World Music Day : ಮೊದಲ ಬಾರಿ ಇದನ್ನ ಎಲ್ಲಿ ಮತ್ತು ಯಾಕೆ ಆಚರಿಸಲಾಯಿತು ತಿಳಿಯಿರಿ

First Published | Jun 21, 2023, 1:40 PM IST

ಮ್ಯೂಸಿಕ್ ಅನ್ನೋದನ್ನು ಔಷಧಿ ಅಂತಾಲೂ ಹೇಳಬಹುದು. ಯಾಕೆಂದ್ರೆ ಸಂಗೀತವು ಮನರಂಜನೆ ನೀಡುವುದಲ್ಲದೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಸಂಗೀತದ ಮಹತ್ವವನ್ನು ಜನರಿಗೆ ತಿಳಿಸಲು ಪ್ರತಿ ವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಆದ್ದರಿಂದ ಈ ದಿನಗಳ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ.

ಸಂಗೀತ ಪ್ರಿಯರಿಗೆ ಇಂದು ಬಹಳ ವಿಶೇಷ ದಿನ. ಯಾಕಂದ್ರೆ ಇಂದು ವಿಶ್ವ ಸಂಗೀತ ದಿನ (world music day). ಜೀವನದ ಸಂತೋಷದ ಸಂದರ್ಭವಾಗಿರಲಿ, ದುಃಖದ ಕ್ಷಣಗಳಾಗಿರಲಿ, ಏಕಾಂಗಿಯಾಗಿ ಅಥವಾ ಸ್ನೇಹಿತರೊಂದಿಗೆ, ಪ್ರಯಾಣವಾಗಲಿ ಅಥವಾ ಮನೆಯಲ್ಲಿ ಸಮಯ ಕಳೆಯುತ್ತಿರಲಿ, ಸಂಗೀತವು ಪ್ರತಿಯೊಂದು ಸನ್ನಿವೇಶದಲ್ಲೂ ನಮಗೆ ನೆಮ್ಮದಿ ಮತ್ತು ಸಂತೋಷವನ್ನು ನೀಡುತ್ತೆ. 

ಸಂಗೀತವು ನಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ಪ್ರತಿ ವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ವರ್ಷದ ಇತಿಹಾಸ, ಉದ್ದೇಶ ಮತ್ತು ಥೀಮ್ ಏನು ಎಂದು ತಿಳಿದುಕೊಳ್ಳೋಣ-
 

Tap to resize

ವಿಶ್ವ ಸಂಗೀತ ದಿನದ ಇತಿಹಾಸವೇನು? (History of Music Day)
ವಿಶ್ವ ಸಂಗೀತ ದಿನದ ಇತಿಹಾಸವು ಫ್ರಾನ್ಸ್ ಗೆ ಸಂಬಂಧಿಸಿದೆ. ಈ ದಿನವನ್ನು ಮೊದಲ ಬಾರಿಗೆ ಫ್ರಾನ್ಸ್ನಲ್ಲಿ 1982 ರಲ್ಲಿ ಆಚರಿಸಲಾಯಿತು. ಆ ಸಮಯದಲ್ಲಿ, ಆಗಿನ ಫ್ರೆಂಚ್ ಸಂಸ್ಕೃತಿ ಸಚಿವ ಜ್ಯಾಕ್ ಲ್ಯಾಂಗ್ ದೇಶದಲ್ಲಿ ಸಂಗೀತದ ಬಗ್ಗೆ ಜನರ ಉತ್ಸಾಹವನ್ನು ಗಮನದಲ್ಲಿಟ್ಟುಕೊಂಡು ಸಂಗೀತ ದಿನವನ್ನು ಆಚರಿಸುವುದಾಗಿ ಘೋಷಿಸಿದ್ದರು. ಈ ದಿನವನ್ನು 'ಫೆಟೆ ಲಾ ಮ್ಯೂಸಿಕ್' ಎಂದು ಕರೆಯಲಾಯಿತು.

ಮೊದಲ ಸಂಗೀತ ದಿನವನ್ನು ಹೇಗೆ ಆಚರಿಸಲಾಯಿತು?
ಫ್ರಾನ್ಸ್‌ನಲ್ಲಿ ಮೊದಲ ಬಾರಿಗೆ ಸಂಗೀತ ದಿನವನ್ನು ಆಚರಿಸಿದಾಗ, ಇದು 32 ಕ್ಕೂ ಹೆಚ್ಚು ದೇಶಗಳ ಬೆಂಬಲವನ್ನು ಪಡೆಯಿತು. ಈ ಸಮಯದಲ್ಲಿ ಅನೇಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಯಿತು. ಈ ಕಾರ್ಯಕ್ರಮ ವಿಶ್ವದಾದ್ಯಂತ ಮನ್ನಣೆ ಪಡೆಯಿತು. 

ಭಾರತ, ಇಟಲಿ, ಗ್ರೀಸ್, ರಷ್ಯಾ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಪೆರು, ಬ್ರೆಜಿಲ್, ಈಕ್ವೆಡಾರ್, ಮೆಕ್ಸಿಕೊ, ಕೆನಡಾ, ಜಪಾನ್, ಚೀನಾ, ಮಲೇಷ್ಯಾ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಪ್ರತಿವರ್ಷ ಜೂನ್ 21 (June 21)ರಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ.

ಸಂಗೀತದ ಮಹತ್ವವೇನು? (importance of music)
ಸಂಗೀತವು ದೈಹಿಕ ಮಾತ್ರವಲ್ಲದೆ ನಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಮ್ಯೂಸಿಕ್ ಕೇಳೊದ್ರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತೆ. ದಿನವಿಡಿಯ ಬ್ಯುಸಿ ಜೀವನದಿಂದ ನೆಮ್ಮದಿ ಪಡೆಯಲು ಮ್ಯೂಸಿಕ್ ಸಹಾಯ ಮಾಡುತ್ತೆ. ಅಷ್ಟೆ ಅಲ್ಲ ಇದು ನಿಮ್ಮ ಒಂಟಿ ಜೀವನಕ್ಕೆ ಉತ್ತಮ ಸಂಗಾತಿಯಾಗಿ ಸಹ ಸಹಾಯ ಮಾಡುತ್ತದೆ. 

Latest Videos

click me!