Reheating Rice: ಪದೇ ಪದೇ ಅನ್ನ ಬಿಸಿ ಮಾಡಿ ತಿನ್ನುತ್ತೀರ? ಆರೋಗ್ಯಕ್ಕೆ ಡೇಂಜರ್

Published : Feb 07, 2026, 11:28 PM IST

Reheating Rice: ಅಕ್ಕಿಯನ್ನು ನಮ್ಮ ಭಾರತೀಯ ಆಹಾರದ ಮುಖ್ಯ ಭಾಗವೆಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಹಲವರು ಇದನ್ನು ಒಮ್ಮೆ ಬೇಯಿಸಿ ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುತ್ತಾರೆ. ಆದರೆ ಅದು ನಿಮಗೆ ಅನಾರೋಗ್ಯ ತರಬಹುದು ಎಂದು ನಿಮಗೆ ತಿಳಿದಿದೆಯೇ? ಹೇಗೆ ಎಂದು ತಿಳಿಯೋಣ.

PREV
15
ಭಾರತೀಯರ ನೆಚ್ಚಿನ ಅನ್ನ

ಭಾರತೀಯರ ಊಟವು ಬೇಳೆ, ಅನ್ನ ಮತ್ತು ತರಕಾರಿಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಕೆಲವರು ಅನ್ನಕ್ಕಿಂತ ರೊಟ್ಟಿಯನ್ನು ಇಷ್ಟಪಡುತ್ತಾರೆ, ಬೇಳೆ ಮತ್ತು ಅನ್ನ ಬಹುತೇಕ ಎಲ್ಲರಿಗೂ ಇಷ್ಟವಾಗುತ್ತದೆ. ನಮ್ಮ ದಕ್ಷಿಣ ಭಾರತದಲ್ಲಂತೂ ದಿನಕ್ಕೆ ಒಂದು ಸಲವಾದರು ಅನ್ನ ತಿನ್ನಲೇಬೇಕು. ಆದ್ದರಿಂದ, ನಮ್ಮಲ್ಲಿ ಹೆಚ್ಚಾಗಿ ಜನ ಏನು ಮಾಡ್ತಾರೆ? ಇಡೀ ದಿನದ ಅನ್ನವನ್ನು ಒಂದು ಸಲ ಬೇಯಿಸಿ ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುತ್ತಾರೆ, ಆದರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?

25
ಅನ್ನವನ್ನು ಮತ್ತೆ ಮತ್ತೆ ಬಿಸಿ ಮಾಡ್ತೀರಾ?

ಅನ್ನವನ್ನು ಮತ್ತೆ ಮತ್ತೆ ಬಿಸಿ ಮಾಡೋದು ಅನಾರೋಗ್ಯಕರ ಎನ್ನುವುದು ನಿಮಗೆ ಸ್ವಲ್ಪ ಆಘಾತಕಾರಿ ಎನಿಸಬಹುದು, ಆದರೆ ಇದು ನಿಜ. ಸರಿಯಾಗಿ ಸಂಗ್ರಹಿಸದಿದ್ದರೆ ಅಥವಾ ಮತ್ತೆ ಬಿಸಿ ಮಾಡಿದರೆ, ಬ್ಯಾಸಿಲಸ್ ಸೀರಿಯಸ್ ಎಂಬ ಬ್ಯಾಕ್ಟೀರಿಯದಿಂದಾಗಿ ಗಂಭೀರ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನು "ಫ್ರೈಡ್ ರೈಸ್ ಸಿಂಡ್ರೋಮ್" ಎಂದೂ ಕರೆಯುತ್ತಾರೆ.

35
ಅನ್ನವನ್ನು ಮತ್ತೆ ಬಿಸಿ ಮಾಡುವುದು ಏಕೆ ಅಪಾಯಕಾರಿ?

ಅನ್ನ ಬೇಯಿಸಿದಾಗ ಹೆಚ್ಚಿನ ಬ್ಯಾಕ್ಟೀರಿಯಾಗಳು ಸಾಯುತ್ತವೆ, ಆದರೆ ಬ್ಯಾಸಿಲಸ್ ಸೀರಿಯಸ್‌ನ ಬೀಜಕಗಳು ತುಂಬಾ ಗಟ್ಟಿಯಾಗಿರುತ್ತವೆ. ಅವು ಶಾಖದಲ್ಲೂ ಬದುಕುಳಿಯುತ್ತವೆ. ಬೇಯಿಸಿದ ಬೀಜಾಣು ಕೋಣೆಯ ಉಷ್ಣಾಂಶದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಬಿಟ್ಟರೆ, ಈ ಬ್ಯಾಕ್ಟೀರಿಯಾಗಳು ಬೆಳೆದು ವಿಷವನ್ನು ಉತ್ಪಾದಿಸಲು ಪ್ರಾರಂಭಿಸುತ್ತವೆ. ನೀವು ಅನ್ನವನ್ನು ಮತ್ತೆ ಬಿಸಿ ಮಾಡಿದಾಗ, ಬ್ಯಾಕ್ಟೀರಿಯಾಗಳು ಸಾಯುತ್ತವೆ, ಆದರೆ ಈಗಾಗಲೇ ಬಿಡುಗಡೆಯಾದ ವಿಷಗಳು ಶಾಖದಿಂದ ನಷ್ಟವಾಗೋದಿಲ್ಲ. ಈ ವಿಷಗಳು ನಿಮ್ಮನ್ನು ಅಸ್ವಸ್ಥಗೊಳಿಸುತ್ತವೆ.

45
ಅನಾರೋಗ್ಯಕ್ಕೆ ಗುರಿಯಾಗುವಿರಿ

ಅಂತಹ ಪರಿಸ್ಥಿತಿಯಲ್ಲಿ, ನೀವು ಅನಾರೋಗ್ಯಕ್ಕೆ ಒಳಗಾಗಬಹುದು ಮತ್ತು ಸ್ವಲ್ಪ ಪ್ರಮಾಣದ ಕಲುಷಿತ ಅನ್ನವನ್ನು ತಿಂದರೂ ಸಹ ಹೊಟ್ಟೆ ಉಬ್ಬರ ಉಂಟಾಗುತ್ತದೆ. ತಿಂದ 1 ರಿಂದ 6 ಗಂಟೆಗಳ ಒಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವಾಕರಿಕೆ, ವಾಂತಿ, ಹೊಟ್ಟೆ ನೋವು ಅಥವಾ ಸೆಳೆತ, ಅತಿಸಾರ ಮತ್ತು ಕೆಲವೊಮ್ಮೆ ಸೌಮ್ಯ ಜ್ವರದಂತಹ ಕೆಲವು ಅಸ್ವಸ್ಥತೆಯನ್ನು ನೀವು ಅನುಭವಿಸಬಹುದು.

55
ಈ ಸರಳ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ:
  • ಅಡುಗೆ ಮಾಡಿದ ಒಂದು ಗಂಟೆಯೊಳಗೆ ಅನ್ನವನ್ನು ತಣಿಯಲು ಬಿಡಿ. ಅದನ್ನು ದೊಡ್ಡ ಪಾತ್ರೆಯಲ್ಲಿ ಹರಡಿ ಅಥವಾ ಸಣ್ಣ ಭಾಗಗಳಾಗಿ ವಿಂಗಡಿಸಿ.
  • ತುಂಬಾ ಬಿಸಿಯಾದ ಅನ್ನವನ್ನು ರೆಫ್ರಿಜರೇಟರ್‌ನಲ್ಲಿ ಇಡಬೇಡಿ; ಮೊದಲು ಅದನ್ನು ತಣ್ಣಗಾಗಲು ಬಿಡಿ.
  • ಯಾವಾಗಲೂ ಅನ್ನವನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.
  • ಕೋಣೆಯ ಉಷ್ಣಾಂಶದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ, ವಿಶೇಷವಾಗಿ ಬೇಸಿಗೆಯಲ್ಲಿ ಒಂದು ಗಂಟೆಯವರೆಗೆ ಇಡಬೇಡಿ.
  • ಅನ್ನವನ್ನು ತಿನ್ನುವ ಮೊದಲು ಚೆನ್ನಾಗಿ ಬಿಸಿ ಮಾಡಿ, ಅದು ಸಂಪೂರ್ಣವಾಗಿ ಬೆಂದಿದೆ ಎಂದು ಖಚಿತಪಡಿಸಿಕೊಳ್ಳಿ. ಆದರೆ ಮತ್ತೆ ಮತ್ತೆ ಬಿಸಿ ಮಾಡಬೇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories