ಸತು ಮತ್ತು ವಿಟಮಿನ್ ಸಿ ಯ ಉತ್ತಮ ಮೂಲವಾಗಿರುವ ಸೋರೆಕಾಯಿ (bottle gourd) ಎಷ್ಟೊಂದು ಸ್ಕಿನ್ ಫ್ರೆಂಡ್ಲಿ ಗುಣಗಳನ್ನು ಹೊಂದಿದೆ ಗೊತ್ತಾ?. ಒಟ್ಟಾರೆ ಚರ್ಮದ ಆರೋಗ್ಯಕ್ಕೆ ವಿಟಮಿನ್ ಸಿ ಅತ್ಯಗತ್ಯ. ಇದು ಯುವಿ ವಿಕಿರಣದ ಪರಿಣಾಮಗಳಿಂದ ಚರ್ಮವನ್ನು ರಕ್ಷಿಸುತ್ತೆ. ಅಷ್ಟೇ ಅಲ್ಲ, ಇದು ಚರ್ಮದ ಸುಕ್ಕುಗಟ್ಟುವಿಕೆ ಮೊದಲಾದ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಲು ಸಹಾಯ ಮಾಡುತ್ತೆ.
ಹೈಡ್ರೇಶನ್ (hydration):
ಸೋರೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿದೆ, ಇದು ಹೈಡ್ರೇಟಿಂಗ್ ತರಕಾರಿಯಾಗಿದೆ. ಹೆಚ್ಚಿನ ನೀರಿನ ಅಂಶವಿರುವ ಆಹಾರವನ್ನು ಸೇವಿಸೋದ್ರಿಂದ ದೇಹದಲ್ಲಿ ಸರಿಯಾದ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ತೂಕ ನಷ್ಟಕ್ಕೆ ಸಹಾಯ (weight control) :
ಸೋರೆಕಾಯಿಯಲ್ಲಿ ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಫೈಬರ್ (Fibre) ಇದೆ, ಇದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆ ತುಂಬಿದ ಭಾವನೆ ನೀಡೋದ್ರಿಂದ ಅತಿಯಾಗಿ ತಿನ್ನುವ ಆಸೆಯನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ನಷ್ಟ ಅಥವಾ ನಿರ್ವಹಣೆ ಮಾಡಲು ನೆರವಾಗುತ್ತೆ.
ಜೀರ್ಣಕ್ರಿಯೆ (digestion):
ಸೋರೆಕಾಯಿಯಲ್ಲಿರುವ ಹೆಚ್ಚಿನ ಫೈಬರ್ ಜೀರ್ಣಕ್ರಿಯೆ ಚೆನ್ನಾಗಿ ಆಗಲು ಸಹಾಯ ಮಾಡುತ್ತೆ. ಜೊತೆಗೆ ಇದು ಮಲಬದ್ಧತೆಯನ್ನು ಸಹ ತಡೆಯುತ್ತೆ, ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ.
ಹೃದಯದ ಆರೋಗ್ಯ (healthy heart):
ಸೋರೆಕಾಯಿಯಲ್ಲಿರುವ ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಅಂಶ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತೆ. ಫೈಬರ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದರೆ ಪೊಟ್ಯಾಸಿಯಮ್ ರಕ್ತದೊತ್ತಡವನ್ನು (Blood Pressure) ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಉತ್ಕರ್ಷಣ ನಿರೋಧಕವಾಗಿದ್ದು, ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತೆ.
ಪೌಷ್ಠಿಕಾಂಶ (protein):
ಸೋರೆಕಾಯಿ ವಿಟಮಿನ್ ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಖನಿಜಗಳಂತಹ ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳುವುದು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವುದು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಇದು ನೆರವಾಗುತ್ತೆ.
ಚರ್ಮ ಮತ್ತು ಕೂದಲಿನ ಆರೋಗ್ಯ )healthy skin and hair):
ಸೋರೆಕಾಯಿಯಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ನೀರು ಇದ್ದು, ಇದು ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ಉತ್ತಮ. ಆಂಟಿಆಕ್ಸಿಡೆಂಟ್‌ಗಳು ಫ್ರೀ ರ್ಯಾಡಿಕಲ್ಸ್‌ನಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುವುದರ ಜೊತೆಗೆ, ಆರೋಗ್ಯಕರ ಕೂದಲಿಗೆ ಸಹಾಯ ಮಾಡುತ್ತೆ.
ನಿರ್ವಿಷೀಕರಣ (detox):
ಸೋರೆಕಾಯಿ ಮೂತ್ರವರ್ಧಕ ಗುಣಗಳನ್ನು ಹೊಂದಿದೆ ಮತ್ತು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತೆ. ಇದು ಮೂತ್ರ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಮತ್ತು ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಿ ದೆಹವನ್ನು ಡಿಟಾಕ್ಸ್ ಮಾಡುತ್ತೆ.