ಆರೋಗ್ಯಕ್ಕೆ ಹಾಲನ್ನು(Milk) ಎಷ್ಟು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಮತ್ತು ಹಾಲಿನ ಗರಿಷ್ಠ ಪ್ರಯೋಜನವನ್ನು ಪಡೆಯಲು, ನಾವು ಅದನ್ನು ಅನೇಕ ವಸ್ತುಗಳೊಂದಿಗೆ ಬೆರೆಸಿ ಕುಡಿಯಲು ಇಷ್ಟಪಡುತ್ತೇವೆ. ಹಾಲಿನೊಂದಿಗೆ ಹಳದಿ, ತುಪ್ಪ, ಜೇನು ಇವೆಲ್ಲವನ್ನೂ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನ ಸಿಗುತ್ತೆ ಅನ್ನೋದು ನಿಮಗೆ ಈಗಾಗಲೆ ತಿಳಿದಿದೆ. ಆದರೆ ಹಾಲಿನೊಂದಿಗೆ ಇಸಾಬ್ಗೋಲ್ ಬೆರೆಸಿ ಕುಡಿಯೋದರಿಂದ ಇತರ ಅನೇಕ ಪ್ರಯೋಜನಗಳನ್ನು ಒದಗಿಸುತ್ತೆ ಎಂದು ನಿಮಗೆ ತಿಳಿದಿದ್ಯಾ?
ಇಸಾಬ್ಗೋಲ್(Isabgol) ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ಸ್ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಾಗಾಗಿ ಹಾಲು ಮತ್ತು ಇಸಾಬ್ಗೋಲ್ ಬೆರೆಸಿದ್ರೆ, ಅದು ಅನೇಕ ರೀತಿಯ ಆರೋಗ್ಯ ಸಮಸ್ಯೆ ತೆಗೆದುಹಾಕುತ್ತೆ. ಹಾಲಿನೊಂದಿಗೆ ಇಸಾಬ್ಗೋಲ್ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ, ರಕ್ತದಲ್ಲಿನ ಸಕ್ಕರೆಯಂತಹ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಿದ್ರೆ ಬನ್ನಿ ಹಾಲು ಮತ್ತು ಇಸಾಬ್ಗೋಲ್ ಮಿಶ್ರಣದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ-
ಬ್ಲಡ್ ಶುಗರ್(Blood sugar)
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬ್ಲಡ್ ಶುಗರ್ ಲೆವೆಲ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಈ ಸಮಸ್ಯೆ ನಿಮಗೂ ಇದ್ದರೆ, ಹಾಲಿನೊಂದಿಗೆ ಬೆರೆಸಿದ ಇಸಾಬ್ಗೋಲ್ ಕುಡಿದರೆ, ಅದು ಸಾಕಷ್ಟು ಪ್ರಯೋಜನ ನೀಡುತ್ತೆ. ಇಸಾಬ್ಗೋಲ್ ನಲ್ಲಿರುವ ಜಿಲೆಟಿನ್ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ.
ಅತಿಸಾರ
ಸಾಮಾನ್ಯವಾಗಿ ಲೂಸ್ ಮೋಶನ್(Loos motion) ಮತ್ತು ಅತಿಸಾರದ ಸಮಸ್ಯೆ ಇದ್ದರೆ ಇಸಾಬ್ಗೋಲ್ ಸೇವಿಸಲು ಸಲಹೆ ನೀಡಲಾಗುತ್ತೆ ಎಂದು ನೀವು ಆಗಾಗ್ಗೆ ಕೇಳಿರಬಹುದು. ಇಸಾಬ್ಗೋಲ್ ಹೊಟ್ಟೆಯ ಸಮಸ್ಯೆ ತೆಗೆದುಹಾಕುವ ಮೂಲಕ ಜೀರ್ಣಕ್ರಿಯೆಯನ್ನು ಸರಿಪಡಿಸುತ್ತೆ, ಇದು ಅತಿಸಾರದ ಸಮಸ್ಯೆಗೆ ಪರಿಹಾರ ನೀಡುತ್ತೆ.
ಮಲಬದ್ಧತೆ(constipation)
ಮಲಬದ್ಧತೆಯ ಸಮಸ್ಯೆಯಿಂದಾಗಿ, ದೇಹದಲ್ಲಿ ಇತರ ಅನೇಕ ರೋಗ ಅದರೊಂದಿಗೆ ಬರುತ್ತೆ. ಹಾಗಾಗಿ ಮಲಬದ್ಧತೆ ತೆಗೆದುಹಾಕಲು ಹಾಲು ಮತ್ತು ಇಸಾಬ್ಗೋಲ್ ಸೇವಿಸಬಹುದು. ಹಾಲು ಜೀರ್ಣಕ್ರಿಯೆಯನ್ನು ಸುಧಾರಿಸುತ್ತೆ, ಆದರೆ ನಾರಿನಂಶ ಹೆಚ್ಚಿರುವ ಇಸಾಬ್ಗೋಲ್ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತೆ, ಹಾಗಾಗಿ ಇದು ಮಲಬದ್ಧತೆಯ ಸಮಸ್ಯೆಯನ್ನು ತೆಗೆದುಹಾಕುತ್ತೆ .
ಕೊಬ್ಬು
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ ಹೆಚ್ಚುತ್ತಿರುವ ತೂಕದಿಂದ ತೊಂದರೆಗೀಡಾಗುತ್ತಿದ್ದಾರೆ. ಆದ್ರಿಂದ ಒಬೆಸಿಟಿ(Obesity) ನಿಯಂತ್ರಿಸಲು ಹಾಲು ಮತ್ತು ಇಸಾಬ್ಗೋಲ್ ಸೇವಿಸಬಹುದು. ಇಸಾಬ್ಗೋಲ್ ಸೇವನೆಯು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತೆ, ಇದು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಸಂಗ್ರಹಿಸೋದಿಲ್ಲ.
ಹೃದಯ(Heart)
ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಮತ್ತು ಹೃದಯವನ್ನು ಆರೋಗ್ಯಕರವಾಗಿಡಲು ಇಸಾಬ್ಗೋಲ್ ಮತ್ತು ಹಾಲಿನ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಕೆಟ್ಟ ಕೊಬ್ಬು ಸಂಗ್ರಹ ಆಗೋದನ್ನು ತಡೆಯುತ್ತದೆ. ಇದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತೆ.