ಸೌತೆಕಾಯಿ ಬೇಸಿಗೆಯಲ್ಲಿ ತಾಜಾತನ ಮತ್ತು ತಂಪು ನೀಡುವ ತರಕಾರಿ. ಆದರೆ ಕೆಲವೊಮ್ಮೆ ಮಾರುಕಟ್ಟೆಯಿಂದ ಖರೀದಿಸಿದ ಸೌತೆಕಾಯಿ ಕಹಿಯಾಗಿ ಇರುತ್ತದೆ. ಈ ಕಹಿ ಸಲಾಡ್ ಅಥವಾ ರೈತಾ ರುಚಿಯನ್ನು ಹಾಳು ಮಾಡುತ್ತದೆ. ಆಗ ಅನೇಕ ಜನರು ಅದನ್ನು ಎಸೆಯುತ್ತಾರೆ. ಆದರೆ ಹೀಗೆ ಮಾಡುವ ಬದಲು ಕೆಲವು ಸುಲಭ ಮತ್ತು ಪರಿಣಾಮಕಾರಿ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಸೌತೆಕಾಯಿಯ ಕಹಿಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.
28
ಆಹಾರವನ್ನ ಮತ್ತಷ್ಟು ಟೇಸ್ಟಿಯಾಗಿಸಲು
ಈ ಲೇಖನದಲ್ಲಿ ಸೌತೆಕಾಯಿಯ ಕಹಿಯನ್ನು ಕಡಿಮೆ ಮಾಡಲು ಆರು ಪರಿಣಾಮಕಾರಿ ಮಾರ್ಗಗಗಳನ್ನ ತಿಳಿಸುತ್ತಿದ್ದೇವೆ. ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ಸೌತೆಕಾಯಿ ಸಂಪೂರ್ಣವಾಗಿ ರುಚಿಕರವಾಗಿರುತ್ತದೆ. ಇದು ನಿಮ್ಮ ಆಹಾರವನ್ನೂ ಮತ್ತಷ್ಟು ಟೇಸ್ಟಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ.
38
ಬೀಜಗಳು ಮತ್ತು ತಿರುಳನ್ನು ತೆಗೆದುಹಾಕಿ
ಸೌತೆಕಾಯಿಯ ಕಹಿಗೆ ದೊಡ್ಡ ಕಾರಣವೆಂದರೆ ಅದರ ಬೀಜಗಳು ಮತ್ತು ಅವುಗಳ ಸುತ್ತಲಿನ ತಿರುಳು. ಅದನ್ನು ತೆಗೆದುಹಾಕಲು, ಸೌತೆಕಾಯಿಯನ್ನು ಉದ್ದವಾಗಿ ಕತ್ತರಿಸಿ. ಒಂದು ಚಮಚದ ಸಹಾಯದಿಂದ ಬೀಜಗಳು ಮತ್ತು ತಿರುಳನ್ನು ತೆಗೆದುಹಾಕಿ. ಇದು ಸೌತೆಕಾಯಿಯ ರುಚಿಯನ್ನು ಹೆಚ್ಚು ಮೃದು ಮತ್ತು ಟೇಸ್ಟಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ.
48
ಸೌತೆಕಾಯಿ ಸಿಪ್ಪೆ ತೆಗೆಯಿರಿ
ಸೌತೆಕಾಯಿಯ ಸಿಪ್ಪೆಯೂ ಕೆಲವೊಮ್ಮೆ ಕಹಿಯಾಗಿರುತ್ತದೆ. ಒಂದು ವೇಳೆ ಸೌತೆಕಾಯಿಯ ಸಿಪ್ಪೆ ತೆಳುವಾಗಿಲ್ಲದಿದ್ದರೆ ಅಥವಾ ತಾಜಾವಿಲ್ಲವೆಂದ್ರೆ ಅದರ ಸಿಪ್ಪೆ ತೆಗೆಯಿರಿ. ಇದು ಸೌತೆಕಾಯಿಯ ಕಹಿ ರುಚಿಯನ್ನು ಕಡಿಮೆ ಮಾಡುತ್ತದೆ ಮತ್ತು ತಿನ್ನಲು ಸುಲಭವಾಗುತ್ತದೆ.
58
ಉಪ್ಪು ಬಳಸಿ
ಸೌತೆಕಾಯಿ ತುಂಡುಗಳ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ 15-20 ನಿಮಿಷಗಳ ಕಾಲ ಬಿಡಿ. ಉಪ್ಪು ಸೌತೆಕಾಯಿಯ ಕಹಿಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯ ನಂತರ ಸೌತೆಕಾಯಿಯನ್ನು ತೊಳೆದು ಬಳಸಿ.
68
ತಣ್ಣೀರಿನಲ್ಲಿ ನೆನೆಸುವುದು
ಸೌತೆಕಾಯಿಯನ್ನು ಕತ್ತರಿಸಿ ತಣ್ಣೀರಿನಲ್ಲಿ 30 ನಿಮಿಷದಿಂದ ಒಂದು ಗಂಟೆಯವರೆಗೆ ನೆನೆಸಿಡಿ. ನೀರು ಸೌತೆಕಾಯಿಯ ಕಹಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅದನ್ನು ಗರಿಗರಿಯಾಗಿಸುತ್ತದೆ. ನೆನೆಸಿದ ನಂತರ, ಸೌತೆಕಾಯಿಯನ್ನು ಬಸಿದು ಒಣಗಿಸಿ.
78
ಬೇಯಿಸಿದ ಭಕ್ಷ್ಯಗಳಲ್ಲಿ ಬಳಸಿ
ಸೌತೆಕಾಯಿ ತುಂಬಾ ಕಹಿಯಾಗಿದ್ದರೆ, ಅದನ್ನು ಹಸಿಯಾಗಿ ತಿನ್ನುವ ಬದಲು ಬೇಯಿಸಿದ ಭಕ್ಷ್ಯಗಳಿಗೆ ಸೇರಿಸಿ. ಬೇಯಿಸಿದಾಗ ಸೌತೆಕಾಯಿ ತನ್ನ ಕಹಿಯನ್ನು ಕಳೆದುಕೊಳ್ಳುತ್ತದೆ. ನೀವು ಅದನ್ನು ತರಕಾರಿಗಳೊಂದಿಗೆ ಫ್ರೈ ಮಾಡಬಹುದು, ಸೂಪ್‌ಗಳಿಗೆ ಅಥವಾ ಗ್ರೇವಿಗಳು ಮತ್ತು ಸ್ಟಿರ್-ಫ್ರೈಗಳಲ್ಲಿ ಸೇರಿಸಬಹುದು.
88
ಸಿಟ್ರಸ್ ಅಂಶಗಳನ್ನು ಸೇರಿಸಿ
ಸೌತೆಕಾಯಿಗೆ ನಿಂಬೆ ರಸ ಅಥವಾ ವಿನೆಗರ್ ಸೇರಿಸುವುದರಿಂದ ಕಹಿ ಹೋಗುತ್ತದೆ ಮತ್ತು ರುಚಿ ಹೆಚ್ಚಾಗುತ್ತದೆ. ಸೌತೆಕಾಯಿ ಹೋಳುಗಳ ಮೇಲೆ ಸ್ವಲ್ಪ ನಿಂಬೆ ಹಿಂಡಿ ಅಥವಾ ಸ್ವಲ್ಪ ಪ್ರಮಾಣದ ವಿನೆಗರ್ ಸೇರಿಸಿ. ಈ ವಿಧಾನವು ಸಲಾಡ್ ಅಥವಾ ರೈತಾದಲ್ಲಿ ಸೌತೆಕಾಯಿಯನ್ನು ಹೆಚ್ಚು ರುಚಿಕರವಾಗಿಸುತ್ತದೆ.