ಯಾವಾಗಲೂ ಮೂಗಿನ ಮೇಲೆ ಕೋಪಾ ಇರುತ್ತಾ? ಹೀಗೆ ಕಂಟ್ರೋಲ್ ಮಾಡಿ

Published : Sep 17, 2022, 05:27 PM IST

ಕೋಪ ಅನ್ನೋದು ವಿಷದ ತರಹ. ಇದು ನಮ್ಮ ಜೀವನವನ್ನೇ ಹಾಳು ಮಾಡಿ ಬಿಡುತ್ತೆ. ಆದರೆ ಪ್ರೀತಿ ತರಹ ಈ ಕೋಪವೂ ಯಾರ್ ಯಾರ್ ಮೇಲೋ ಬಂದು ಬಿಡುತ್ತೆ. ಕೆಲವೊಮ್ಮೆ ಕೋಪ ನೆತ್ತಿಗೇರಿದಾಗ ನಾವು ಏನು ಮಾಡ್ತಿದ್ದೇವೆ ಅನ್ನೋದು ನಮಗೆ ತಿಳಿದಿರೋದಿಲ್ಲ. ಆದರೆ ಕೋಪವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಯಾವಾಗಲೂ ಹೇಳಲಾಗುತ್ತೆ. ಇದು ಹಾನಿಕಾರಕವಾಗಿದೆ, ಆದರೆ ಇದೆಲ್ಲವನ್ನೂ ತಿಳಿದ ನಂತರವೂ, ಎಷ್ಟು ಜನರು ಕೋಪವನ್ನು ನಿಯಂತ್ರಿಸಲು ಶಕ್ತರಾಗಿದ್ದಾರೆ? ನಿಮ್ಮ ಸುತ್ತಲಿನ ಹೆಚ್ಚಿನ ಜನ ಕೋಪ ಮಾಡಿರೋದನ್ನು ನೀವು ನೋಡಿರುತ್ತೀರಿ. ಹಾಗಿದ್ರೆ ನಮ್ಮ ಕೋಪವನ್ನು ನಿಯಂತ್ರಿಸಲು ನಾವೇನು ಮಾಡಬೇಕು?

PREV
17
ಯಾವಾಗಲೂ ಮೂಗಿನ ಮೇಲೆ ಕೋಪಾ ಇರುತ್ತಾ? ಹೀಗೆ ಕಂಟ್ರೋಲ್ ಮಾಡಿ

ಅತಿಯಾದ ಕೋಪವು(Angry) ಜನರ ಪರ್ಸನಲ್ ಮತ್ತು ಪ್ರೊಫೆಷನಲ್ ಜೀವನವನ್ನು ಹಾಳು ಮಾಡುತ್ತೆ, ಅವರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಬುಡ ಮೇಲಾಗಿಸುತ್ತೆ ಮತ್ತು ಮಾನಸಿಕ ಆರೋಗ್ಯವನ್ನು ಸಹ ಹಾಳುಮಾಡುತ್ತೆ . ಹಾಗಾಗಿ, ಕೆಲವು ಸಣ್ಣ ಸಲಹೆಗಳು ಈ ಸಮಸ್ಯೆಯನ್ನು ಕಡಿಮೆ ಮಾಡಿದರೆ, ಇದಕ್ಕಿಂತ ಉತ್ತಮವಾದುದು ಯಾವುದಿದೆ ಆಲ್ವಾ? ಈ ಸಲಹೆಗಳು ಮನಸ್ಸನ್ನು ಶಾಂತಗೊಳಿಸುತ್ತೆ ಮತ್ತು ವ್ಯಕ್ತಿತ್ವವನ್ನು ಕೂಲಾಗಿಸುತ್ತೆ. ಕೋಪವನ್ನು ನಿಯಂತ್ರಿಸಲು ಕೆಲವು ಅತ್ಯುತ್ತಮ ಸಲಹೆಗಳನ್ನು ನೋಡೋಣ

27

ಕೋಪವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುವ ಸಲಹೆಗಳು:
ಗಮನ ಹರಿಸಿ -
ಕೋಪದ ಸಂದರ್ಭದಲ್ಲಿ, ನಿಮ್ಮ ಗಮನವನ್ನು ಬೇರೊಂದು ವಿಷಯದ ಕಡೆಗೆ ವರ್ಗಾಯಿಸಿ. ನಿಮ್ಮ ಇತರ ಕೆಲಸದ(Work) ಬಗ್ಗೆ ಯೋಚಿಸಿ, ಮುಗುಳ್ನಗಿರಿ ಅಥವಾ ಇನ್ನೊಬ್ಬರೊಂದಿಗೆ ಮಾತನಾಡಿ. ಆಗ ನಿಮ್ಮ ಕೋಪ ಕಮ್ಮಿ ಆಗೋದನ್ನ ನೀವೇ ನೋಡಿ. 

37

ಮನೆಯ ಸಾಕುಪ್ರಾಣಿಗಳು(Pets)
ಕೋಪವನ್ನು ನಿಯಂತ್ರಿಸಲು ಸಾಕುಪ್ರಾಣಿಗಳು ಸಹಾಯ ಮಾಡುತ್ತವೆ. ಅವರ ಸುತ್ತಲೂ ಇರೋದು ಮನಸ್ಸನ್ನು ಸಂತೋಷವಾಗಿರಿಸುತ್ತೆ ಮತ್ತು ತಾಳ್ಮೆ ಹೆಚ್ಚಾಗುತ್ತೆ. ಅದು ನಾಯಿ ಇರಲಿ, ಬೆಕ್ಕು ಇರಲಿ, ಯಾವುದಾದರೊಂದು ಪ್ರಾಣಿ ನಿಮ್ಮ ಜೊತೆಗಿರಲಿ, ಅದರ ಒಡನಾಟದಿಂದ ನೀವು ಶಾಂತರಾಗುವಿರಿ.
 

47

ನೀವು ಇಷ್ಟಪಡುವ ಕೆಲಸಗಳನ್ನು ಮಾಡಿ 
ಜನರು ನೃತ್ಯ ಮಾಡಲು ಅಥವಾ ಸಂಗೀತವನ್ನು ಕೇಳಲು(Listen music) ಇಷ್ಟಪಡುತ್ತಾರೆ. ಈ ಚಟುವಟಿಕೆಗಳು ಮೂಡ್ ಬೂಸ್ಟರ್ ಗಳಾಗಿವೆ. ಹತಾಶೆಗೊಂಡಾಗ ಅಥವಾ ಕೋಪಗೊಂಡಾಗ ನಿಮ್ಮ ಆಯ್ಕೆಯ ಕೆಲಸಗಳನ್ನು ಮಾಡೋದರಿಂದ, ಮನಸ್ಸು ಶಾಂತ ಮತ್ತು ಕೋಪ ನಿಯಂತ್ರಣಕ್ಕೆ ಬರುತ್ತೆ.
 

57

ಆಳವಾದ ಉಸಿರಾಟ(Deep breathing)
ಕೋಪದ ಸಮಯದಲ್ಲಿ ಆಳವಾದ ಉಸಿರಾಟವು ಮನಸ್ಸನ್ನು ಶಾಂತಗೊಳಿಸುತ್ತೆ ಮತ್ತು ಕೋಪದ ಕಾರಣವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತೆ, ಇದು ಕೋಪವನ್ನು ಕಡಿಮೆ ಮಾಡುತ್ತೆ. ಆಳವಾದ ಉಸಿರಾಟದ ವ್ಯಾಯಾಮಗಳು ಮನಸ್ಥಿತಿಯನ್ನು ಸುಧಾರಿಸುತ್ತವೆ. ಜೊತೆಗೆ ಉತ್ತಮ ಆರೋಗ್ಯವೂ ನಿಮ್ಮದಾಗುತ್ತೆ.

67

ಸ್ಟ್ರೆಸ್ ಬಾಲ್ಸ್ (Stress ball)
ನಿಮಗೆ ಕೋಪ ಬಂದಾಗ ಅದನ್ನು ಕಂಟ್ರೋಲ್ ಮಾಡೋದು ಹೇಗೆ ಎಂದು ತಿಳಿಯಲು ಗೊತ್ತಾಗದೇ ಇದ್ದಾಗ ನೀವು ಈ ಸ್ಟ್ರೆಸ್ ಬಾಲ್ ಟ್ರೈ ಮಾಡಬಹುದು. ಸ್ಟ್ರೆಸ್ ಬಾಲ್ಸ್ , ಮ್ಯಾಗ್ನೆಟಿಕ್ ಬಾಲ್ , ರುಬಿಕಸ್ ಕ್ಯೂಬ್ ಮತ್ತು ಫಿಡ್ಜೆಟ್ ಸ್ಪಿನ್ನರ್ ಗಳೊಂದಿಗೆ ಕೋಪದ ಸಮಯದಲ್ಲಿ ಆಡೋದು ಮನಸ್ಸಿಗೆ ಮುದ ನೀಡುತ್ತೆ ಮತ್ತು ಕೋಪವನ್ನು ನಿಯಂತ್ರಣಕ್ಕೆ ತರುತ್ತೆ.

77

ಸ್ಟ್ರೆಸ್ ಪಾಯಿಂಟ್ಸ್ :
ಕೈಗಳಲ್ಲಿ ಆಕ್ಯುಪ್ರೆಶರ್ ನ (Accupressure)ಪಾಯಿಂಟ್ಸ್ ಗಳಿವೆ, ಅವು ಕಡಿಮೆ ಕೋಪ ಮತ್ತು ನಿಯಂತ್ರಣ ಪಾಯಿಂಟ್ಸ್ ಗಳನ್ನು ಸಹ ಹೊಂದಿವೆ. ನಿಯಮಿತವಾಗಿ ಅವುಗಳನ್ನು ಸರಿಯಾಗಿ ಒತ್ತುವುದರಿಂದ ಕೋಪವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಇದರಿಂದ ಟೆನ್ಶನ್ ರಿಲೀಫ್ ಆಗುತ್ತೆ ಮತ್ತು ಕೋಪ ಸಹ ಕಂಟ್ರೋಲ್ ಗೆ ಬರುತ್ತೆ.

click me!

Recommended Stories