ಊಟದಲ್ಲಿ ಸಾಕಷ್ಟು ಪ್ರೋಟೀನ್ ಇರಲಿ. ಪ್ರೋಟೀನ್ ಹೊಟ್ಟೆ ತುಂಬಿದ ಭಾವನೆ ಕೊಡುತ್ತೆ. ಮೊಟ್ಟೆ, ಕೋಳಿ, ಮೀನು, ಬೇಳೆಕಾಳು, ತೋಫು, ಮೊಸರು, ಬೀಜಗಳನ್ನ ಊಟದಲ್ಲಿ ಸೇರಿಸಿ.
ಸಕ್ಕರೆ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಸ್ ಹೊಟ್ಟೆ ಕೊಬ್ಬಿಗೆ ಕಾರಣ. ಸಿಹಿ ಪಾನೀಯ, ಜಂಕ್ ಫುಡ್ ಬೇಡ. ಹಣ್ಣು, ನೀರು, ಹರ್ಬಲ್ ಟೀ ಕುಡಿಯಿರಿ.
ವಾಕಿಂಗ್, ರನ್ನಿಂಗ್ ಒಳ್ಳೆಯದು. ಆದ್ರೆ ಬೇರೆ ವ್ಯಾಯಾಮಗಳೂ ಇವೆ. ಪುಷ್-ಅಪ್ಸ್, ಸ್ಕ್ವಾಟ್ಸ್, ಲಂಜಸ್, ಯೋಗ, ಈಜು, ವೇಗದ ನಡಿಗೆ ಕೂಡ ಒಳ್ಳೆಯದು. ವಾರಕ್ಕೆ 2-3 ಸಲ ಮಾಡಿ.
ಒಳ್ಳೆಯ ಆರೋಗ್ಯಕ್ಕೆ, ಹೊಟ್ಟೆ ಕೊಬ್ಬು ಕರಗಿಸಲು ಸಾಕಷ್ಟು ನಿದ್ರೆ ಮುಖ್ಯ. ದಿನಾ ೭-೮ ಗಂಟೆ ನಿದ್ರೆ ಮಾಡಿ. ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಒಂದೇ ಸಮಯಕ್ಕೆ ಏಳಿ.
ಧ್ಯಾನ, ಯೋಗ ಮಾಡಿ. ಸಾಕಷ್ಟು ನೀರು ಕುಡಿಯಿರಿ. ಆಗಾಗ್ಗೆ ಸ್ವಲ್ಪ ಸ್ವಲ್ಪ ಊಟ ಮಾಡಿ. ಹಣ್ಣು, ತರಕಾರಿ, ಧಾನ್ಯಗಳಲ್ಲಿ ಫೈಬರ್ ಜಾಸ್ತಿ ಇರುತ್ತೆ. ಹಸಿವು ಕಡಿಮೆ ಮಾಡುತ್ತೆ.
Mahmad Rafik