ಅವನಿಂದ ಅವಳಾದ ಅನನ್ಯಾ ಬಂಗಾರ್‌ಗೆ ಯಶಸ್ವಿ ಲಿಂಗ ದೃಢೀಕರಣ ಸರ್ಜರಿ, ಏನಿದು ವ್ಯಜಿನೋಪ್ಲಾಸ್ಟಿ?

Published : Mar 16, 2026, 04:25 PM IST

ಅವನಿಂದ ಅವಳಾದ ಅನನ್ಯಾ ಬಂಗಾರ್‌ಗೆ ಯಶಸ್ವಿ ಲಿಂಗ ದೃಢೀಕರಣ ಸರ್ಜರಿ, ಏನಿದು ವ್ಯಜಿನೋಪ್ಲಾಸ್ಟಿ? ತಮ್ಮ ಯಶಸ್ವಿ ಸರ್ಜರಿ ಕುರಿತು ಅನಯ ಬಂಗಾರ್ ಹೇಳಿಕೊಂಡಿದ್ದಾರೆ. ಏನಿದು ಜನನಾಂಗವನ್ನು ಸ್ತ್ರೀಲಿಂಗಕ್ಕೆ ಬದಲಾವಣೆ ಮಾಡುವ ಈ ಸರ್ಜರಿ?

PREV
15
ಅನಯ ಬಂಗಾರ್‌ಗೆ ಸರ್ಜರಿ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಮಾಜಿ ಕೋಚ್ ಸಂಜಯ್ ಬಂಗಾರ್ ಪುತ್ರಿ ಅನಯ ಬಂಗಾರ್ (Anaya Bangar) ಈಗಾಗಲೇ ಭಾರಿ ಸದ್ದು ಮಾಡಿದ್ದಾರೆ. ಅವನಿಂದ ಅವಳಾದ ಅನಯ ಬಂಗಾರ್ ಕಳೆದ ಕೆಲ ವರ್ಷಗಳ ಹಿಂದೆ ಭಾರಿ ಸುದ್ದಿಯಾಗಿದ್ದರು. ಇದೀಗ ಅನಯ ಬಂಗಾರ್ ತಮ್ಮ ಸರ್ಜರಿ ಕುರಿತು ಮಾಹಿತಿ ನೀಡಿದ್ದಾರೆ. ತಾವು ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆ (Gender Affirming Surgery) ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಯಶಸ್ವಿಯಾಗಿ ಸರ್ಜರಿ ನಡೆದಿದೆ ಎಂದಿದ್ದಾರೆ.

25
ವಿರೋಧಿಸಿದ್ದ ಕುಟುಂಬ ಈಗ ಬೆಂಬಲ

ಅವನಿಂದ ಅವಳಾಗಿದ್ದ ಅನಯ ಬಂಗಾರ್‌ಗೆ ತಂದೆ ಸಂಜಯ್ ಬಂಗಾರ್ ಹಾಗೂ ಕಟುಂಬಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಲಿಂಗ ಬದಲಾವಣೆಗೆ ವಿರೋಧಿಸಿದ್ದ ಕುಟುಂಬ ಇದೀಗ ಬೆಂಬಲ ಸೂಚಿಸಿದ್ದಾರೆ ಎಂದು ಸ್ವತಃ ಅನಯ ಹೇಳಿದ್ದಾರೆ. ದುಬಾರಿ ಶಸ್ತ್ರಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ತಂದೆ( ಸಂಜಯ್ ಬಂಗಾರ್) ಭರಿಸಿದ್ದಾರೆ ಎಂದಿದ್ದಾರೆ.

35
ಏನಿದು ವ್ಯಜಿನೋಪ್ಲಾಸ್ಟಿ ಸರ್ಜರಿ

ಲಿಂಗ ಬದಲಾವಣೆ ಮಾಡಿಕೊಲ್ಳುವವರಿಗೆ ಲಿಂಗ ದಢೀಕರಣ ಸರ್ಜರಿ ಅತ್ಯಂತ ಪ್ರಮುಖವಾಗಿದೆ. ಕಾರಣ ವ್ಯಜಿನೋಪಾಸ್ಟಿ ಸರ್ಜರಿ ವ್ಯಕ್ತಿಯ ಜನನಾಂಗವನ್ನು ಸ್ತ್ರಿಲಿಂಗಕ್ಕೆ ಅನುಗುಣವಾಗಿ ಪುನರ್ ನಿರ್ಮಾಣ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಮಾಡುವ ಸರ್ಜರಿಯಾಗಿದೆ. ಪುರುಷನಿಂದ ಮಹಿಳೆಯಾಗಿ ಬದಲಾಗುವಾಗ ವಜೈನಲ್ ಕ್ಯಾನಲ್ ಚಿಕಿತ್ಸೆ ಮೂಲಕ ಮಾಡಲಾಗುತ್ತದೆ. ಈ ಶಸ್ತ್ರ ಚಿಕಿತ್ಸೆಯಿಂದ ಪುರುಷರ ದೈಹಿಕವಾಗಿ ಮಾನಸಿಕವಾಗಿಯೂ ಸಂಪೂರ್ಣವಾಗಿ ಮಹಿಳೆಯಾಗುತ್ತಾಳೆ.

45
ಐದು ವರ್ಷ ಕಾಲ ಕಾದ ಸರ್ಜರಿ

ಅನಯ ಬಂಗಾರ್ ಈ ಸರ್ಜರಿಗಾಗಿ ಬರೋಬ್ಬರಿ 5 ವರ್ಷ ಕಾದಿದ್ದಾರೆ. ಹಲವು ಹಾರ್ಮೋನ್ ಥೆರಪಿ ಹಾಗೂ ಮಾನಸಿಕ ಸಮಾಲೋಚನೆಗಳ ಮೂಲಕ ಈ ಸರ್ಜರಿಗೆ ತಯಾರಿ ಮಾಡಿಕೊಂಡಿದ್ದಾರೆ. ಈ ಕುರಿತು ಬಾಲಿವುಡ್‌ನ ಕೆಲ ಸದಸ್ಯರು ತಮಗೆ ನೆರವಾಗಿದ್ದಾರೆ ಎಂದು ಅನಯ ಬಂಗಾರ್ ಹೇಳಿಕೊಂಡಿದ್ದಾರೆ.

55
ಥಾಯ್ಲೆಂಡ್‌ನಲ್ಲಿ ಸರ್ಜರಿ

ಅನಯ ಬಂಗಾರ್ ಥಾಯ್ಲೆಂಡ್‌ನಲ್ಲಿ ಈ ಸರ್ಜರಿ ಮಾಡಿಸಿಕೊಂಡಿದ್ದಾರೆ. ಅತ್ಯಂತ ನುರಿತ ತಜ್ಞ ವೈದ್ಯರಿಂದಲೇ ಈ ಸರ್ಜರಿ ಮಾಡಿಸಿಕೊಳ್ಳಬೇಕು. ಇದು ಅತ್ಯಂತ ಕ್ಲಿಷ್ಟ ಸರ್ಜರಿಯಾಗಿದೆ. ಸರ್ಜರಿ ಬಳಿಕ ಕನಿಷ್ಠ 2 ತಿಂಗಳು ಸಂಪೂರ್ಣ ವಿಶ್ರಾಂತಿಯ ಅಗತ್ಯವಿದೆ. ಸದ್ಯ ಅನಯ ಬಂಗಾರ್ ಆಸ್ಪತ್ರೆಯಿಂದಲೇ ಮಾಹಿತಿ ನೀಡಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories