ಯಾರಾದರೂ ಸೊಂಟಕ್ಕೆ ಕಪ್ಪು ದಾರ ಕಟ್ಟಿಕೊಂಡಿದ್ದನ್ನು ನೋಡಿದರೆ ಹಲವರು ಆಡಿಕೊಂಡು ನಗುತ್ತಾರೆ. ಆದರೆ, ಅಲ್ಲಿದೆ ಆರೋಗ್ಯದ ಗುಟ್ಟು ಎಂಬುದು ಹಲವರಿಗೆ ಗೊತ್ತಿಲ್ಲ. ಏನದು..? ಈ ಸ್ಟೋರಿ ನೋಡಿ..
ಬಹಳಷ್ಟು ಜನರು ಇಂದಿಗೂ ಕೂಡ ಸೊಂಟಕ್ಕೆ ಕಪ್ಪು ದಾರ ಕಟ್ಟಿಕೊಳ್ಳುತ್ತಾರೆ. ಇದು ಭಾರತದಲ್ಲಿ ಬಹಳಷ್ಟು ಕಾಲದಿಂದಲೂ ನಡೆದುಕೊಂಡು ಬರುತ್ತಿದೆ.
26
ಸನಾತನ ಧರ್ಮದ ಸಂಪ್ರದಾಯದ ಪ್ರಕಾರ, ಸೊಂಟಕ್ಕೆ ಕಪ್ಪು ದಾರ ಕಟ್ಟಿಕೊಳ್ಳುವುದು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗೂ ಹಲವರು ಸೊಂಟಕ್ಕೆ ಕಪ್ಪುದಾರ ಕಟ್ಟಿಕೊಳ್ಳುತ್ತಾರೆ.
36
ಸೊಂಟಕ್ಕೆ ದಾರ ಕಟ್ಟಿಕೊಂಡಾಗ ಅದು ಕೆಲವರಲ್ಲಿ ಕಾಣದಿರಬಹುದ. ಆದರೆ, ಪರಿಣಾಮವನ್ನಂತೂ ಅವರು ಅನುಭವಿಸುತ್ತಾರೆ. ಅಂದರೆ, ಆರೋಗ್ಯ ಭಾಗ್ಯವನ್ನು..!
ಹೌದು.. ಸೊಂಟವು ಮಾನವನ ದೇಹದಲ್ಲಿ ಮಧ್ಯ ಭಾಗ. ಯೋಗ ಶಾಸ್ತ್ರದ ಪ್ರಕಾರ, ಇದು ಮಣಿಪೂರಕ ಚಕ್ರ ಇರುವ ಭಾಗ.. ಇಲ್ಲಿ ಹೊಕ್ಕಳು ಬಳ್ಳಿ ಇರುತ್ತದೆ. ಅದನ್ನು ಕಟ್ ಮಾಡಿದ ಬಳಿಕ ಕೂಡ ಹೊಕ್ಕಳು ಇರುತ್ತದೆ. ಇದು ದೇಹಕ್ಕೆ ಶಕ್ತಿ ಕೊಡುವ ಮುಖ್ಯ ಭಾಗ.
56
ಆದ್ದರಿಂದ ಈ ಭಾಗದಲ್ಲಿ ಕಪ್ಪು ದಾರ ಕಟ್ಟಿಕೊಳ್ಳವುದರಿಂದ ಅಲ್ಲಿ ಶಕ್ತಿಯ (ಎನರ್ಜಿ) ಹರಿವು ಹೆಚ್ಚಾಗುತ್ತದೆ. ಎಲ್ಲಿ ಶಕ್ತಿಯ ಹರಿವು ಹೆಚ್ಚು ಇರುತ್ತದೆಯೋ ಅಲ್ಲಿ ಸಹಜವಾಗಿಯೇ ಹೆಚ್ಚು ಎನರ್ಜಿ ಕೇಂದ್ರೀಕೃತವಾಗುತ್ತದೆ. ಸೊಂಟ ನಮ್ಮ ದೇಹದಲ್ಲಿ ಬಲವಾಗಿದ್ದಾಗ ಹೆಚ್ಚುಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ.
66
ಸೊಂಟಕ್ಕೆ ಕಪ್ಪುದಾರ ಕಟ್ಟಿಕೊಳ್ಳುವುದರಿಂದ, ಕಪ್ಪು ಬಣ್ಣ ಅಲ್ಲಿ ಹೆಚ್ಚಿನ ಶಕ್ತಿಯನ್ನು ಕೇಂದ್ರೀಕರಿಸಿ ತನ್ಮೂಲಕ ಹೆಚ್ಚಿನ ಎನರ್ಜಿ ಒದಗಿಸುತ್ತದೆ. ಅದರಿಂದ ದೇಹ ಹೆಚ್ಚು ಹೆಚ್ಚು ಸ್ಟ್ರಾಂಗ್ ಆಗುತ್ತದೆ. ಹೀಗಾಗಿ, ಸೊಂಟಕ್ಕೆ ಕಪ್ಪುದಾರ ಕಟ್ಟಿಕೊಳ್ಳುವುದು ಫ್ಯಾಶನ್ ಅಥವಾ ಪೆದ್ದತನವಲ್ಲ, ಬದಲಿಗೆ ಅದು ಆರೋಗ್ಯಕ್ಕೆ ಪೂರಕ ಎನ್ನಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.