ಮಾನ್ಸೂನ್: ರೋಗಗಳಿಂದ ದೂರ ಉಳಿಯಲು ಸೂಪ್ ಕುಡಿಯಿರಿ…

First Published | Jul 14, 2023, 4:24 PM IST

ಮಳೆಗಾಲವು ಸಾಕಷ್ಟು ಸೋಂಕಿನ ಅಪಾಯ ತರುತ್ತದೆ. ಈ ಸಮಯದಲ್ಲಿ, ನೀವು ನಿಮ್ಮನ್ನು ಆರೋಗ್ಯವಾಗಿಡಲು ಬಯಸಿದರೆ, ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದಕ್ಕಾಗಿ, ಕೆಲವು ಆಹಾರಗಳನ್ನು ಅವಾಯ್ಡ್ ಮಾಡಬೇಕಾಗುತ್ತೆ, ಇನ್ನು ಕೆಲವು ಆಹಾರಗಳನ್ನು ಸೇವಿಸಬೇಕಾಗುತ್ತೆ. ಈ ಸೀಸನ್‌ನಲ್ಲಿ ಸೂಪ್ ಕುಡಿಯುವುದು ಸಾಕಷ್ಟು ಪ್ರಯೋಜನ ನೀಡುತ್ತೆ. ಸೂಪ್ ಕುಡಿಯುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ನೋಡೋಣ.
 

ಮಾನ್ಸೂನ್ ಸೀಸನ್ (monsoon season) ಪ್ರತಿಯೊಬ್ಬರಿಗೂ ಸಂತೋಷ ನೀಡುತ್ತೆ ನಿಜಾ, ಆದರೆ ಮಳೆಯಿಂದಾಗಿ ಸಾಲು ಸಾಲು ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳ ಅಪಾಯವು ಈ ಸೀಸನ್‌ನಲ್ಲಿ ಹೆಚ್ಚಾಗುತ್ತದೆ, ಇದನ್ನು ತಪ್ಪಿಸಲು ಲೈಫ್ ಸ್ಟೈಲ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡೋದು ಅವಶ್ಯಕ. ಜೊತೆಗೆ ನಮ್ಮ ಆಹಾರದಲ್ಲೂ ಸಹ ಬದಲಾವಣೆ ಮಾಡಬೇಕು. 
 

ಮಾನ್ಸೂನ್‌ನಲ್ಲಿ ಆರೋಗ್ಯಕ್ಕೆ ಉತ್ತಮ ಆಹಾರಗಳನ್ನು ಸೇವಿಸಬೇಕು. ಇದು ರೋಗ ನಿರೋಧಕ ಶಕ್ತಿಯನ್ನು (immunity power) ಹೆಚ್ಚಿಸುತ್ತೆ ಮತ್ತು ಮಳೆಗಾಲದಲ್ಲಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ. ಇದಕ್ಕೆ ಸೂಪ್ ಕೂಡ ಉತ್ತಮ ಆಯ್ಕೆ.  ಮಳೆಗಾಲದಲ್ಲಿ ಸೂಪ್ ಕುಡಿಯುವುದರಿಂದ ಯಾವ ಪ್ರಯೋಜನಗಳನ್ನು ಪಡೆಯಬಹುದು ಅನ್ನೋದರ ಬಗ್ಗೆ ತಿಳಿಯೋಣ.
 

Tap to resize

ಮಳೆಗಾಲದಲ್ಲಿ ಸೂಪ್ ಏಕೆ ಕುಡಿಯಬೇಕು?
ದೇಹಕ್ಕೆ ಶಾಖ ನೀಡುತ್ತದೆ

ಮಳೆಗಾಲದಲ್ಲಿ ಸೂಪ್ ಕುಡಿಯುವುದು ಸಾಕಷ್ಟು ಆರಾಮದಾಯಕವಾಗಿದೆ ಏಕೆಂದರೆ ಇದು ಒಳಗಿನಿಂದ ದೇಹಕ್ಕೆ ಶಾಖವನ್ನು ನೀಡುತ್ತೆ. ಆಹಾರದಲ್ಲಿ ಒಂದು ಬಟ್ಟಲು ಸೂಪ್ ಸೇರಿಸುವುದರಿಂದ ದೇಹದಲ್ಲಿ ಆರೋಗ್ಯಕರ ತಾಪಮಾನ (healthy tempreture) ಕಾಪಾಡಿಕೊಳ್ಳುತ್ತದೆ. ಅದಕ್ಕಾಗಿಯೇ ಹೆಚ್ಚಾಗಿ ಹಿಲ್ ಸ್ಟೇಶನ್ ಗಳಲ್ಲಿ ಸೂಪ್ ಮುಖ್ಯವಾಗಿ ಕುಡಿಯಲಾಗುತ್ತೆ.

ತೂಕ ಇಳಿಸಿಕೊಳ್ಳಲು ಸಹಾಯಕ
ಸೂಪ್ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅಷ್ಟೇ ಅಲ್ಲ ಇದರಲ್ಲಿ ಕ್ಯಾಲೊರಿ ಪ್ರಮಾಣವೂ ಸಾಕಷ್ಟು ಕಡಿಮೆ. ಇದಲ್ಲದೆ, ಸೂಪ್ಸ್ ತೂಕ ಇಳಿಸಿಕೊಳ್ಳಲು (weight loss) ಸಹಕರಿಸುತ್ತದೆ. ಸೂಪಿನಲ್ಲಿ ತರಕಾರಿ ಅಥವಾ ಚಿಕನ್ (chicken soup) ಇರುತ್ತೆ, ಇದರಿಂದ ದೇಹಕ್ಕೆ ಪ್ರಮುಖ ಪೋಷಕಾಂಶಗಳು ಸಿಗುತ್ತವೆ. ಇದಲ್ಲದೆ, ಸೂಪ್ ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ಬೇಗ ಹಸಿವಾಗೋದಿಲ್ಲ.

ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧ
ಒಂದು ಬಟ್ಟಲು ಸೂಪ್ ಖನಿಜಗಳು ಮತ್ತು ಜೀವಸತ್ವಗಳ ಶಕ್ತಿ ಕೇಂದ್ರ. ಅಡುಗೆ ಮಾಡುವಾಗ ತರಕಾರಿ ತಮ್ಮ ಕೆಲವು ಪೋಷಕಾಂಶಗಳನ್ನು ಕಳೆದುಕೊಳ್ಳಬಹುದು. ಸೂಪ್ ತಯಾರಿಸುವಾಗ, ಎಲ್ಲಾ ತರಕಾರಿಗಳ ಪೋಷಕಾಂಶಗಳು ಅವುಗಳಲ್ಲಿ ಕಂಡುಬರುತ್ತವೆ. ಮುಂದಿನ ಬಾರಿ ನೀವು ಸೂಪ್ ತಯಾರಿಸಿದಾಗ, ಅದಕ್ಕೆ ಸಾಕಷ್ಟು ತರಕಾರಿಗಳನ್ನು (vegetable soup) ಸೇರಿಸಿ, ಇದರಿಂದ ಹೆಚ್ಚು ಹೆಲ್ತಿಯಾಗಿರುತ್ತೆ.
 

ಶೀತದ ವಿರುದ್ಧ ಹೋರಾಡಲು ಸಹಾಯ
ಮಳೆಗಾಲವು ಶೀತ ಮತ್ತು ಜ್ವರದ ಅಪಾಯವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಜನರು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹೀಗಿರೋವಾಗ, ಬಿಸಿ ಬಿಸಿ ಸೂಪ್ ಕುಡಿಯೋದ್ರಿಂದ ಶೀತ, ಜ್ವರದ ವಿರುದ್ಧ ಹೋರಾಡಬಹುದು. 

ರೋಗ ನಿರೋಧಕ ಶಕ್ತಿ ವರ್ಧಕ
ಮಾನ್ಸೂನ್ ಬಂದ ಕೂಡಲೇ, ಇನ್ನೂ ಅನೇಕ ರೋಗಗಳು ಬರುತ್ತವೆ. ಈ ರೋಗಗಳನ್ನು ತಪ್ಪಿಸಲು, ಮಾನ್ಸೂನ್ ನಲ್ಲಿ ಸೂಪ್ ಕುಡಿಯುವುದು ಆರೋಗ್ಯಕರವಾಗಿದೆ. ತರಕಾರಿ ಸೂಪ್ ಕುಡಿಯೋದ್ರಿಂದ ರೋಗ ನಿರೋದಕ ಶಕ್ತಿ  (immunity power) ಹೆಚ್ಚುತ್ತೆ ಯಾವುದೇ ರೋಗವು ಬಾರದಂತೆ ತಡೆಯುತ್ತೆ. 

Latest Videos

click me!