ಮಿಕ್ಸ್ ಫ್ರುಟ್ ಜ್ಯೂಸ್ ಕುಡಿಯೋ ಅಭ್ಯಾಸ ಇದೆಯಾ? ಇವತ್ತೇ ಬಿಟ್ವಿಡಿ…

First Published | Jun 22, 2023, 2:24 PM IST

ಅನೇಕ ಜನರು ವಿವಿಧ ಹಣ್ಣಿನ ರಸಗಳನ್ನು ಮಿಕ್ಸ್ ಮಾಡಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ನೀವು ಆರೋಗ್ಯವೆಂದು ಕುಡಿಯುತ್ತಿರುವ ಈ ಮಿಕ್ಸ್ ಫ್ರುಟ್ ಜ್ಯೂಸ್ ಕೆಲವು ಅನಾನುಕೂಲತೆಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ?.

ಆರೋಗ್ಯಕರ ಮನಸ್ಸು ಮತ್ತು ಆರೋಗ್ಯಕರ ದೇಹಕ್ಕಾಗಿ, ನಾವು ಪ್ರತಿದಿನ ಒಂದಲ್ಲ ಒಂದು ರೀತಿಯ ಜ್ಯೂಸ್ ಸೇವಿಸುತ್ತೇವೆ. ಅದರಲ್ಲೂ ಫ್ರುಟ್ ಜ್ಯೂಸ್ ಎಲ್ಲರ ಫೆವರೀಟ್. ಅದರೆ ಕೆಲವರಂತೂ ಎಲ್ಲಾ ಹಣ್ಣುಗಳ ಜೀವಸತ್ವಗಳು ಜೊತೆಯಾಗಿ ಸಿಕ್ರೆ ಚೆನ್ನಾಗಿರುತ್ತೆ ಎಂದು ವಿವಿಧ ಹಣ್ಣುಗಳ ಮಿಕ್ಸ್ ಫ್ರುಟ್ ಜ್ಯೂಸ್ (mixed fruit juice) ಕುಡಿಯುತ್ತಾರೆ. ಇದೇನೋ ನಿಮ್ಮ ಬಾಯಿಗೆ ರುಚಿ ನೀಡುತ್ತೆ ಅನ್ನೋದೇನೋ ನಿಜಾ. ಆದರೆ ಇದು ಆರೋಗ್ಯಕ್ಕೆ ಉತ್ತಮವೇ? 

ವಿಭಿನ್ನ ಹಣ್ಣುಗಳನ್ನು ಮಿಶ್ರಣ ಮಾಡಿ ಜ್ಯೂಸ್ ಕುಡಿಯೋದ್ರಿಂದ ಆರೋಗ್ಯದ ಮೇಲೆ ಕೆಲವು ಹಾನಿಕಾರಕ ಪರಿಣಾಮಗಳು (effects on health) ಉಂಟಾಗುತ್ತವೆ. ಈ ಲೇಖನದಲ್ಲಿ, ಮಿಕ್ಸ್ಡ್ ಫ್ರುಟ್ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನು ಹಾನಿ ಉಂಟಾಗಬಹುದು ಅನ್ನೋ ಬಗ್ಗೆ ಮಾಹಿತಿ ನೀಡಲಾಗಿದೆ. ಇದನ್ನ ಓದಿದ್ರೆ ಇನ್ನು ಮುಂದೆ ನೀವು ಮಿಕ್ಸ್ ಫ್ರುಟ್ ಜ್ಯೂಸ್ ಕುಡಿಯೋದೆ ಇಲ್ಲ. 
 

Latest Videos


ಮಿಕ್ಸ್ ಫ್ರುಟ್ ಜ್ಯೂಸ್ ಕುಡಿಯುವ ಪರಿಣಾಮಗಳೇನು? 
ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತಗಳು
ಕೆಲವು ಹಣ್ಣುಗಳು ಹೆಚ್ಚಿನ ಸಕ್ಕರೆ ಅಂಶ ಹೊಂದಿರುತ್ತವೆ. ಎಲ್ಲಾ ರೀತಿಯ ಹಣ್ಣುಗಳ ರಸ ಜೊತೆಯಾಗಿ ಮಿಕ್ಸ್ ಮಾಡಿ ಕುಡಿಯೋದ್ರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟ (blood sugar level) ವೇಗವಾಗಿ ಹೆಚ್ಚಾಗುತ್ತದೆ. ಇದು ಸಮಸ್ಯೆ ಹೆಚ್ಚಿಸಬಹುದು, ವಿಶೇಷವಾಗಿ ಮಧುಮೇಹ ಸಮಸ್ಯೆ ಇದ್ರೆ ಇದನ್ನ ಕುಡಿಯಲೇಬಾರದು.

ಪೋಷಕಾಂಶಗಳ ನಷ್ಟ
ಪ್ರತಿಯೊಂದು ಹಣ್ಣುಗೆ ಅದರದ್ದೇ ಆದ ಪೋಷಕಾಂಶಗಳಿರುತ್ತವೆ. ಆದರೆ ವಿವಿಧ ಹಣ್ಣಿನ ರಸಗಳನ್ನು ಒಟ್ಟಿಗೆ ಮಿಕ್ಸ್ ಮಾಡಿ ಸೇವಿಸೋದರಿಂದ ಅವುಗಳ ಪೋಷಕಾಂಶ ಬದಲಾಗುತ್ತೆ. ತಜ್ಞರ ಪ್ರಕಾರ, ಕೆಲವು ಹಣ್ಣುಗಳು ಕಿಣ್ವಗಳು ಅಥವಾ ಸಂಯುಕ್ತಗಳನ್ನು ಹೊಂದಿರಬಹುದು, ಅವು ಇತರ ಆಹಾರದೊಂದಿಗೆ ಬೆರೆತಾದ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಇದು ಹಣ್ಣಿನಲ್ಲಿರುವ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ.

ಜೀರ್ಣಕ್ರಿಯೆಯಲ್ಲಿ ತೊಂದರೆ
ಕೆಲವು ಹಣ್ಣಿನ ರಸವನ್ನು ಜೊತೆಯಾಗಿ ಬೆರೆಸಿ ಕುಡಿದ್ರೆ  ಗ್ಯಾಸ್, ಉಬ್ಬರ, ಸೆಳೆತ ಅಥವಾ ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳಿಗೆ (digestion problem) ಕಾರಣವಾಗಬಹುದು. ವಿಶೇಷವಾಗಿ ಸಿಟ್ರಸ್ ಹಣ್ಣುಗಳ ಜ್ಯೂಸನ್ನು ಇತರ ಹಣ್ಣುಗಳ ಜ್ಯೂಸ್ ಜೊತೆ ಬೆರೆಸಿದಾಗ, ಅದರಲ್ಲಿರುವ ಆಮ್ಲ ಪದಾರ್ಥಗಳು ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು.

ಅಲರ್ಜಿಗಳು  
ಮಿಕ್ಸ್ ಫ್ರುಟ್ ಜ್ಯೂಸ್ ಸೇವಿಸೋದ್ರಿಂದ ಉಂಟಾಗುವ ಮತ್ತೊಂದು ಸಮಸ್ಯೆಯೆಂದರೆ ಅಲರ್ಜಿಗಳು(food allergy). ಯಾವುದೇ ಹಣ್ಣುಗಳು ನಿಮಗೆ ಅಲರ್ಜಿಯಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಮಿಕ್ಸ್ ಫ್ರುಟ್ ಜ್ಯೂಸ್ ಕುಡಿಯೋದ್ರಿಂದ , ಅಲರ್ಜಿಗೆ ಯಾವ ಹಣ್ಣು ಕಾರಣ ಅನ್ನೋದನ್ನು ತಿಳಿಯಲು ಕಷ್ಟವಾಗುತ್ತೆ.

ಅಸಮತೋಲಿತ ಪೋಷಕಾಂಶಗಳು
ಮಿಕ್ಸ್ ಫ್ರುಟ್ ಜ್ಯೂಸ್ ಕುಡಿಯುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳನ್ನು ಅಸಮತೋಲನಗೊಳಿಸಬಹುದು. ಏಕೆಂದರೆ ಕೆಲವು ಹಣ್ಣುಗಳು ಹೆಚ್ಚಿನ ಜೀವಸತ್ವಗಳು, ಖನಿಜಗಳು ಅಥವಾ ಸಕ್ಕರೆ ಮಟ್ಟವನ್ನು ಹೊಂದಿರಬಹುದು. ಎಲ್ಲ ಮಿಕ್ಸ್ ಆದಾಗ ಪೋಷಕಾಂಶಗಳ ಬ್ಯಾಲೆನ್ಸ್ ತಪ್ಪುತ್ತೆ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಕೂಡ ಇದೆ. 

click me!