ನಿಮ್ಮ ಹೃದಯದಲ್ಲಿ ಬ್ಲಾಕ್ ಇದ್ರೆ ಕಾಣಿಸಿಕೊಳ್ಳೋ 7 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

Published : Mar 16, 2026, 04:27 PM IST

ಇತ್ತೀಚೆಗೆ ಅನೇಕರಲ್ಲಿ ಹೃದಯದ ಬ್ಲಾಕ್‌ ಸಮಸ್ಯೆ ಕಾಣಿಸಿಕೊಳ್ತಿದೆ. ಈ ಬ್ಲಾಕ್‌ ಹೆಚ್ಚಾದಾಗ ಹಾರ್ಟ್‌ ಅಟ್ಯಾಕ್‌, ನಂತರ ಹಾರ್ಟ್‌ ಫೇಲ್ಯೂರ್‌ಗೂ ಕಾರಣವಾಗುತ್ತೆ. ಹೃದಯದ ಕಾರ್ಯವ್ಯವಸ್ಥೆಯಲ್ಲಿ ದೋಷ ಉಂಟಾದಾಗ ಹಾರ್ಟ್‌ ಬ್ಲಾಕ್‌ ಸಂಭವಿಸುತ್ತದೆ.

PREV
19
ಹೃದಯದಲ್ಲಿ ಬ್ಲಾಕ್ ಇದ್ದರೆ ಕಾಣಿಸಿಕೊಳ್ಳುವ ಏಳು ಲಕ್ಷಣಗಳು

ಇತ್ತೀಚೆಗೆ ಅನೇಕರಲ್ಲಿ ಹೃದಯದ ಬ್ಲಾಕ್‌ ಸಮಸ್ಯೆ ಕಾಣಿಸಿಕೊಳ್ತಿದೆ. ಈ ಬ್ಲಾಕ್‌ ಹೆಚ್ಚಾದಾಗ ಹಾರ್ಟ್‌ ಅಟ್ಯಾಕ್‌, ನಂತರ ಹಾರ್ಟ್‌ ಫೇಲ್ಯೂರ್‌ಗೂ ಕಾರಣವಾಗುತ್ತೆ. ಹೃದಯದ ಕಾರ್ಯವ್ಯವಸ್ಥೆಯಲ್ಲಿ ದೋಷ ಉಂಟಾದಾಗ ಹಾರ್ಟ್‌ ಬ್ಲಾಕ್‌ ಸಂಭವಿಸುತ್ತದೆ. 

ಹೃದಯ ಸ್ತಂಭನವನ್ನು 'ಕರೋನರಿ ಆರ್ಟರಿ ಡಿಸೀಸ್' ಅಂತಾನೂ ಕರೆಯುತ್ತಾರೆ. ಇದು ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳಾದ ಕರೋನರಿ ಅಪಧಮನಿಗಳ ಮೇಲೆ ಪರಿಣಾಮ ಬೀರುವ ಸ್ಥಿತಿಯಾಗಿದೆ.

29
ಹೃದಯದ ಸ್ನಾಯುಗಳಿಗೆ ರಕ್ತ ಸಂಚಾರ ಸರಿಯಾಗಿ ಆಗದಿದ್ದಾಗ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ

ಹೃದಯದ ಸ್ನಾಯುಗಳಿಗೆ ರಕ್ತ ಸಂಚಾರ ಸರಿಯಾಗಿ ಆಗದಿದ್ದಾಗ ಅದರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಇತರ ವಸ್ತುಗಳು ಅಪಧಮನಿಗಳ ಗೋಡೆಗಳ ಮೇಲೆ ಶೇಖರಣೆಯಾಗುವುದರಿಂದ ಹೃದಯ ಸ್ತಂಭನ ಉಂಟಾಗುತ್ತದೆ. ಇದನ್ನು 'ಅಥೆರೋಸ್ಕ್ಲೆರೋಸಿಸ್' ಎಂದು ಕರೆಯಲಾಗುತ್ತದೆ.

39
ಪ್ಲೇಕ್ ಶೇಖರಣೆಯು ಅಪಧಮನಿಗಳನ್ನು ಕಿರಿದಾಗಿಸುತ್ತದೆ.

ಪ್ಲೇಕ್ ಶೇಖರಣೆಯು ಅಪಧಮನಿಗಳನ್ನು ಕಿರಿದಾಗಿಸುತ್ತದೆ. ಹೃದಯಕ್ಕೆ ರಕ್ತ ಸಂಚಾರದ ಕೊರತೆಯಿಂದಾಗಿ ಈ ಸ್ಥಿತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಪಧಮನಿಗಳು ಸಂಪೂರ್ಣವಾಗಿ ಬ್ಲಾಕ್ ಆದಾಗ, ಅದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ವಿಶ್ವಾದ್ಯಂತ ಸಾವಿಗೆ ಹೃದಯ ಸಂಬಂಧಿ ಕಾಯಿಲೆಗಳೇ ಪ್ರಮುಖ ಕಾರಣ. ಹೃದಯದಲ್ಲಿ ಬ್ಲಾಕ್ ಇದ್ದರೆ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

49
ಎದೆಯಲ್ಲಿ ಉಂಟಾಗುವ ನೋವು ಮತ್ತು ಬಿಗಿದ ಅನುಭವ

ಎದೆಯಲ್ಲಿ ಒತ್ತಡ ಅಥವಾ ಬಿಗಿತದ ಅನುಭವ ಮೊದಲ ಲಕ್ಷಣವಾಗಿದೆ. ಆಗಾಗ ಕಾಣಿಸಿಕೊಳ್ಳುವ ಎದೆನೋವನ್ನು ಎಂದಿಗೂ ನಿರ್ಲಕ್ಷಿಸಬಾರದು.

59
ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಮತ್ತೊಂದು ಲಕ್ಷಣ

ಮೆಟ್ಟಿಲು ಹತ್ತಿದ ನಂತರ ಅಥವಾ ಮಾತನಾಡುವಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಮತ್ತೊಂದು ಲಕ್ಷಣ. ಹೃದಯವು ಆಮ್ಲಜನಕಯುಕ್ತ ರಕ್ತವನ್ನು ಪಂಪ್ ಮಾಡಲು ಕಷ್ಟಪಡುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ.

69
ಅಸಾಮಾನ್ಯ ಸುಸ್ತು ಹೃದಯ ಸ್ತಂಭನದಿಂದ ಉಂಟಾಗಬಹುದು

ಯಾವುದೇ ಸ್ಪಷ್ಟ ಕಾರಣವಿಲ್ಲದೆ, ವಿಶ್ರಾಂತಿ ಪಡೆದ ನಂತರವೂ ಅಸಾಮಾನ್ಯ ಸುಸ್ತು ಕಾಣಿಸಿಕೊಂಡರೆ ಅದು ಹೃದಯ ಸ್ತಂಭನದ ಕಾರಣವಿರಬಹುದು. ಅಪಧಮನಿಗಳು ಕಿರಿದಾದ ಕಾರಣ ಹೃದಯವು ದೇಹದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದಿದ್ದಾಗ ಇದು ಸಂಭವಿಸುತ್ತದೆ. ವ್ಯಾಯಾಮ ಮಾಡುವಾಗ ಈ ಆಯಾಸ ಹೆಚ್ಚಾಗುತ್ತದೆ ಮತ್ತು ದೈನಂದಿನ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ.

79
ವಿಪರೀತ ಬೆವರುವಿಕೆ ಕೂಡ ಹೃದಯಾಘಾತದ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ

ಎದೆನೋವಿನ ಜೊತೆಗೆ ವಿಪರೀತ ಬೆವರುವಿಕೆ ಕೂಡ ಹೃದಯಾಘಾತದ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಇದರೊಂದಿಗೆ ಸುಸ್ತು ಮತ್ತು ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳಬಹುದು. ಬ್ಲಾಕ್‌ಗಳು ಪ್ರಮುಖ ರಕ್ತನಾಳಗಳಲ್ಲಿದ್ದರೆ, ಬ್ಲಾಕ್‌ಗಳ ಪ್ರಕಾರ ಮತ್ತು ಸಂಖ್ಯೆಯನ್ನು ಅವಲಂಬಿಸಿ ಆಂಜಿಯೋಪ್ಲ್ಯಾಸ್ಟಿ ಅಥವಾ ಬೈಪಾಸ್ ಸರ್ಜರಿ ಮಾಡಬೇಕಾಗಬಹುದು.

89
ಕಾರಣವಿಲ್ಲದ ವಾಕರಿಕೆ, ಅಜೀರ್ಣ ಕೂಡ ಹೃದಯಾಘಾತದ ಸೂಚನೆ ನೀಡಬಹುದು

ಕಾರಣವಿಲ್ಲದ ವಾಕರಿಕೆ, ಅಜೀರ್ಣ ಕೂಡ ಹೃದಯಾಘಾತದ ಸೂಚನೆ ನೀಡಬಹುದು. ಇವು ಹೊಟ್ಟೆಯ ಸಮಸ್ಯೆಗಳಂತೆ ಕಂಡರೂ, ಇವು 'ಇಸ್ಕೆಮಿಯಾ'ದಿಂದ ಉಂಟಾಗುವ 'ವಾಗಸ್ ನರ'ದ ಸಕ್ರಿಯತೆಗೆ ಸಂಬಂಧಿಸಿವೆ. ಇದು ಸಾಮಾನ್ಯವಾಗಿ ಎದೆಯ ಉರಿಯೂತದೊಂದೊಂದಿಗೆ ಸಂಭವಿಸುತ್ತದೆ.

ಇದನ್ನೂ ಓದಿ: ಆರೋಗ್ಯಕ್ಕೆ ಒಳ್ಳೇದಂತ ತಿನ್ನುವ ಫ್ರಿಡ್ಜ್‌ನಲ್ಲಿರುವ ಈ 3 ಆಹಾರವೇ ನಮ್ಮ ಹೃದಯಕ್ಕೆ ಡೇಂಜರ್!

99
ಅನಿಯಮಿತ ಹೃದಯ ಬಡಿತ ಮತ್ತೊಂದು ಪ್ರಮುಖ ಲಕ್ಷಣ.

ಅನಿಯಮಿತ ಹೃದಯ ಬಡಿತ ಮತ್ತೊಂದು ಪ್ರಮುಖ ಲಕ್ಷಣ. ಇದು ಸಾಮಾನ್ಯಕ್ಕಿಂತ ವೇಗವಾಗಿ (ಟಾಕಿಕಾರ್ಡಿಯಾ) ಅಥವಾ ನಿಧಾನವಾಗಿ (ಬ್ರಾಡಿಕಾರ್ಡಿಯಾ) ಅಥವಾ ತಾಳತಪ್ಪಿ ಬಡಿಯುತ್ತದೆ. ಎದೆ ಬಡಿತ, ತಲೆತಿರುಗುವಿಕೆ, ಉಸಿರಾಟದ ತೊಂದರೆ ಮತ್ತು ಆಯಾಸ ಇದರ ಪ್ರಮುಖ ಲಕ್ಷಣಗಳಾಗಿವೆ.

ಇದನ್ನೂ ಓದಿ: ನಿಮ್ಮ ಹೃದಯದ ಆರೋಗ್ಯ ಹೇಗಿದೆ? ಮನೆಯಲ್ಲಿಯೇ ಐದು ನಿಮಿಷದ ಈ ಸಿಂಪಲ್​ ಟೆಸ್ಟ್​ ಮಾಡಿ ನೋಡಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories