ರಂಜಾನ್ ಉಪವಾಸ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

Published : Mar 24, 2023, 04:42 PM IST

ಆರೋಗ್ಯ ತಜ್ಞರ ಪ್ರಕಾರ, ರಂಜಾನ್ ಸಮಯದಲ್ಲಿ, ಉಪವಾಸ ಮಾಡುವ ಜನರು ತಿನ್ನುವ ಮತ್ತು ಕುಡಿಯುವುದಕ್ಕೆ ಸಂಬಂಧಿಸಿದ ಕೆಲವು ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳು ವ್ಯಕ್ತಿಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.    

PREV
18
ರಂಜಾನ್ ಉಪವಾಸ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

ಇಸ್ಲಾಮಿಕ್ ಕ್ಯಾಲೆಂಡರ್ ನ ಒಂಬತ್ತನೇ ತಿಂಗಳನ್ನು ರಂಜಾನ್ (Ramzan)ತಿಂಗಳು ಎಂದು ಆಚರಿಸಲಾಗುತ್ತೆ. ಪವಿತ್ರ ರಂಜಾನ್ ತಿಂಗಳಲ್ಲಿ, ಮುಸ್ಲಿಂ ಸಮುದಾಯದ ಜನರು 30 ದಿನಗಳ ಉಪವಾಸ ಮಾಡುವ ಮೂಲಕ ಅಲ್ಲಾಹನನ್ನು ಪೂಜಿಸುತ್ತಾರೆ. ಈ ಸಮಯದಲ್ಲಿ, ಉಪವಾಸ ಮಾಡುವ ಜನರು ಸಹರಿ ಮತ್ತು ಇಫ್ತಾರ್ ರೂಪದಲ್ಲಿ ಏನನ್ನಾದರೂ ದಿನಕ್ಕೆ ಎರಡು ಬಾರಿ ಮಾತ್ರ ತಿನ್ನುತ್ತಾರೆ. 

28

ಆರೋಗ್ಯ ತಜ್ಞರ ಪ್ರಕಾರ, ಈ ಸಮಯದಲ್ಲಿ, ಉಪವಾಸ (Fasting) ಮಾಡುವ ಜನರು ತಿನ್ನುವ ಮತ್ತು ಕುಡಿಯುವುದಕ್ಕೆ ಸಂಬಂಧಿಸಿದ ಕೆಲವು ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳು ವ್ಯಕ್ತಿಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಆದ್ದರಿಂದ, ರಂಜಾನ್ ಸಮಯದಲ್ಲಿ ಉಪವಾಸ ಮಾಡುವಾಗ ತಪ್ಪಿಸಬೇಕಾದ ತಪ್ಪುಗಳು ಯಾವುವು ಎಂದು ತಿಳಿದುಕೊಳ್ಳೋಣ.  

38

ಉಪವಾಸದ ಸಮಯದಲ್ಲಿ ಈ ಆಹಾರ ಸಂಬಂಧಿತ ತಪ್ಪುಗಳನ್ನು ಮಾಡಲೇಬೇಡಿ-
- ರಂಜಾನ್ ಉಪವಾಸ ಮಾಡುವಾಗ, ನೀವು ದಿನವಿಡೀ ಹಸಿವಿನಿಂದ ಬಳಲಬೇಕಾಗುತ್ತೆ ಎಂದು ಭಾವಿಸಿ ಎಂದಿಗೂ ಹೆಚ್ಚು ತಿನ್ನಬೇಡಿ. ಸಹರಿ ಅಥವಾ ಇಫ್ತಾರ್ ಆಗಿರಲಿ, ಯಾವಾಗಲೂ ನಿಮ್ಮ ಆಹಾರದಲ್ಲಿ ಆರೋಗ್ಯಕರ ಅಹಾರ(Healthy food) ಸೇರಿಸಿ. ಅತಿಯಾಗಿ ತಿನ್ನುವ ನಿಮ್ಮ ಆಲೋಚನೆ ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು. 

48

ರಂಜಾನ್ ಸಮಯದಲ್ಲಿ, ನೀವು ಹೃದ್ರೋಗ, ಮಧುಮೇಹ ರೋಗಿ(Diabetic patients) ಅಥವಾ ರಕ್ತದೊತ್ತಡದಂತಹ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ, ಉಪವಾಸದಿಂದಾಗಿ ನಿಮ್ಮ ಔಷಧಿಯನ್ನು ತ್ಯಜಿಸಬೇಡಿ, ಹಾಗೆ ಮಾಡೋದರಿಂದ ನಿಮ್ಮ ಆರೋಗ್ಯ ಹಾಳಾಗುತ್ತೆ.

58

 ರಾತ್ರಿ ಮಲಗುವ ಒಂದು ಗಂಟೆ ಮೊದಲು ತಿನ್ನೋದನ್ನು ಮತ್ತು ಕುಡಿಯುವುದನ್ನು ನಿಲ್ಲಿಸಿ ಇದರಿಂದ ನೀವು ರಾತ್ರಿ ಚೆನ್ನಾಗಿ ನಿದ್ರೆ(Sleep) ಮಾಡಬಹುದು. ರಾತ್ರಿ ಮಲಗೋ ಮೊದಲು ಹೊಟ್ಟೆ ತುಂಬಾ ತಿಂದರೆ ಅದು ನಿದ್ರೆ ಮೇಲೆ ನೇರ ಪರಿಣಾಮ ಬಿರೋದ್ರ ಜೊತೆಗೆ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು ಹುಷಾರ್. 

68

ಬೇಸಿಗೆಯಲ್ಲಿ(Summer) ದೀರ್ಘಕಾಲ ಹೊರಗೆ ಇರೋದು ಡಿಹೈಡ್ರೇಶನ್ ಅಪಾಯವನ್ನು ಹೆಚ್ಚಿಸುತ್ತೆ. ಆದ್ದರಿಂದ, ರಂಜಾನ್ ಉಪವಾಸದಲ್ಲಿ ಬಿಸಿಲಿನಲ್ಲಿ ಹೊರಗೆ ಹೋಗೋದನ್ನು ತಪ್ಪಿಸಬೇಕು. ಆದಷ್ಟು ಮಧ್ಯಾಹ್ನ ಸಮಯ ಮನೆಯಿಂದ ಹೊರಗೆ ಹೋಗೋದನ್ನು ತಪ್ಪಿಸಿ. 
 

78

ಸಹರಿ ಮತ್ತು ಇಫ್ತಾರ್ಗಿಂತ(Iftar) ಅರ್ಧ ಗಂಟೆ ಮುಂಚಿತವಾಗಿ ಮತ್ತು ಅರ್ಧ ಘಂಟೆಯ ನಂತರ ನೀರನ್ನು ಕುಡಿಯಿರಿ, ಇದರಿಂದ ದಿನವಿಡೀ ದೇಹದಲ್ಲಿ ನೀರಿನ ಕೊರತೆ ಉಂಟಾಗೋದಿಲ್ಲ. ಆಗ ಡಿಹೈಡ್ರಾಷನ್ ಉಂಟಾಗೋ ಸಮಸ್ಯೆ ಇರೋಲ್ಲ. 

88

ರಕ್ತಹೀನತೆ ರೋಗಿಗಳು ಮತ್ತು ಗರ್ಭಿಣಿಯರು(Pregnant) ಉಪವಾಸವನ್ನು ಮಾಡಲೇಬಾರದು.
ರಂಜಾನ್ ಸಮಯದಲ್ಲಿ, ಕರಿದ ವಸ್ತುಗಳ ಬದಲು ಫೈಬರ್ ಭರಿತ ಆಹಾರವನ್ನು ನಿಮ್ಮ ಆಹಾರದ ಒಂದು ಭಾಗವಾಗಿ ಮಾಡಿ. ಹೀಗೆ ಮಾಡೋದರಿಂದ, ನಿಮಗೆ ದೀರ್ಘಕಾಲದವರೆಗೆ ಹಸಿವಾಗೋದಿಲ್ಲ ಮತ್ತು ಹೊಟ್ಟೆ ತುಂಬಿರುತ್ತೆ .  

Read more Photos on
click me!

Recommended Stories