ಕಿಡ್ನಿ, ಸಂಧಿವಾತ ಬರಲೇಬಾರದು ಎಂದಾದ್ರೆ ಈ ಆಹಾರ ಸೇವಿಸಿ

First Published | Oct 10, 2022, 5:09 PM IST

ಇತ್ತೀಚಿನ ದಿನಗಳಲ್ಲಿ, ಯೂರಿಕ್ ಆಮ್ಲದ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಯೂರಿಕ್ ಆಮ್ಲವು ದೇಹದಲ್ಲಿ ಕೊಳೆಯಂತೆ ಸಂಗ್ರಹವಾಗುತ್ತದೆ. ದೇಹದ ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣವು ಹೆಚ್ಚಾದರೆ, ಅದು ಕೀಲು ಸಮಸ್ಯೆಗಳು, ಮೂತ್ರಪಿಂಡದ ಕಾಯಿಲೆ, ಹೃದಯಾಘಾತದಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು.  ಯೂರಿಕ್ ಆಮ್ಲವು ದೇಹದಲ್ಲಿ ಪ್ಯೂರಿನ್ ನ ಒಂದು ರೂಪವಾಗಿದೆ, ಇದು ಮೂತ್ರದ ಮೂಲಕ ದೇಹದಿಂದ ಹೊರಹೋಗುತ್ತದೆ.  
 

ಯೂರಿಕ್ ಆಮ್ಲವು ನಮ್ಮ ರಕ್ತದಲ್ಲಿ ಕಂಡುಬರುವ ತ್ಯಾಜ್ಯ ವಸ್ತುವಾಗಿದೆ. ನಮ್ಮ ದೇಹವು ಪ್ಯೂರಿನ್ ಎಂಬ ರಾಸಾಯನಿಕವನ್ನು ವಿಭಜಿಸಿದಾಗ ಇದು ರೂಪುಗೊಳ್ಳುತ್ತದೆ.  ಹೆಚ್ಚಿನ ಸಂದರ್ಭಗಳಲ್ಲಿ, ಯೂರಿಕ್ ಆಮ್ಲವು ರಕ್ತವನ್ನು ಸೇರುತ್ತದೆ ಮತ್ತು ಮೂತ್ರಪಿಂಡಗಳ ಮೂಲಕ ಮೂತ್ರದ ಮೂಲಕ ದೇಹದಿಂದ ಹೊರಹೋಗುತ್ತದೆ. ಪ್ಯೂರಿನ್ ಅಧಿಕವಾಗಿರುವ ಆಹಾರಗಳು ಮತ್ತು ಡ್ರಿಂಕ್ಸ್ ಸೇವನೆಯು ದೇಹದಲ್ಲಿ ಯೂರಿಕ್ ಆಮ್ಲದ (uric acid)ಮಟ್ಟವನ್ನು ಹೆಚ್ಚಿಸುತ್ತದೆ. 

ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾದಾಗ, ಹೈಪರ್ಯುರಿಸೆಮಿಯಾ ಎಂಬ ರೋಗವ ಕಾಡುತ್ತೆ. ಹೈಪರ್ಯುರಿಸೆಮಿಯಾದಿಂದಾಗಿ, ದೇಹದಲ್ಲಿ ಇರುವ ಯೂರಿಕ್ ಆಮ್ಲವು ಸ್ಫಟಿಕಗಳ ರೂಪದಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಈ ಹರಳುಗಳು ಕೀಲುಗಳಲ್ಲಿ ನೆಲೆಗೊಳ್ಳುತ್ತವೆ, ಇದು ಸಂಧಿವಾತದ ಸಮಸ್ಯೆಗೆ ಕಾರಣವಾಗುತ್ತದೆ. ಈ ಹರಳುಗಳು ಮೂತ್ರಪಿಂಡಗಳಲ್ಲಿ ನೆಲೆಗೊಂಡಾಗ, ಅದು ಕಿಡ್ನಿ ಸ್ಟೋನ್ ಸಮಸ್ಯೆಗೆ ಕಾರಣವಾಗುತ್ತೆ.

Tap to resize

ದೇಹದಲ್ಲಿ ಯೂರಿಕ್ ಆಮ್ಲವನ್ನು ಹೆಚ್ಚಿಸುವ ಸಮಸ್ಯೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಮೂಳೆಗಳು, ಕೀಲುಗಳು ಮತ್ತು ಅಂಗಾಂಶಗಳಿಗೆ ಹಾನಿಯನ್ನುಂಟುಮಾಡಬಹುದು, ಹಾಗೆಯೇ ಮೂತ್ರಪಿಂಡದ ಕಾಯಿಲೆ ಮತ್ತು ಅದರಿಂದ ಉಂಟಾಗುವ ಹೃದ್ರೋಗ ಸಮಸ್ಯೆಗಳಿಗೆ ಕಾರಣವಾಗಬಹುದು.

ಆರೋಗ್ಯಕರ ಆಹಾರ ಮತ್ತು ಜೀವನಶೈಲಿ (lifestyle) ಬದಲಾವಣೆ ಮಾಡುವ ಮೂಲಕ, ನೀವು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಬಹುದು. ನೀವು ಸಹ ಯೂರಿಕ್ ಆಮ್ಲದ ಸಮಸ್ಯೆ ಎದುರಿಸುತ್ತಿದ್ದರೆ, ನಿಮ್ಮ ರಕ್ತದಲ್ಲಿರುವ ಕೊಳಕು ಯೂರಿಕ್ ಆಮ್ಲವನ್ನು ಫಿಲ್ಟರ್ ಮಾಡಲು ಸಹಾಯ ಮಾಡುವ ಕೆಲವು ಆಹಾರಗಳ ಬಗ್ಗೆ ತಿಳಿಸುತ್ತೇವೆ. ಅವುಗಳ ಬಗ್ಗೆ ನೀವು ತಿಳಿದುಕೊಂಡಿರೋದು ಒಳ್ಳೆಯದು.

ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳು
ಸಂಧಿವಾತದಿಂದ ಬಳಲುತ್ತಿರುವ ಜನರು ಡೈರಿ ಉತ್ಪನ್ನಗಳನ್ನು ಕಡಿಮೆ ತಿನ್ನಬೇಕು ಅಥವಾ ತಿನ್ನೋದನ್ನು ನಿಲ್ಲಿಸಬೇಕು. ಆದರೆ ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು (low fat diary product) ಸೇವಿಸುವ ಜನರು ತಮ್ಮ ದೇಹದಲ್ಲಿ ಕಡಿಮೆ ಮಟ್ಟದ ಯೂರಿಕ್ ಆಮ್ಲವನ್ನು ಹೊಂದಿರುತ್ತಾರೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ಕ್ಯಾಲ್ಸಿಯಂ ಭರಿತ ವಸ್ತುಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಮತ್ತು ಸಂಧಿವಾತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. 

ಒಮೆಗಾ -3 ಫ್ಯಾಟಿ ಆಸಿಡ್ 
ಒಮೆಗಾ -3 ಕೊಬ್ಬಿನಾಮ್ಲಗಳು (omega 3 fatty acid) ಮೀನುಗಳಲ್ಲಿ ಕಂಡುಬರುತ್ತವೆ, ಇದು ಆಹಾರದಲ್ಲಿ ಸೇರಿಸಲು ಉತ್ತಮ ಆಯ್ಕೆ. ಆದರೆ ಕೆಲವು ಸಮುದ್ರಾಹಾರಗಳು ಅತ್ಯಧಿಕ ಪ್ರಮಾಣದ ಪ್ಯೂರಿನ್ ಹೊಂದಿರುತ್ತವೆ. ಸಂಧಿವಾತದ ಸಮಸ್ಯೆ ಹೊಂದಿರುವ ಜನರು ಸಮುದ್ರಾಹಾರದಿಂದ ಸಂಪೂರ್ಣವಾಗಿ ದೂರವಿರುವ ಅಗತ್ಯವಿಲ್ಲ. ನೀವು ಈ ಎಲ್ಲಾ ವಸ್ತುಗಳನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು. 

ವಿಟಮಿನ್ ಸಿ
ವಿಟಮಿನ್ ಸಿ (vitamin c) ಸೇವನೆಯು ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ತಿಳಿದುಬಂದಿದೆ. ಆಹಾರದಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಹಣ್ಣುಗಳನ್ನು ಸೇರಿಸುವುದರಿಂದ ಸಂಧಿವಾತದ ಸಮಸ್ಯೆ ದೂರ ಮಾಡಬಹುದು. ಉತ್ತಮ ಆರೋಗ್ಯ ಕಾಪಾಡಬಹುದು.

ಸಸ್ಯ ಆಧಾರಿತ ಆಹಾರಗಳು
ಆಹಾರದಲ್ಲಿ ಸಸ್ಯ ಆಧಾರಿತ ಆಹಾರಗಳನ್ನು ಸೇರಿಸುವುದು ತುಂಬಾ ಪ್ರಯೋಜನಕಾರಿ. ಇದರೊಂದಿಗೆ, ನೀವು ಹೆಚ್ಚು ಹೆಚ್ಚು ಹಣ್ಣುಗಳು, ತರಕಾರಿಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಬಹುದು. ಇದಲ್ಲದೆ, ನೀವು ನಿಮ್ಮ ಆಹಾರದಲ್ಲಿ ಸಂಪೂರ್ಣ ಧಾನ್ಯಗಳನ್ನು ಸಹ ಸೇರಿಸಬೇಕು. 

ಪ್ರೋಟೀನ್ (protein)
ರಕ್ತದಲ್ಲಿರುವ ಕೊಳಕು ಯೂರಿಕ್ ಆಮ್ಲವನ್ನು ಫಿಲ್ಟರ್ ಮಾಡಲು ಮತ್ತು ಅದರ ಮಟ್ಟವನ್ನು ಕಡಿಮೆ ಮಾಡಲು, ನೀವು ಆಹಾರದಲ್ಲಿ ಕಡಿಮೆ ಕೊಬ್ಬಿನ ವಸ್ತುಗಳನ್ನು ಸೇರಿಸುವುದು ಬಹಳ ಮುಖ್ಯ. ಕಡಿಮೆ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ವಸ್ತುಗಳನ್ನು ಆಹಾರದಲ್ಲಿ ಸೇರಿಸೋದು ಉತ್ತಮ. ಚಿಕನ್, ಟರ್ಕಿ, ಮೀನು ಮತ್ತು ಟೋಫು ಪ್ರೋಟೀನ್ ಗೆ ಉತ್ತಮ ಪರ್ಯಾಯಗಳಾಗಿವೆ. ಇವುಗಳನ್ನು ಆಹಾರದಲ್ಲಿ ಸೇವಿಸಬಹುದು.

Latest Videos

click me!