Children Health Tips: ಮಕ್ಕಳಿಗೆ ತಪ್ಪದೇ ಕಲಿಸಿಕೊಡಬೇಕು ಈ ಅಭ್ಯಾಸಗಳು

Published : Apr 18, 2022, 05:07 PM IST

Tips for children health: ಮಕ್ಕಳು ಆರೋಗ್ಯಕರವಾಗಿ ಬೆಳೆಯಬೇಕಾದರೆ ಕೆಲವೊಂದು ಅಭ್ಯಾಸಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹೆಚ್ಚು ನೀರು ಕುಡಿಯುವುದು, ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸೇವಿಸುವುದು, ಆಡುವುದು ಹೀಗೇ ಹತ್ತು ಹಲವು ಅಭ್ಯಾಸಗಳು ಮಕ್ಕಳ ಆರೋಗ್ಯಕ್ಕೆ ಪೂರಕ. ಅಂತಾ ಟಿಪ್ಸ್‌ಗಳು ಇಲ್ಲಿವೆ. 

PREV
18
Children Health Tips: ಮಕ್ಕಳಿಗೆ ತಪ್ಪದೇ ಕಲಿಸಿಕೊಡಬೇಕು ಈ ಅಭ್ಯಾಸಗಳು

ಆರೋಗ್ಯಕರ ಆಹಾರಗಳನ್ನು(Healthy Food) ಸೇವಿಸಿ
ತಿನ್ನುವುದು ನಮ್ಮ ಜೀವನದ ಅತ್ಯಗತ್ಯ ಭಾಗವಾಗಿದೆ. ಆದ್ದರಿಂದ ನಾವು ಏನೇ ತಿಂದರೂ, ಅದು ನಮ್ಮ ದೇಹಕ್ಕೆ ಆರೋಗ್ಯಕರ ಮತ್ತು ಪೌಷ್ಟಿಕವಾಗಿರಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ಆರೋಗ್ಯಕರ ಆಹಾರ ಸೇವನೆಯ ಮಹತ್ವವನ್ನು ತಿಳಿಸಿಕೊಡಿ, ಕುರುಕುರು ತಿಂಡಿಗಳನ್ನು ಸೇವಿಸಿದ್ರೆ ಏನೆಲ್ಲಾ ಅಡ್ಡಪರಿಣಾಮಗಳಿವೆ ಅನ್ನೋದನ್ನು ಅವರಿಗೆ ತಿಳಿಸಿ. 

28

ಹೆಚ್ಚು ನೀರು(Water) ಕುಡಿಯಿರಿ
ಕುಡಿಯುವ ನೀರು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ನಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಪ್ರತಿದಿನ ಕನಿಷ್ಠ ಎಂಟು ಲೋಟ ನೀರು ಕುಡಿಯುವಂತೆ ಪ್ರೋತ್ಸಾಹಿಸಬೇಕು. ಬೇಸಿಗೆಯಲ್ಲಿ ಸಾಧ್ಯವಾದಷ್ಟು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಬೇಕು. 

38

ಖಾಲಿಯಾಗಿ ಕುಳಿತುಕೊಳ್ಳಬೇಡಿ
ನಾವು ಯಾವುದೇ ಸಮಯವನ್ನು ವ್ಯರ್ಥ ಮಾಡಿದರೂ, ಅದು  ಎಂದಿಗೂ ಹಿಂತಿರುಗುವುದಿಲ್ಲವಾದ್ದರಿಂದ ಸೋಮಾರಿತನದಿಂದ ಕುಳಿತು ತನ್ನ ಸಮಯವನ್ನು(Time) ವ್ಯರ್ಥ ಮಾಡದಂತೆ ಮಗುವಿಗೆ ಕಲಿಸಿ. ಮಕ್ಕಳಿಗೆ ಏನಾದರೊಂದು ಸಣ್ಣ ಪುಟ್ಟ ಕೆಲಸ ನೀಡಿ. ಅದನ್ನು ಶ್ರದ್ಧೆಯಿಂದ ಮಾಡಲು ಕಲಿಸಿ. 

48

ಕಂಪನಿಯನ್ನು ಆನಂದಿಸಿ
ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಇರಲಿ, ಯಾವಾಗಲೂ ಅವರ ಸಹವಾಸವನ್ನು ಆನಂದಿಸಿ. ಮಕ್ಕಳಿಗೆ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರೋತ್ಸಾಹ (Encouragement)ನೀಡಿ. ಇದರಿಂದ ಅವರಿಗೆ ಕುಟುಂಬದ ಪ್ರಾಮುಖ್ಯತೆಯ ಬಗ್ಗೆ, ಸಂಬಂಧದ ಬಗ್ಗೆ ತಿಳಿಯುತ್ತದೆ. 

58

ವಸ್ತುಗಳನ್ನು ಗಮನಿಸಿ
ನೀವು ಏನೇ ಕೇಳಿದರೂ, ಎಲ್ಲವನ್ನೂ ನಂಬಬೇಡಿ. ಬದಲಾಗಿ, ವಿಷಯಗಳನ್ನು ಗಮನಿಸಿ ಮತ್ತು ನಿಮ್ಮ ಅನುಭವದಿಂದ ಜ್ಞಾನವನ್ನು ಪಡೆದುಕೊಳ್ಳಿ. ಯಾವುದನ್ನು ನಂಬಬೇಕು, ಯಾವುದನ್ನೂ ನಂಬಬಾರದು, ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎಂಬುದನ್ನು ಮಕ್ಕಳಿಗೆ ಬಾಲ್ಯದಲ್ಲೇ(Childhood) ತಿಳಿಸಿ ಕೊಡುವುದು ಉತ್ತಮವಾಗಿದೆ.  
 

68

ಓದುವ(Reading) ಅಭ್ಯಾಸ
ನೀವು ದಿನಕ್ಕೆ ಒಂದು ಪುಟವನ್ನು ಓದಿದರೂ ಸಹ ಅದನ್ನು ಮಗುವಿಗೆ ತಿಳಿಸಿ. ಆದರೆ  ಒಂದು ದಿನವನ್ನೂ ಓದದೆ ಬಿಟ್ಟರೆ, ಅದು ಅರ್ಥಹೀನವಾಗುತ್ತದೆ ಎಂದು ಮಗುವಿಗೆ ಅರ್ಥ ಮಾಡಿಸಿ. ಮಕ್ಕಳಿಗಾಗಿ ಸಣ್ಣ ಸಣ್ಣ ಪುಸ್ತಕಗಳನ್ನು ಮನೆಗೆ ತನ್ನಿ, ಅದನ್ನು ಮಕ್ಕಳಿಗೆ ಓದಲು ನೀಡಿ, ಇದರಿಂದ ಮಕ್ಕಳಿಗೆ ಬಾಲ್ಯದಲ್ಲೇ ಪುಸ್ತಕದ ಒಲವು ಮೂಡುತ್ತದೆ. 

78

ನಿಮ್ಮನ್ನು ನೀವು ಸ್ವಚ್ಛವಾಗಿರಿಸಿಕೊಳ್ಳಿ.(CLean)
ಶುಚಿತ್ವವು ಭಕ್ತಿಗಿಂತ ಮಿಗಿಲಾದುದು. ನಿಮ್ಮ ದೇಹವನ್ನು ಸ್ವಚ್ಛವಾಗಿಡುವುದು ರೋಗಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಬಾಲ್ಯದಲ್ಲೇ ಸ್ವಚ್ಛತೆಯ ಪಥವನ್ನು ತಿಳಿಸಿಕೊಡಬೇಕು. ಅದಕ್ಕಾಗಿ ನೀವು ಸಮಯವನ್ನು ಮೀಸಲಿಡಬೇಕು. ಹೀಗಿದ್ದರೆ ಮಾತ್ರ ಮಕ್ಕಳು ಶುಚಿತ್ವದ ಬಗ್ಗೆ ತಿಳಿಯುತ್ತಾರೆ. 
 

88

ಹೆಚ್ಚಿನ ನಿದ್ರೆಯೂ(Sleep)  ಅಪಾಯಕಾರಿಯಾಗಿದೆ.
ನಿದ್ರೆ ಮಾಡುವುದು ಮುಖ್ಯ, ಆದರೆ ದಿನಕ್ಕೆ 9 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬೇಡಿ. ಏಕೆಂದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಹಿರಿಯರಿಗೆ ಮಾತ್ರವಲ್ಲ, ಮಕ್ಕಳಿಗೂ ಅನ್ವಯವಾಗುತ್ತದೆ. ಮಕ್ಕಳಿಗೂ ಹೆಚ್ಚು ಹೊತ್ತು ನಿದ್ದೆ ಮಾಡಲು ಬಿಡಬೇಡಿ. ಅವರನ್ನು ಬೇಗನೆ ಎಬ್ಬಿಸುವುದು ಉತ್ತಮವಾಗಿದೆ. 

click me!

Recommended Stories