GBS: ಮಕ್ಕಳನ್ನು ಕಾಡುತ್ತೆ ಈ ಮಾರಣಾಂತಿಕ ರೋಗ

First Published | Jul 14, 2023, 5:42 PM IST

ಇತ್ತೀಚೆಗೆ, ಪೆರುವಿನಲ್ಲಿ ಗುಲ್ಲೆನ್-ಬಾರ್ ಸಿಂಡ್ರೋಮ್ ಬಗ್ಗೆ ಕೇಳಿ ಬರುತ್ತಿದೆ. ಏನಿದು ಸಮಸ್ಯೆ? ಇದು ಆಟೋಇಮ್ಯೂನ್ ಸಿಂಡ್ರೋಮ್. ಗುಲ್ಲೆನ್-ಬಾರ್ ಸಿಂಡ್ರೋಮ್ನಲ್ಲಿ, ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮೆದುಳು ಮತ್ತು ಬೆನ್ನುಹುರಿಯ ನರಗಳ ಮೇಲೆ ದಾಳಿ ಮಾಡುತ್ತೆ. ಇದು ದೇಹದ ಕೆಲವು ಭಾಗಗಳಲ್ಲಿ ತಾತ್ಕಾಲಿಕ ದೌರ್ಬಲ್ಯ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು. 

ಇತ್ತೀಚೆಗೆ, ಪೆರುವಿನಲ್ಲಿ ಗುಲ್ಲೆನ್-ಬಾರ್ ಸಿಂಡ್ರೋಮ್ ಬಗ್ಗೆ ಕೇಳಿ ಬರುತ್ತಿದೆ. ಏನಿದು ಸಮಸ್ಯೆ? ಇದೊಂದು ಆಟೋಇಮ್ಯೂನ್ ಸಿಂಡ್ರೋಮ್. ಗುಲ್ಲೆನ್-ಬಾರ್ ಸಿಂಡ್ರೋಮ್‌ನಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು (Immunity system) ಮೆದುಳು ಮತ್ತು ಬೆನ್ನುಹುರಿ ನರಗಳ ಮೇಲೆ ದಾಳಿ ಮಾಡುತ್ತೆ. ಇದು ದೇಹದ ಕೆಲವು ಭಾಗಗಳಲ್ಲಿ ತಾತ್ಕಾಲಿಕ ದೌರ್ಬಲ್ಯ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು. 

ಕೊರೋನಾದಿಂದ ತೊಂದರೆಗೀಡಾಗಿದ್ದ ಜನರಿಗೆ ಇದೀಗ ಜಿಬಿಎಸ್ ಸಿಂಡ್ರೋಮ್ ಭೀತಿ ಎದುರಾಗಿದೆ. ಜಿಬಿಎಸ್ ಎದೆಯ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತೆ. ಈ ಕಾರಣದಿಂದಾಗಿ, ಉಸಿರಾಟದ ತೊಂದರೆ ಉಂಟಾಗಬಹುದು ಮತ್ತು  ಸ್ವಲ್ಪ ಸಮಯದವರೆಗೆ ವೆಂಟಿಲೇಟರ್ನಲ್ಲಿ(Ventilator) ಉಳಿಯಬೇಕಾಗಬಹುದು. ಆದರೆ ಈ ರೋಗದಿಂದ ಪಾರ್ಶ್ವವಾಯುವಿಗೆ ಒಳಗಾದರೆ, ಭಯಪಡುವ ಅಗತ್ಯವಿಲ್ಲ, ಅದು ತಾತ್ಕಾಲಿಕ.

Latest Videos


ಏನಿದು ಗುಲ್ಲೆನ್-ಬಾರ್ ಸಿಂಡ್ರೋಮ್?
ಯೂನಿವರ್ಸಿಟಿ ರೋಚೆಸ್ಟರ್ ಮೆಡಿಸಿನ್ ಸೆಂಟರ್ ಪ್ರಕಾರ, ಇದು ದೇಹದ ನರಗಳ ಮೇಲೆ ಪರಿಣಾಮ ಬೀರುವ ಅಲ್ಪಾವಧಿಯ ಮಾರಣಾಂತಿಕ ಕಾಯಿಲೆಯಾಗಿದೆ. ಇದು ಸ್ನಾಯು ದೌರ್ಬಲ್ಯ, ನೋವು(Pain) ಮತ್ತು ನುಂಗಲು ಬಳಸುವ ಸ್ನಾಯುಗಳು ಮತ್ತು ಮುಖ, ಎದೆ ಮತ್ತು ಕಾಲುಗಳ ಪಾರ್ಶ್ವವಾಯುವಿಗೆ ಕಾರಣವಾಗಬಹುದು. 

ಈ ಸಮಸ್ಯೆ ಇದ್ದರೆ, ಎದೆಯ ಪಾರ್ಶ್ವವಾಯು ಮತ್ತು ನುಂಗುವ ಸ್ನಾಯುಗಳು ಉಸಿರಾಟದ ತೊಂದರೆ, ಉಸಿರುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಸಾವಿಗೆ ಕಾರಣವಾಗಬಹುದು. ಈ ಸಿಂಡ್ರೋಮ್ ನಿಂದ(Syndrome) ಬಳಲುತ್ತಿರುವ ಹೆಚ್ಚಿನ ಮಕ್ಕಳು ಯಾವುದೇ ಸಮಸ್ಯೆಗಳಿಲ್ಲದೇ ಚೇತರಿಸಿಕೊಳ್ಳುತ್ತಾರೆ. ರೋಗಲಕ್ಷಣಗಳು ಪ್ರಾರಂಭವಾದ ಕೆಲವೇ ವಾರಗಳಲ್ಲಿ ಜಿಬಿಎಸ್ ಸಾಮಾನ್ಯವಾಗಿ ಪ್ರಾರಂಭವಾಗುತ್ತೆ.

ಮಕ್ಕಳಲ್ಲಿ ಜಿಬಿಎಸ್ ಲಕ್ಷಣಗಳು
ಜಿಬಿಎಸ್ನ ರೋಗಲಕ್ಷಣಗಳು ಪ್ರತಿ ಮಗುವಿನಲ್ಲಿ ವಿಭಿನ್ನವಾಗಿರಬಹುದು. ಕೈ ಮತ್ತು ಕಾಲುಗಳ ಬೆರಳುಗಳಲ್ಲಿ ನೋವು ಅಥವಾ ಮರಗಟ್ಟುವಿಕೆ, ಕಾಲುಗಳಲ್ಲಿ ದೌರ್ಬಲ್ಯ ಅಥವಾ ತೋಳಿನವರೆಗೆ ನೋವು, ನಡೆಯಲು ಕಷ್ಟ, ಕಿರಿಕಿರಿ, ಉಸಿರಾಟದ ತೊಂದರೆ(Breathing problem) ಮತ್ತು ಮುಖದ ಮೇಲಿನ ದೌರ್ಬಲ್ಯವನ್ನು ಸಹ ಇದು ಒಳಗೊಂಡಿರಬಹುದು. ಇಂತಹ ಯಾವುದೇ ರೋಗಲಕ್ಷಣ ಕಂಡು ಬಂದರೆ, ಮಗುವನ್ನು ತಕ್ಷಣ ವೈದ್ಯರಿಗೆ ತೋರಿಸಿ.

ಯಾವ ಮಕ್ಕಳಿಗೆ(Children) ಜಿಬಿಎಸ್ ಬರಬಹುದು?
ಜಿಬಿಎಸ್ ಅಪರೂಪದ ಅಸ್ವಸ್ಥತೆಯಾಗಿದೆ ಆದರೆ ಇದು ಯಾವುದೇ ಮಗುವಿಗೂ ಸಹ ಕಾಡುವಂತಹ ಕಾಯಿಲೆಯಾಗಿದೆ. ಮಗುವಿನ ರೋಗಲಕ್ಷಣ, ವಯಸ್ಸು ಮತ್ತು ಆರೋಗ್ಯ ಸ್ಥಿತಿಯ ಆಧಾರದ ಮೇಲೆ ಮಾತ್ರ ಚಿಕಿತ್ಸೆ ನೀಡಲಾಗುತ್ತೆ. ಚಿಕಿತ್ಸೆಯು ಮಗುವಿನ ಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತೆ. ಜಿಬಿಎಸ್ ಅನ್ನು ಗುಣಪಡಿಸಲು ಯಾವುದೇ ಚಿಕಿತ್ಸೆ ಇಲ್ಲ. ಸಮಯಕ್ಕೆ ಸರಿಯಾಗಿ ರೋಗಲಕ್ಷಣಗಳನ್ನು ತಿಳಿದುಕೊಂಡ್ರೆ, ಸುಲಭವಾಗಿ ನಿಯಂತ್ರಿಸಬಹುದು. 

ಮಕ್ಕಳಲ್ಲಿ ಜಿಬಿಎಸ್ ಗೆ ಕಾರಣಗಳು
ಸಂಶೋಧಕರಿಗೆ ಈ ಸಿಂಡ್ರೋಮ್ನ ನಿಖರವಾದ ಕಾರಣ ತಿಳಿದಿಲ್ಲ. ಇದು ಆಟೋಇಮ್ಯೂನ್(Auto immune) ಅಸ್ವಸ್ಥತೆಯಾಗಿದ್ದು, ಇದರಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ತನ್ನದೇ ಆದ ನರಮಂಡಲದ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತೆ. ಇದು ವೈರಲ್ ಸೋಂಕು, ಶಸ್ತ್ರಚಿಕಿತ್ಸೆ, ಗಾಯ ಅಥವಾ ಕೆಲವು ಸಂದರ್ಭಗಳಲ್ಲಿ ಲಸಿಕೆಗೆ ರಿಯಾಕ್ಷನ್ ನಲ್ಲಿ ಸಂಭವಿಸುತ್ತೆ.
 

ಐಸಿಯು(ICU) ಅಗತ್ಯವಾಗಬಹುದು
ಈ ಅಸ್ವಸ್ಥತೆಯು ತಾನಾಗಿಯೇ ಗುಣಮುಖವಾಗಬಹುದು, ಕೆಲವೊಮ್ಮೆ ಇದು ಮಾರಣಾಂತಿಕವೂ ಆಗಬಹುದು. ಕೆಲವು ಚಿಕಿತ್ಸೆಗಳೊಂದಿಗೆ ಚೇತರಿಕೆಯನ್ನು ತ್ವರಿತವಾಗಿ ಕಾಣಬಹುದು, ಆದರೆ ಅದನ್ನು ತ್ವರಿತವಾಗಿ ಕಂಡುಹಿಡಿಯೋದು ಮುಖ್ಯ. ಮಗುವನ್ನು ಐಸಿಯುನಲ್ಲಿ ಇಡಬೇಕಾಗಬಹುದು. ಇದರ ಚಿಕಿತ್ಸೆಯಲ್ಲಿ, ಉಸಿರಾಟದ ಸಮಸ್ಯೆಗಳನ್ನು ತಡೆಗಟ್ಟುವ ಮತ್ತು ರೋಗಲಕ್ಷಣಗಳನ್ನು ನಿವಾರಿಸಲಾಗುತ್ತೆ.
 

click me!