ಬೀಟ್ರೋಟ್, ಟೊಮೆಟೊ ಮಾತ್ರವಲ್ಲ ಈ ಆಹಾರಗಳೂ ರಕ್ತಕ್ಕೆ ಒಳಿತು

First Published | Jun 20, 2022, 5:15 PM IST

ಯಾವುದೇ ಆರೋಗ್ಯವಂತ (Health Man) ವ್ಯಕ್ತಿಯು ರಕ್ತದಾನ (blood donate) ಮಾಡಬಹುದುಅನ್ನೋದು ನಿಮಗೆ ಗೊತ್ತೇ ಇದೆ. ಆದರೆ ರಕ್ತದಾನ ಮಾಡಲು ನಿಮ್ಮ ದೇಹದಲ್ಲಿ ಸಾಕಷ್ಟು ರಕ್ತವಿರಬೇಕು ಆಲ್ವಾ?. ರಕ್ತವೇ ಇಲ್ಲಾಂದ್ರೆ ನೀವು ಅರೋಗ್ಯವಾಗಿದ್ರೂ ರಕ್ತದಾನ ಮಾಡಲು ಸಾಧ್ಯವಿಲ್ಲ. ಹಾಗಾದ್ರೆ ರಕ್ತ ಹೆಚ್ಚಿಸಲು ನೀವು ಸರಿಯಾದ ಆಹಾರ ಸೇವಿಸಬೇಕು. ಈ ಹತ್ತು ಆಹಾರಗಳು ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತವೆ.

ಪಪ್ಪಾಯಿ ಎಲೆಯ ರಸ

ಹೌದು, ಪಪ್ಪಾಯಿ ಮಾತ್ರವಲ್ಲ, ಪಪ್ಪಾಯಿ ಎಲೆಯ (papaya leaves) ಸಾರಗಳು ಸಹ ಪ್ಲೇಟ್‌ಲೆಟ್ಸ್ ಸಂಖ್ಯೆ ಹೆಚ್ಚಿಸುತ್ತೆ. ಮತ್ತೊಂದು ಅಧ್ಯಯನವು ಪಪ್ಪಾಯಿ ಎಲೆಯ ರಸ ಡೆಂಗ್ಯೂ (Dengue) ರೋಗಿಗಳಿಗೆ ಪ್ಲೇಟ್ಲೆಟ್ ಸಂಖ್ಯೆ ಹೆಚ್ಚಿಸಲು ಸಹಕಾರಿ ಎಂದು ತಿಳಿಸಿದೆ. ಪಪ್ಪಾಯಿ ಹಾಗೆ ತಿನ್ನಲು ಸಾಧ್ಯವಿಲ್ಲದೇ ಇದ್ದರೆ, ನೀವು ಎಲೆ ಸಾರದ ಮಾತ್ರೆಗಳನ್ನು ಸಹ ಬಳಸಬಹುದು. 

ದಾಳಿಂಬೆ

 ದಾಳಿಂಬೆಯಲ್ಲಿ ಪಾಲಿಫಿನಾಲ್ ಆಂಟಿಆಕ್ಸಿಡೆಂಟ್ ಮತ್ತು ನೈಟ್ರೇಟ್ ಗಳು ಹೆಚ್ಚಾಗಿರುತ್ತವೆ,  ಪ್ರತಿದಿನ 500 ಮಿಲಿ ದಾಳಿಂಬೆ (Pomegranate) ರಸ ಸೇವಿಸುವುದರಿಂದ ಹಿಮೋಗ್ಲೋಬಿನ್ ವೇಗವಾಗಿ ಹೆಚ್ಚಾಗುತ್ತದೆ. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿ.

Tap to resize

ಈರುಳ್ಳಿ

ಹೌದು, ರಕ್ತ ಹೆಚ್ಚಿಸಲು ಈರುಳ್ಳಿ ಸಹ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಫ್ಲೇವನಾಯ್ಡ್ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ಹೃದಯದ ಆರೋಗ್ಯಕ್ಕೆ (Healthy Heart)  ಉತ್ತಮ. ಈರುಳ್ಳಿ ರಕ್ತದ ಹರಿವು ಮತ್ತು ರಕ್ತನಾಳಗಳ ಅಗಲೀಕರಣಕ್ಕೆ ಸಹಾಯ ಮಾಡುತ್ತದೆ, ಅಲ್ಲದೇ ಇದು ಉರಿಯೂತ ಶಮನಕಾರಿ ಗುಣ ಹೊಂದಿದ್ದು, ರಕ್ತನಾಳಗಳು ಮತ್ತು ಅಪಧಮನಿಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರಕ್ತದ ಹರಿವನ್ನು ಸುಧಾರಿಸುತ್ತೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ (garlic) ಸಲ್ಫರ್ ಸಂಯುಕ್ತವಾದ ಅಲಿಸಿನ್ ಎಂಬ ಅಂಶ ಇದೆ, ಇದು ರಕ್ತನಾಳಗಳನ್ನು ವಿಶ್ರಾಂತಿಗೊಳಿಸುವ ಮೂಲಕ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಕಡಿಮೆ ರಕ್ತದೊತ್ತಡವನ್ನು (Blood Pressure) ಹೆಚ್ಚಿಸುತ್ತದೆ.

ಪಾಲಕ್

 ಕಬ್ಬಿಣದಂಶ ಹೆಚ್ಚಿರುವ ಪಾಲಕ್ ಸೊಪ್ಪು ರಕ್ತದ ಕೊರತೆ ನೀಗಿಸಲು ಬೆಸ್ಟ್ ಆಯ್ಕೆಯಾಗಿದೆ. ಕಬ್ಬಿಣದ (Iron) ಹೊರತಾಗಿ, ಇದು ವಿಟಮಿನ್ ಎ ಮತ್ತು ಸಿ ಮೊದಲಾದ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಾಲಕ್ ರಸ ಕುಡಿಯಬಹುದು. ಇದು ರಕ್ತ ಹೆಚ್ಚಲು ಮತ್ತು ತೂಕ ಇಳಿಕೆಯಾಗಲು ಸಹಾಯ ಮಾಡುತ್ತೆ.

ಬೀಟ್ ರೂಟ್

ಬೀಟ್ರೂಟ್ ರಸವನ್ನು ರಕ್ತ ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ ಆಯ್ಕೆ ಎನ್ನಲಾಗುತ್ತೆ. ಬೀಟ್ರೂಟ್ ಹೆಚ್ಚಿನ ಪ್ರಮಾಣದ ನೈಟ್ರೇಟ್ ಅನ್ನು ಹೊಂದಿದೆ, ಇದನ್ನು ನಿಮ್ಮ ದೇಹವು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸುತ್ತದೆ. ನೈಟ್ರಿಕ್ ಆಕ್ಸೈಡ್ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ಸ್ನಾಯು ಅಂಗಾಂಶಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತೆ.

ಹುಳಿ ಹಣ್ಣು

ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿಗಳಂತಹ ಸಿಟ್ರಸ್ ಹಣ್ಣುಗಳು (citrus fruits) ಫ್ಲೇವನಾಯ್ಡ್ ಗಳು ಸೇರಿದಂತೆ ಹಲವಾರು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇವುಗಳನ್ನು ಸೇವಿಸೋದ್ರಿಂದ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಬಹುದು, ಇದು ನಿಮ್ಮ ಅಪಧಮನಿಗಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ರಕ್ತದ ಹರಿವು ಮತ್ತು ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಚೆನ್ನಾಗಿ ಆಗುವಂತೆ ಮಾಡುತ್ತೆ..

ಟೊಮಾಟೋ

ಕೆಂಪು-ಕೆಂಪು ಟೊಮೆಟೊಗಳು (tomato)  ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತವೆ ಮತ್ತು ಹಿಮೋಗ್ಲೋಬಿನ್ ಅನ್ನು ಸರಿಯಾಗಿಡಲು ಸಹಾಯ ಮಾಡುತ್ತದೆ. ಆ ಮೂಲಕ ರಕ್ತದೊತ್ತಡವನ್ನು ಸುಧಾರಿಸಲು ಟೊಮ್ಯಾಟೋ ಸಹಾಯ ಮಾಡುತ್ತೆ.

ಕುಂಬಳಕಾಯಿ ಬೀಜಗಳು

 ಕುಂಬಳಕಾಯಿ ಬೀಜಗಳು (pumpkin seeds) ಹಿಮೋಗ್ಲೋಬಿನ್ ಹೆಚ್ಚಿಸಲು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅವು ಕಬ್ಬಿಣ, ಕ್ಯಾಲ್ಸಿಯಂ (Calcium), ಮೆಗ್ನೀಸಿಯಮ್ (Magnesium) ಮತ್ತು ಮ್ಯಾಂಗನೀಸ್ ನಿಂದ ಸಮೃದ್ಧವಾಗಿವೆ.  ಸಲಾಡ್ಗಳು ಅಥವಾ ಸ್ಮೂ ತಯಾರಿಸುವ ಮೂಲಕ ನಿಮ್ಮ ಆಹಾರದಲ್ಲಿ ಕುಂಬಳಕಾಯಿ ಬೀಜ ಸೇರಿಸಬಹುದು ಅಥವಾ ಹಸಿಯಾಗಿ ತಿನ್ನಬಹುದು.

ಕಿಡ್ನಿ ಬೀನ್ಸ್

ಕಡಲೆಕಾಳು, ಬಿಳಿ ರಾಜ್ಮಾ, ಬಟಾಣಿ, ಕೆಂಪು ರಾಜ್ಮಾದಂತಹ ಬೀನ್ಸ್ ರಕ್ತ ಹೆಚ್ಚಿಸಲು ಅತ್ಯಂತ ಪ್ರಯೋಜನಕಾರಿ. ಇದು ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಸರಿದೂಗಿಸುತ್ತದೆ, ರಕ್ತದ ಹರಿವನ್ನು ಸಹ ಸುಧಾರಿಸುತ್ತದೆ.

Latest Videos

click me!