ನವಜಾತ ಶಿಶುಗಳ ಬಗ್ಗೆ ನೀವು ತಿಳಿಯದೆ ಇರೋ ಕ್ರೇಜಿ ಫ್ಯಾಕ್ಟ್ಸ್!

First Published | Mar 25, 2023, 4:57 PM IST

ಪ್ರತಿಯೊಬ್ಬರೂ ದೊಡ್ಡ ಕಣ್ಣುಗಳು ಮತ್ತು ಮುಗ್ಧ ನಗು ಹೊಂದಿರುವ ಮಕ್ಕಳನ್ನು ಇಷ್ಟಪಡುತ್ತಾರೆ, ಆದರೆ ಅವರ ಬಗ್ಗೆ ನಿಮಗೆ ನಿಜವಾಗಿಯೂ ಎಷ್ಟು ತಿಳಿದಿದೆ?  ಮಕ್ಕಳ ಆಕರ್ಷಕ ಗುಣಲಕ್ಷಣಗಳಿಂದ ನೀವು ಆಶ್ಚರ್ಯಚಕಿತರಾಗಬಹುದು. ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.

ಶಿಶುಗಳು 300 ಮೂಳೆಗಳೊಂದಿಗೆ(Bones) ಜನಿಸುತ್ತಾರೆ
ವಯಸ್ಕರು ತಮ್ಮ ದೇಹದಲ್ಲಿ ಸರಿಸುಮಾರು 206 ಮೂಳೆಗಳನ್ನು ಹೊಂದಿದ್ದರೆ, ಆದರೆ ನಿಮಗೆ ಗೊತ್ತಾ? ಶಿಶುಗಳು ಸುಮಾರು 300 ಮೂಳೆಗಳೊಂದಿಗೆ ಜಗತ್ತಿಗೆ ಬರುತ್ತವೆ. ಆರಂಭದಲ್ಲಿ ಒಂದು ರೀತಿಯ ಪೊರೆಯಿಂದ ಸಂಪರ್ಕ ಹೊಂದಿರೋ ಈ ಹಲವಾರು ಮೂಳೆಗಳು ಜೀವನದ ಮೊದಲ ಕೆಲವು ವರ್ಷಗಳಲ್ಲಿ ವಿಲೀನಗೊಳ್ಳುತ್ತವೆ. ಮಗುವಿನ ಮೃದುವಾದ ಅಸ್ಥಿಪಂಜರವು ಜನನವನ್ನು ಸುಲಭಗೊಳಿಸುತ್ತೆ.

ಮಗುವಿನ ಹೊಟ್ಟೆ(Stomach) ತುಂಬಾ ಚಿಕ್ಕದಿರುತ್ತೆ 
ಹುಟ್ಟಿದ ಒಂದು ದಿನದ ನಂತರ, ಮಗುವಿನ ಹೊಟ್ಟೆ ಚೆರ್ರಿಯ ಗಾತ್ರವಿರುತ್ತೆ. ಇದು ಒಂದು ವಾರದ ನಂತರ ಮೊಟ್ಟೆಯ ಗಾತ್ರವಾಗಲು ತ್ವರಿತವಾಗಿ ವಿಸ್ತರಿಸುತ್ತೆ. ಆದರೂ ಶಿಶುಗಳು ಆಗಾಗ ಹಾಲು ಕುಡಿಯಲು ಎಚ್ಚರಗೊಳ್ಳುತ್ತಲೇ ಇರುತ್ತೆ. ಈ ವಿಷ್ಯ ನಿಮಗೆ ಗೊತ್ತಿತ್ತಾ?
 

Tap to resize

ನಿಕ್ಯಾಪ್(Knee cap) ಇಲ್ಲದೆ ಜನಿಸುತ್ತೆ 
ಮೊಣಕಾಲಿನ ಕ್ಯಾಪ್ ಬದಲಿಗೆ, ಶಿಶುಗಳು ಕಾರ್ಟಿಲೆಜ್ ನೊಂದಿಗೆ ಜನಿಸುತ್ತವೆ. ಫ್ಲೆಕ್ಸಿಬಲ್ ಕಾರ್ಟಿಲೆಜ್ ಗಾಯವನ್ನು ತಪ್ಪಿಸಲು ಸಹಾಯ ಮಾಡುತ್ತೆ.ಮಕ್ಕಳ ಬೆಳವಣಿಗೆ ಆಗುತ್ತಾ ಹೋದಂತೆ ನಂತರ ನಿಕ್ಯಾಪ್ ಸಹ ಬೆಳೆಯುತ್ತಲೇ ಹೋಗುತ್ತದೆ. 

ನವಜಾತ ಶಿಶುಗಳು(New born) ಕಣ್ಣೀರು ಹಾಕೋದಿಲ್ಲ
ಜೀವನದ ಮೊದಲ ಕೆಲವು ತಿಂಗಳುಗಳಲ್ಲಿ, ಶಿಶುಗಳು ಅಳುವಾಗ ಕಣ್ಣೀರನ್ನು ಬಿಡುಗಡೆ ಮಾಡೋದಿಲ್ಲ. ಶಿಶುಗಳು ಕಣ್ಣೀರು ಸುರಿಸಬಹುದಾದರೂ, ಅವರ ಕಣ್ಣೀರಿನ ನಾಳಗಳು ಸಂಪೂರ್ಣವಾಗಿ ರೂಪುಗೊಂಡಿರೋದಿಲ್ಲ ಮತ್ತು ಕಣ್ಣೀರಿನ ಪ್ರಮಾಣವು ಅವರ ಕಣ್ಣುಗಳಿಂದ ಹರಿಯಲು ಸಾಕಾಗೋದಿಲ್ಲ. ಎರಡು ಅಥವಾ ಮೂರು ತಿಂಗಳ ವಯಸ್ಸಿನ ನಂತರವೇ ಕಣ್ಣೀರು ರೂಪುಗೊಳ್ಳುತ್ತೆ .

ಅವರು ಹೇಳುವುದಕ್ಕಿಂತ ಮೂರು ಪಟ್ಟು ಹೆಚ್ಚು ಪದಗಳನ್ನು(Words) ಅರ್ಥಮಾಡಿಕೊಳ್ಳುತ್ತಾರೆ
ನಿಮ್ಮ ಮಗುವಿನ ಮುಂದೆ ನೀವು ಏನು ಹೇಳುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ, ಮಗುವಿಗೆ ಇನ್ನು ಕೆಲವೇ ತಿಂಗಳಾಗಿದ್ರು ಸಹ. ಮಗು ಮಾತನಾಡಲು ಸಾಧ್ಯವಿಲ್ಲ ಎಂದ ಮಾತ್ರಕ್ಕೆ ನಿಮ್ಮ ಮಗು ನಿಮ್ಮನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಥವಲ್ಲ. ವಾಸ್ತವವಾಗಿ, ಶಿಶುಗಳು ಆರು ತಿಂಗಳ ವಯಸ್ಸಿನಲ್ಲಿ ಪದಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತವೆ. ಭಾಷೆ ನಂತರ ಬೆಳೆಯುತ್ತೆ, ಆದರೆ ಅಲ್ಲಿಯವರೆಗೆ, ಶಿಶುಗಳು ಪದಗಳನ್ನು ಹೇಳುವುದಕ್ಕಿಂತ ಅವುಗಳನ್ನು ಅರ್ಥಮಾಡಿಕೊಳ್ಳುವುದು ಸುಲಭ.

ನವಜಾತ ಶಿಶುಗಳು ತಮ್ಮ ತಾಯಿಯ(Mother) ಧ್ವನಿಯನ್ನು ಗುರುತಿಸುತ್ತವೆ
ನವಜಾತ ಶಿಶುಗಳ ಮಿದುಳುಗಳು ತಮ್ಮ ತಾಯಿಯ ಧ್ವನಿ ಮತ್ತು ಅಪರಿಚಿತ ಮಹಿಳೆಯ ಧ್ವನಿಯ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ. ತಮ್ಮ ತಾಯಿಯ ಧ್ವನಿಯನ್ನು ಕೇಳಿದಾಗ ಶಿಶುಗಳು ಸ್ಪಷ್ಟವಾಗಿ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ ಎಂದು ಅವರ ಅಧ್ಯಯನಗಳು ತೋರಿಸುತ್ತವೆ.

ಮಗು ಎತ್ತರಕ್ಕೆ(Height) ಹೆದರೋದಿಲ್ಲ
ಎತ್ತರ ನೋಡಿ ತಲೆತಿರುಗುವಿಕೆ ಸಹಜ, ಆದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವಷ್ಟು ವಯಸ್ಸಾಗದ ಶಿಶುಗಳು ಇನ್ನೂ ಈ ಭಯವನ್ನು ಬೆಳೆಸಿಕೊಂಡಿರಲ್ಲ. ಇದನ್ನು ಕಂಡುಹಿಡಿಯಲು, ಸಂಶೋಧಕರ ತಂಡವು ಶಿಶುಗಳನ್ನು ಗಾಜಿನ ಮೇಲ್ಮೈಯಲ್ಲಿ ಇರಿಸಿ ಮಗುವಿನ ರಿಯಾಕ್ಷನ್ ಗಮನಿಸಿತು. ನವಜಾತ ಮಕ್ಕಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಆದರೆ ಸ್ವಲ್ಪ ವಯಸ್ಸಾದ ಶಿಶುಗಳು ಗಾಜಿನ ಪ್ರದೇಶವನ್ನು ತಪ್ಪಿಸಲು ಒಲವು ತೋರಿದವು.

ಹಿಯರಿಂಗ್(Hearing) ಭ್ರೂಣದ ಶಾರ್ಪೆಸ್ಟ್ ಸೆನ್ಸ್ 
ಗರ್ಭಧಾರಣೆಯ 18ನೇ ವಾರದಲ್ಲಿ ಭ್ರೂಣದ ಹಿಯರಿಂಗ್ ಬೆಳೆಯುತ್ತೆ. ಶ್ರವಣವು ಬೆಳವಣಿಗೆಯ ನಾಲ್ಕನೇ ಇಂದ್ರಿಯವಾಗಿದ್ದರೂ, ಅದು ತೀಕ್ಷ್ಣವಾಗಿದೆ. 24 ವಾರಗಳಲ್ಲಿ, ಭ್ರೂಣಗಳು ತಮ್ಮ ತಾಯಿಯ ಹೃದಯ ಬಡಿತ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಕೇಳಬಹುದು, ಮತ್ತು ಐದನೇ ಅಥವಾ ಆರನೇ ತಿಂಗಳಲ್ಲಿ, ಅವರು ಬಾಹ್ಯ ಶಬ್ದಗಳನ್ನು ಕೇಳಲು ಪ್ರಾರಂಭಿಸುತ್ತೆ.

ಭ್ರೂಣಗಳು ಗರ್ಭಾಶಯದಲ್ಲಿ ಅಳಬಹುದು(Cry)
ಗರ್ಭಧಾರಣೆಯ 28ನೇ ವಾರದ ಹೊತ್ತಿಗೆ ಶಿಶುಗಳು ಗರ್ಭದಲ್ಲಿ ಅಳಬಹುದು ಎಂದು ಅಧ್ಯಯನಗಳು ತೋರಿಸಿವೆ. ಮೂರನೇ ತ್ರೈಮಾಸಿಕದಲ್ಲಿ ನಡೆಸಿದ ಅಲ್ಟ್ರಾಸೌಂಡ್ಗಳನ್ನು ಗಮನಿಸಿದ ನಂತರ ಮತ್ತು ಶಿಶುಗಳ ಚಲನೆಗಳ ವಿವರವಾದ ವಿಶ್ಲೇಷಣೆಯನ್ನು ನಡೆಸಿದ ನಂತರ ಸಂಶೋಧಕರು ಈ ತೀರ್ಮಾನಕ್ಕೆ ಬಂದರು.

ಅಪ್ಪುಗೆ(Hug) ಅತ್ಯಗತ್ಯ
ಹಗ್ ಮಾಡೋದು ತುಂಬಾನೆ ಮುಖ್ಯ.ಅವುಗಳ ಹಲವಾರು ಪ್ರಯೋಜನಗಳಲ್ಲಿ ಸಂಬಂಧದ ಅಭಿವೃದ್ಧಿ, ಸುಧಾರಿತ ಆರೋಗ್ಯ ಮತ್ತು ಉತ್ತಮ ನಿದ್ರೆ ಸೇರಿವೆ. ಅಪ್ಪುಗೆಗಳು ನಮ್ಮ ನರಕೋಶಗಳ ಮೇಲೂ ಪರಿಣಾಮ ಬೀರಬಹುದು. ಯೂನಿವರ್ಸಿಟಿ ಲಾವಲ್ ನ ಸ್ಕೂಲ್ ಆಫ್ ಸೈಕಾಲಜಿಯ ಪ್ರೊಫೆಸರ್ ಜಾರ್ಜ್ ತಾರಾಬುಲ್ಸಿ ಅವರ ಪ್ರಕಾರ, " ಬಹಳಷ್ಟು ಪ್ರೀತಿ ಮತ್ತು ಪೋಷಣೆಯನ್ನು ಪಡೆಯುವ ಮಕ್ಕಳ ನರಕೋಶಗಳ ನಡುವೆ ಹೆಚ್ಚಿನ ಸಂಪರ್ಕಗಳು ರೂಪುಗೊಳ್ಳುತ್ತವೆ." ಎಂದು ಹೇಳಲಾಗುತ್ತೆ.  

Latest Videos

click me!