ಚಳಿಗಾಲದಲ್ಲಿ ಸ್ನಾನ ಹೇಗೆ ಮಾಡ್ಬೇಕು?
ಬಿಸಿ ನೀರು ಉಪಯೋಗಿಸಿ: ಯಾವಾಗಲೂ ಚಳಿಗಾಲದಲ್ಲಿ ತಣ್ಣೀರಿನಲ್ಲಿ ಬೆಳಗ್ಗೆ, ರಾತ್ರಿ ಸ್ನಾನ ಮಾಡಬಾರದು. ಈ ಸೀಸನ್ ನಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡೋದೇ ಒಳ್ಳೇದು. ಯಾಕಂದ್ರೆ ಈ ನೀರು ನಿಮ್ಮ ಶರೀರನ ಬೆಚ್ಚಗೆ ಇಡುತ್ತೆ. ಹಾಗೇ ನಿಮಗೆ ಜ್ವರ ಕೂಡ ಬರಲ್ಲ.
ಸ್ನಾನ ಆದ್ಮೇಲೆ ಚರ್ಮಕ್ಕೆ ಮಾಯಿಶ್ಚರೈಸ್ ಹಚ್ಚಿ: ಚಳಿಗಾಲದಲ್ಲಿ ಸ್ನಾನ ಆದ್ಮೇಲೆ ಮಾಯಿಶ್ಚರೈಸ್ ಹಚ್ಚೋದು ಮರೀಬೇಡಿ. ಯಾಕಂದ್ರೆ ಇದು ನಿಮ್ಮ ಚರ್ಮನ ತೇವವಾಗಿ ಇಡುತ್ತೆ. ಇದಕ್ಕೆ ನೀವು ಕ್ರೀಮ್, ಆಯಿಲ್ ಉಪಯೋಗಿಸಬಹುದು. ಇವುಗಳನ್ನ ಹಚ್ಚದಿದ್ರೆ ಚರ್ಮ ಒಣಗುತ್ತೆ.