನದಲ್ಲಿ ಹೆಚ್ಚಾಗಿ ಬ್ರೇಕ್ ಫಾಸ್ಟ್ ಮಿಸ್ ಮಾಡ್ತಾರೆ. ಒಂದೆರಡು ದಿನಗಳು ಒಳ್ಳೆಯದು, ಆದರೆ ದೀರ್ಘಕಾಲದವರೆಗೆ ಈ ಅಭ್ಯಾಸವು ನಿಮ್ಮನ್ನು ಅನೇಕ ಸಮಸ್ಯೆಗಳಿಗೆ ದೂಡುತ್ತದೆ. ಇದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ನೋಡೋಣ. 
 

ಗ್ಯಾಸ್ಟ್ರಿಕ್ (Gastric): ನಮ್ಮಲ್ಲಿ ಹೆಚ್ಚಿನವರು ಏನನ್ನೂ ತಿನ್ನದೆ ಅಥವಾ ಕುಡಿಯದೆ ಮನೆಯಿಂದ ಹೊರಡುತ್ತಾರೆ, ದಾರಿಯಲ್ಲಿ ಅಥವಾ ಕಚೇರಿಯನ್ನು ತಲುಪಿದ ನಂತರ, ಚಹಾ, ಕಾಫಿ ಕುಡಿಯುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ, ಕಾಫಿ ಸೇವಿಸುವುದು ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನಕಾರಿಯಲ್ಲ, ಇದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ನೀವು ಈ ಅಭ್ಯಾಸವನ್ನು ದೀರ್ಘಕಾಲದವರೆಗೆ ಅನುಸರಿಸಿದರೆ,  ಅದರಿಂದ ಅಜೀರ್ಣ, ಗ್ಯಾಸ್ಟ್ರಿಕ್ ಉರಿಯೂತ, ಎದೆಯುರಿ, ಹೊಟ್ಟೆ ಹುಣ್ಣುಗಳಿಗೆ ಕಾರಣವಾಗಬಹುದು.

ಪ್ರಜ್ಞಾಹೀನತೆ: ದೀರ್ಘಕಾಲದವರೆಗೆ ಹಸಿವಿನಿಂದ ಬಳಲುವುದರಿಂದ ತಲೆತಿರುಗುವಿಕೆಯ ಸಮಸ್ಯೆಯೂ ಕಂಡುಬರುತ್ತದೆ. ಅನೇಕ ಬಾರಿ ಜನರು ನಿಂತಿರುವಾಗ ಪ್ರಜ್ಞಾಹೀನರಾಗುತ್ತಾರೆ. ಇದಕ್ಕೆ ಕಾರಣ ದೌರ್ಬಲ್ಯ. ಹಾಗಾಗಿ ಬೆಳಗ್ಗಿನ ಬ್ರೇಕ್ ಫಾಸ್ಟ್ ಮಿಸ್ ಮಾಡದೇ ಇದ್ದರೆ ಉತ್ತಮ.

ಕಡಿಮೆ ಬಿಪಿ (Blood Pressure): ಬೆಳಗಿನ ಉಪಾಹಾರವನ್ನು ಬಿಡೋದರಿಂದ ತೂಕ ಇಳಿಸಿಕೊಳ್ಳಬಹುದು ಎಂದು ನೀವು ಭಾವಿಸಿದರೆ, ದೀರ್ಘಕಾಲದವರೆಗೆ ಹಸಿವಿನಿಂದ ಇರುವುದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಸಮಸ್ಯೆಗಳು ಕಡಿಮೆ ಬಿಪಿಯಿಂದ ಉಂಟಾಗುತ್ತೆ. ಕಡಿಮೆ ಬಿಪಿಯಿಂದಾಗಿ ಕೂಡ ತಲೆತಿರುಗುವಿಕೆಗೆ ಉಂಟಾಗುತ್ತೆ. ಆದ್ದರಿಂದ, ಆರೋಗ್ಯಕರ ಉಪಾಹಾರ ಸೇವಿಸೋದು ಮುಖ್ಯ. 

ರಕ್ತದಲ್ಲಿ ಕಡಿಮೆ ಸಕ್ಕರೆ (Low Blood Pressure): ರಕ್ತದೊತ್ತಡದ ಜೊತೆಗೆ, ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮನೆಯಿಂದ ಹೊರಹೋಗುವಾಗ ರಕ್ತದಲ್ಲಿನ ಸಕ್ಕರೆ ಮಟ್ಟ ಸಹ ಕಡಿಮೆಯಾಗಬಹುದು. ಗ್ಲುಕೋಸ್ ದೇಹಕ್ಕೆ ಶಕ್ತಿಯ ಮೂಲವಾಗಿದೆ.  ದೇಹದಲ್ಲಿ ಗ್ಲೂಕೋಸ್ ಕೊರತೆ ಇದ್ದರೆ, ಅನೆಕ ಸಮಸ್ಯೆಗಳು ಉಂಟಾಗುತ್ತವೆ. 
 

click me!