ನಿರ್ಲಕ್ಷ್ಯ ಸಾಕು... ಈ 5 ಸಲಹೆಗಳು ಫಿಟ್ ಆಗಿ ಇರಿಸಬಲ್ಲವು!!

First Published Dec 30, 2020, 5:23 PM IST

ಜೀವನವನ್ನು ಆರೋಗ್ಯವಾಗಿಡುವುದು ಕಷ್ಟದ ಕೆಲಸವಲ್ಲ, ಕೇವಲ ಜಾಗೃತರಾಗಿರಬೇಕು. ಆರೋಗ್ಯವಂತ ಶರೀರವನ್ನು  ಪ್ರತಿಯೊಬ್ಬರೂ ಬಯಸುತ್ತಾರೆ, ಆದರೆ ಅದರತ್ತ ಗಮನ ಹರಿಸುವುದಿಲ್ಲ. ಉತ್ತಮ ಆರೋಗ್ಯಕ್ಕೆ ಆಹಾರ ನಿಯಂತ್ರಣ ಮತ್ತು ವ್ಯಾಯಾಮ ಬಹಳ ಮುಖ್ಯ. ಅಸಮರ್ಪಕ ಆಹಾರ ಸೇವನೆ ಅಭ್ಯಾಸಗಳು ಅನೇಕ ವೇಳೆ ಗಂಭೀರ ಕಾಯಿಲೆಗಳಿಗೆ ಎಡೆ ಮಾಡಿಕೊಡಬಹುದು. ಈಗಿರುವ ಜೀವನಶೈಲಿ ಜನರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ವನದ ಪ್ರಾಯೋಗಿಕತೆಗಳ ನಡುವೆ ಏನನ್ನೂ ತಿನ್ನದಿರುವುದು ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರುವುದಿಂದ ಭವಿಷ್ಯದಲ್ಲಿ ತೊಂದರೆಗಳು ಸೃಷ್ಟಿಯಾಗುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ 5 ಸಲಹೆಗಳ ಬಗ್ಗೆ ಮಾಹಿತಿ ಇಲ್ಲಿದೆ.
undefined
ಫಾಸ್ಟ್ ಫುಡ್, ಮಾಲಿನ್ಯ ಇತ್ಯಾದಿಗಳಿಂದಾಗಿ ಜನರಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿವೆ. ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತಿದ್ದರೆ ಈ ಟಿಪ್ಸ್ ಪಾಲಿಸಿ...
undefined
ಕಣ್ಣುಗಳು ಆರೋಗ್ಯಕರ ದೇಹದ ಒಂದು ವಿಶೇಷ ಭಾಗ. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ನಲ್ಲಿ ಹೆಚ್ಚು ಕೆಲಸ ಮಾಡುವುದರಿಂದ ಕಣ್ಣುಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಣ್ಣಿನ ಬೆಳಕನ್ನು ಸರಿಯಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ.
undefined
ಪಾದಗಳ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ. ಪಾದಗಳ ಅಂಗಾಲುಗಳಿಗೆ ಸಾಸಿವೆ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿ. ಇದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
undefined
ಮಾಲಿನ್ಯ ಮತ್ತು ಅಸಮರ್ಪಕ ಊಟವು ಸಾಮಾನ್ಯ ಸಂಗತಿಯಾಗಿ ಪರಿಣಮಿಸಿದೆ. ಗಂಟಲು ಸರಿಯಾಗಿಡಲು ಕಾಳುಮೆಣಸನ್ನು ಬಳಸುವುದು ಪ್ರಯೋಜನಕಾರಿ. ನೀವು ಒಂದು ತುಳಸಿ ಮತ್ತು ಕಾಳುಮೆಣಸಿನ ಪುಡಿಯನ್ನು ಕಷಾಯ ಮಾಡಿ ಕುಡಿಯಬಹುದು.
undefined
ಕಿಡ್ನಿಯು ದೇಹದ ಪ್ರಮುಖ ಭಾಗ. ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಅಂದರೆ ದೇಹದಲ್ಲಿರುವ ವಿಷವನ್ನು ಹೊರಹಾಕುವುದು. ಮೂತ್ರಪಿಂಡಗಳು ನೆರವಾಗಿರುತ್ತವೆ, ಆದ್ದರಿಂದ ಸಾಕಷ್ಟು ನೀರನ್ನು ಕುಡಿಯಿರಿ. ರಾತ್ರಿ ಮಲಗುವಾಗ ನೀರು ಕುಡಿಯಬೇಡಿ. ಇದು ಮೂತ್ರಕೋಶದ ಮೇಲೆ ಒತ್ತಡ ಹೆಚ್ಚಿಸುತ್ತದೆ.
undefined
ಕರುಳಿನ ಕಾಯಿಲೆಯು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾದರೆ ಮಸಾಲೆ ಪದಾರ್ಥಗಳನ್ನು ತಿನ್ನಬೇಡಿ. ಋತುಮಾನಕ್ಕೆ ಅನುಗುಣವಾದ ಹಣ್ಣುಗಳನ್ನು ಬಳಸಿ.
undefined
ಯಕೃತ್ ಆರೋಗ್ಯಕ್ಕಾಗಿ ಕೊಬ್ಬಿನ ಆಹಾರಗಳನ್ನು ಸೇವಿಸಬೇಡಿ.ಹೆಚ್ಚು ಖಾರ-ಮಸಾಲೆ ಅಥವಾ ಎಣ್ಣೆ ಪದಾರ್ಥಗಳನ್ನು ತಿನ್ನಬೇಡಿ. ಚೈನೀಸ್ ನಂತಹ ಫಾಸ್ಟ್ ಫುಡ್ ಗಳಿಂದ ದೂರವಿರಿ.
undefined
click me!