ಶುಂಠಿ ಚಹಾಜೀರ್ಣಕಾರಿ ಸಮಸ್ಯೆಗಳನ್ನು ತೊಡೆದುಹಾಕಲು ಶುಂಠಿ ಅತ್ಯುತ್ತಮ ಪರಿಹಾರಗಳಲ್ಲೊಂದು.ಶುಂಠಿಯಲ್ಲಿನ ಆಂಟಾಸಿಡ್ ಮತ್ತು ಕಾರ್ಮಿನೇಟಿವ್ ಗುಣಲಕ್ಷಣಗಳು ಜೀರ್ಣಕಾರಿ ಸಮಸ್ಯೆಗಳಾದ ಉಬ್ಬುವುದು ಮತ್ತು ಜಠರದುರಿತದಿಂದ ಪಾರು ಮಾಡುತ್ತದೆ.
ನೀವು ಮಾಡಬೇಕಾಗಿರುವುದು ಸ್ವಲ್ಪ ತುರಿದ ಶುಂಠಿಯನ್ನು ಒಂದು ಕಪ್ ಕುದಿಯುವ ನೀರಿನಲ್ಲಿ ಬೆರೆಸಿ. ಇದನ್ನು 10 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಸೇವಿಸಿ. ಆಮ್ಲೀಯತೆ ಮತ್ತು ಎದೆಯುರಿ ತೊಡೆದುಹಾಕಲು ಇದು ಸಹಕಾರಿ.
ಅಡುಗೆ ಸೋಡಾಮತ್ತೊಂದು ನೈಸರ್ಗಿಕ ವಿಧಾನವೆಂದರೆ ಅಡಿಗೆ ಸೋಡಾ. ಸೋಡಿಯಂ ಬೈಕಾರ್ಬನೇಟ್ ಎಂದೂ ಕರೆಯಲ್ಪಡುವ ಇದು ಆಮ್ಲ ರಿಫ್ಲಕ್ಸ್ ರೋಗಲಕ್ಷಣಗಳನ್ನು ಕಡಿಮೆಮಾಡುತ್ತದೆ.
ಒಂದು ಲೋಟ ನೀರಿನಲ್ಲಿ ಒಂದು ಟೀ ಚಮಚ ಅಡಿಗೆ ಸೋಡಾ ಪುಡಿಯನ್ನು ಬೆರೆಸಿ ಕುಡಿಯಿರಿ. ಅಜೀರ್ಣ, ಉಬ್ಬುವುದು ಅಥವಾ ವಾಕರಿಕೆಗಳಿಂದ ಬಳಲುತ್ತಿದ್ದರೆ ಅದು ಇದು ಸಹಕಾರಿ.ಅಡುಗೆ ಸೋಡಾವನ್ನು ಸೇವಿಸುವಾಗ ಜಾಗರೂಕರಾಗಿರಬೇಕು. ಅಲ್ಲದೆ, ಅದನ್ನು ಪೂರ್ಣ ಹೊಟ್ಟೆಯಲ್ಲಿ ಸೇವಿಸಬಾರದು.
ಆಪಲ್ ಸೈಡರ್ ವಿನೆಗರ್ಆಪಲ್ ಸೈಡರ್ ವಿನೆಗರ್ (ಎಸಿವಿ) ಎದೆಯುರಿ ಚಿಕಿತ್ಸೆಗಾಗಿ ಕೆಲವರು ಬಳಸುವ ಜನಪ್ರಿಯ ಪರಿಹಾರ. ಊಟದ ನಂತರ ಡೈಲ್ಯೂಟ್ ಮಾಡಿದ ಎಸಿವಿ ಕುಡಿಯುವುದರಿಂದ ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸುತ್ತದೆ ಮತ್ತು ಅದರ ರೋಗಲಕ್ಷಣಗಳಿಂದ ಪರಿಹಾರ ನೀಡುತ್ತದೆ.
ಲೋಳೆಸರಅಲೋವೆರಾ ವ್ಯಾಪಕವಾಗಿ ಬಳಸಲಾಗುವ ಸಾಂಪ್ರದಾಯಿಕ ಔಷಧ.ಇದು ಎದೆಯುರಿಗಾಗಿ ಮತ್ತೊಂದು ಪರಿಹಾರ. ತಾಜಾ ಅಲೋವೆರಾ ಎಲೆಯನ್ನು ತೆಗೆದುಕೊಂಡು ಅದರ ರಸವನ್ನು ಹೊರ ತೆಗೆಯಿರಿ.
ಜೀರ್ಣಾಂಗವ್ಯೂಹದ ಉರಿಯೂತವನ್ನು ಕಡಿಮೆ ಮಾಡಲು ಊಟಕ್ಕೆ ಕನಿಷ್ಠ ಅರ್ಧ ಘಂಟೆಯ ಮೊದಲು ಈ ರಸವನ್ನು ಅರ್ಧ ಕಪ್ ಸೇವಿಸಿ. ಪರಿಹಾರಕ್ಕಾಗಿ ಇದನ್ನು ದಿನಕ್ಕೆ ಎರಡು ಬಾರಿ ಕುಡಿಯಿರಿ.
ಚೂಯಿಂಗ್ ಗಮ್ಚೂಯಿಂಗ್ ಗಮ್ ಅನ್ನನಾಳದಲ್ಲಿ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ. ಇದು ಬೈಕಾರ್ಬನೇಟ್ ಅನ್ನು ಹೊಂದಿರುತ್ತದೆ ಅದು ಎದೆಯುರಿ ಮತ್ತು ಸಂಬಂಧಿತ ರೋಗಲಕ್ಷಣಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಕಂಡುಬರುತ್ತದೆ.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಇನ್ನೂ ಯೋಚಿಸುತ್ತಿದ್ದೀರಾ? ಚೂಯಿಂಗ್ ಗಮ್ ಲಾಲಾರಸದ ರಚನೆಯನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆಯ ಆಮ್ಲದ ಅನ್ನನಾಳವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.