ಕೂದಲು ಉದುರುತ್ತಿದೆಯೇ? ಹಾಗಿದ್ರೆ ನೀವು ಮಾಡ್ತಿರೋ ಈ ಮೂರು ಕೆಲಸವನ್ನು ತಕ್ಷಣವೇ ನಿಲ್ಲಿಸಿ

First Published | Oct 18, 2023, 10:55 AM IST

ನಿಮ್ಮ ಕೂದಲು ಉದುರಲು ಕಾರಣವೇನು ಎಂದು ನಿಮಗೆ ತಿಳಿದಿದೆಯೇ? ಇದಕ್ಕೆ ಕಾರಣ ನೀವು ಮಾಡಿದ ತಪ್ಪೂ ಆಗಿರಬಹುದು. ಇಂದು ನಾವು ಇದರ ಬಗ್ಗೆ ವಿವರವಾಗಿ ಹೇಳುತ್ತೇವೆ.  ಈ ತಪ್ಪನ್ನ ತಿದ್ದುಕೊಂಡ್ರೆ ಮತ್ತೆ ಕೂದಲು ಉದುರೋ ಸಮಸ್ಯೆ ಕಾಡೋದಿಲ್ಲ. 
 

ನಿಮ್ಮ ಈಗಷ್ಟೇ ಹೇರ್ ಟ್ರೀಟ್ ಮೆಂಟ್ (hair treatment) ಮಾಡಿಸಿಕೊಂಡಿದ್ದು, ಅದಾಗಿ ಸ್ವಲ್ಪ ಸಮಯದಲ್ಲೇ ಕೂದಲು ಉದರಲು ಪ್ರಾರಂಭಿಸಿದೆ ಎಂದು ನಿಮಗೆ ಎಂದಾದರೂ ಅನಿಸಿದೆಯೆ? ಬ್ಯೂಟಿ ಪಾರ್ಲರ್ ಗೆ ಹೋದ ಕೂದಲಿನ ಸಮಸ್ಯೆ ಹೆಚ್ಚಿನ ಜನರಲ್ಲಿ ಹೆಚ್ಚುತ್ತೆ,. ಅನೇಕ ಸಂದರ್ಭಗಳಲ್ಲಿ, ಆ ಚಿಕಿತ್ಸೆಯಿಂದಾಗಿ ಕೂದಲು ತುಂಬಾ ಹಾನಿಗೊಳಗಾಗುತ್ತದೆ. ಕೂದಲಿನ ಆರೈಕೆಗಾಗಿ ನೀವು ಎಷ್ಟೇ ದುಬಾರಿ ಉತ್ಪನ್ನಗಳನ್ನು ಬಳಸಿದರೂ, ನೀವು ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ನಿಮ್ಮ ಕೂದಲಿನ ಆರೈಕೆ ದಿನಚರಿ ಮತ್ತು ಜೀವನಶೈಲಿಯಲ್ಲಿ ಎಲ್ಲೋ ಸಮಸ್ಯೆ ಇದೆ ಅನ್ನೋದನ್ನು ನೀವು ತಿಳಿಯಬೇಕು. 

ಕೆರಾಟಿನ್ ಚಿಕಿತ್ಸೆ (keratin treatment for hair)  ಪಡೆದ ನಂತರ ಕೂದಲಿಗೆ ಹಾನಿಯಾಗುತ್ತದೆ ಎಂದು ಹೆಚ್ಚಿನ ಜನರು ಹೇಳುವುದನ್ನು ನೀವು ಕೇಳಿರ ಬಹುದು. ಯಾಕೆ ಹೀಗಾಗುತ್ತೆ? ಈ ಸಮಸ್ಯೆ ನಿವಾರಿಸಲು ಏನು ಮಾಡೋದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಅದರ ಬಗ್ಗೆ ತಿಳಿಯೋಣ. 

Latest Videos


ಕೆರಾಟಿನ್ ಚಿಕಿತ್ಸೆ
ತಜ್ಞರ ಪ್ರಕಾರ, ನೀವು ಕೂದಲಿಗೆ ಹೆಚ್ಚು ಚಿಕಿತ್ಸೆ ನೀಡಿದರೆ, ಕೂದಲು ಉದುರುವುದು ಸಹಜ. ಅವುಗಳನ್ನು ಯಾವುದೇ ಸಂದರ್ಭದಲ್ಲೂ ಉಳಿಸಲು ಸಾಧ್ಯವಿಲ್ಲ. ಕೆರಾಟಿನ್ ಚಿಕಿತ್ಸೆಯು ಕೂದಲನ್ನು ನಯವಾಗಿ ಕಾಣುವಂತೆ ಮಾಡುತ್ತದೆ, ಆದರೆ ಅದನ್ನು ಸರಿಯಾಗಿ ಮಾಡದಿದ್ದರೆ, ಕೂದಲಿನ ಬೇರುಗಳು ತುಂಬಾ ದುರ್ಬಲವಾಗುತ್ತವೆ. ಇದು ಶಾಶ್ವತ ಕೂದಲು ಉದುರುವಿಕೆಗೆ ಕಾರಣವಾಗಬಹುದು. 
 

ಕಾರಣವೇನು?
ವಾಸ್ತವವಾಗಿ, ಕೆರಾಟಿನ್ ಚಿಕಿತ್ಸೆ ಶಾಖ ಮತ್ತು ರಾಸಾಯನಿಕಗಳನ್ನು (chemicals) ಒಳಗೊಂಡಿರುತ್ತವೆ ಮತ್ತು ಈ ಚಿಕಿತ್ಸೆಯನ್ನು ಮಾಡುವಾಗ, ಕೂದಲು ಸಹ ಸಾಕಷ್ಟು ಹಿಗ್ಗುತ್ತದೆ. ಇದರಿಂದ, ಕೂದಲಿನ ನೈಸರ್ಗಿಕ ಶಕ್ತಿಯೂ ಕಡಿಮೆಯಾಗುತ್ತೆ. ಕೆರಾಟಿನ್ ಚಿಕಿತ್ಸೆಯಲ್ಲಿ, ಶಾಖವು ತುಂಬಾ ಹೆಚ್ಚಾಗಿರುತ್ತದೆ, ಕೂದಲಿನ ನೈಸರ್ಗಿಕ ಪ್ರೋಟೀನ್ ಸಹ ಹಾನಿಗೊಳಗಾಗುತ್ತದೆ. ಇದನ್ನ ಮಾಡಿದ ಆರಂಭದಲ್ಲಿ ಕೂದಲು ಚೆನ್ನಾಗಿ ಕಾಣ್ಸುತ್ತೆ, ಆದರೆ ನಂತರ ಕೂದಲಿನ ಸೌಂದರ್ಯ ಹಾಳಾಗುತ್ತೆ. ಕೆರಾಟಿನ್ ಚಿಕಿತ್ಸೆಯು ಕೂದಲನ್ನು ಹಾಳು ಮಾಡಲು ಇದು ಕಾರಣವಾಗಿದೆ. 
 

ಅತಿ ಎಣ್ಣೆಯು ಕೂದಲಿಗೆ ಹಾನಿಯನ್ನುಂಟು ಮಾಡುತ್ತದೆ
ನಿಮಗೆ ಇದರ ಬಗ್ಗೆ ತಿಳಿದಿಲ್ಲದಿರಬಹುದು, ಆದರೆ ಕೂದಲಿಗೆ ಹೆಚ್ಚು ಎಣ್ಣೆ ಹಚ್ಚುವುದು ಸಹ ಅದನ್ನು ದುರ್ಬಲಗೊಳಿಸುತ್ತದೆ. ಕೂದಲಿಗೆ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಬಲಗೊಳ್ಳುತ್ತದೆ ಎಂಬ ಸಾಮಾನ್ಯ ನಂಬಿಕೆ ಇದೆ, ಆದರೆ ಕೆಲವು ಸಂದರ್ಭಗಳಲ್ಲಿ ಕೂದಲು ಉದುರುವಿಕೆಯೂ ಪ್ರಾರಂಭವಾಗುತ್ತದೆ.

ಇದಕ್ಕೆ ಕಾರಣವೇನು? 
ಕೂದಲಿಗೆ ಹೆಚ್ಚು ಎಣ್ಣೆ (applying oil to hair) ಹಚ್ಚುವುದರಿಂದ ಕೂದಲಿನ ಕಿರು ಚೀಲಗಳನ್ನು ನಿರ್ಬಂಧಿಸುತ್ತದೆ. ನೀವು ಈಗಾಗಲೇ ಕೂದಲು ಉದುರುವ ಸಮಸ್ಯೆ ಹೊಂದಿದ್ದರೆ, ಹೆಚ್ಚಿನ ಎಣ್ಣೆಯು ಕೂದಲಿಗೆ ಮತ್ತಷ್ಟು ಹಾನಿಯನ್ನುಂಟು ಮಾಡುತ್ತದೆ. ಅಷ್ಟೇ ಅಲ್ಲ ರಾತ್ರಿ ಎಣ್ಣೆ ಹಚ್ಚಿ ಮಲಗೋದು ಸಹ ತಪ್ಪು ಏಕೆಂದರೆ ಇದು ಕೂದಲಿನ ಟೆಲೋಜೆನ್ ಹಂತಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ.ಇದರಿಂದ ಕೂದಲಿನ ನೆತ್ತಿಯ ಆರೋಗ್ಯ ಮತ್ತಷ್ಟು ಹದಗೆಡುತ್ತೆ ಮತ್ತು ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.  

ಕೂದಲನ್ನು ತುಂಬಾ ಗಟ್ಟಿಯಾಗಿ ಕಟ್ಟೋದು 
ಕೂದಲನ್ನು ಕಟ್ಟುವುದರಿಂದ ಕೂದಲಿನ ಬೇರುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಕೂದಲು ಯಾವಾಗಲೂ ಹಿಗ್ಗುತ್ತಿರುವಂತೆ ಭಾಸವಾಗುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ಬೇರುಗಳು ಸಹ ದುರ್ಬಲವಾಗುತ್ತವೆ ಮತ್ತು ಕೂದಲು ಉದುರುವುದು ಹೆಚ್ಚುತ್ತೆ. ಕೂದಲು ಉದುರುವ ಸಮಸ್ಯೆ ಹೆಚ್ಚುತ್ತಿದ್ದರೆ, ಕೂದಲನ್ನು ಸ್ವಲ್ಪ ತೆರೆದಿಡಿ ಮತ್ತು ಒತ್ತಡವನ್ನು ಕಡಿಮೆ ಮಾಡಿ.  

Image: Freepik

ಸರಿಯಾದ ಕೂದಲಿನ ಆರೈಕೆ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ ಮತ್ತು ನಿಮ್ಮ ನೆತ್ತಿ ಬಗ್ಗೆ ನಿಮಗೆ ಅರ್ಥವಾಗದಿದ್ದರೆ, ನೀವು ವೈದ್ಯರೊಂದಿಗೆ ಮಾತನಾಡಬಹುದು. ಜೆನೆಟಿಕ್ಸ್, ಒತ್ತಡ ಮತ್ತು ಆಹಾರ ಸಹ ಕೂದಲು ಉದುರುವಿಕೆಗೆ ಕಾರಣವಾಗಬಹುದು, ಆದ್ದರಿಂದ ನೀವು ಸಲೂನ್ ಚಿಕಿತ್ಸೆಗಳನ್ನು ಸ್ವಲ್ಪ ಕಡಿಮೆ ಮಾಡಬೇಕು, ಒತ್ತಡ ಕಡಿಮೆ ಮಾಡಬೇಕು ಮತ್ತು ಆಹಾರದ ಬಗ್ಗೆ ಕಾಳಜಿ ವಹಿಸಿದ್ರೆ ಕೂದಲು ಆರೋಗ್ಯಕರವಾಗಿರುತ್ತೆ. 
 

click me!