ಈ 5 ತರಕಾರಿ ಹೆಚ್ಚು ಸೇವಿಸಿದ್ರೆ ಹೃದಯ ನಾಳ ಬ್ಲಾಕೇಜ್ ತಪ್ಪಿಸ್ಬೋದು

First Published Jan 27, 2024, 11:49 AM IST

ಹಾರ್ಟ್ ಪ್ರಾಬ್ಲಂ ಈಗಂತೂ ಮಕ್ಕಳಿಂದ ಮುದುಕರವೆರೆಗೆ ಯಾರಿಗೆ ಬರುತ್ತೆ ಎಂದೇ ಹೇಳೋಕಾಗಲ್ಲ. ಹಾಗಾಗಿ, ನಮ್ಮ ಹೃದಯವನ್ನು ಸ್ವಾಸ್ಥ್ಯವಾಗಿಟ್ಟುಕೊಳ್ಳಲು ಈ ತರಕಾರಿಗಳ ಸೇವನೆ ಹೆಚ್ಚು ಮಾಡುವುದು ಉತ್ತಮ.

ಈಗೀಗ ಹೈ ಸ್ಕೂಲ್ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ವಯಸ್ಸಿನ ಹಂಗಿಲ್ಲದೆ ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಹೃದಯನಾಳ ಬ್ಲಾಕೇಜ್ ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯು ದೊಡ್ಡ ಮತ್ತು ಸಂಕೀರ್ಣವಾದ ಅಸ್ವಸ್ಥತೆಗೆ ತಳ್ಳಬಹುದು. ಆದ್ದರಿಂದ ಯಾವಾಗಲೂ ಹೃದಯ ಮತ್ತು ಅದರ ನಾಳಗಳ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದುಕೊಳ್ಳಬೇಕು. ಇದಕ್ಕೆ ಸುಲಭೋಪಾಯ ತರಕಾರಿಯಲ್ಲಿದೆ. 

ಕೆಲವು ತರಕಾರಿಗಳಲ್ಲಿ ಕಂಡುಬರುವ ಕರಗುವ ಫೈಬರ್ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್‌ಗಳು ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡಲು ಕರಗುವ ಫೈಬರ್‌ ಇರುವಂಥ ಆಹಾರಗಳತ್ತ ನಾವು ಗಮನ ಹರಿಸಬೇಕು. ಸಾಮಾನ್ಯವಾಗಿ ಫೈಬರ್ ಅಧಿಕವಾಗಿ ಸಿಗುವುದು ತರಕಾರಿಗಳಿಂದ.

heart

 ತರಕಾರಿಗಳು ಸಮತೋಲಿತ ಆಹಾರದ ಒಂದು ಭಾಗವಾಗಿದ್ದು ಅವು ಸಾಮಾನ್ಯವಾಗಿ ಹೃದಯರಕ್ತನಾಳದ ಆರೋಗ್ಯವನ್ನು ಬೆಂಬಲಿಸುತ್ತವೆ. ಹಾಗಿದ್ದರೆ ಹೃದಯ ಆರೋಗ್ಯವನ್ನು ಕಾಪಾಡುವ, ನಾಳಗಳನ್ನು ಬ್ಲಾಕೇಜ್ ಫ್ರೀಯಾಗಿಡುವ ನಾರು ಹೆಚ್ಚಿರುವ ತರಕಾರಿಗಳು ಯಾವೆಲ್ಲ ನೋಡೋಣ. 

ಹಸಿರು ಎಲೆಗಳು
ಹಸಿರು ತರಕಾರಿಗಳು ನಿಮ್ಮ ಹೃದಯದ ಉತ್ತಮ ಸ್ನೇಹಿತರು. ಜೀವಸತ್ವಗಳು, ಖನಿಜಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳು ಹೆಚ್ಚಿರುವ ತರಕಾರಿಗಳಲ್ಲಿ ಪಾಲಕ್ ಮತ್ತು ಎಲೆಕೋಸು ಸೇರಿವೆ. ಅವು ರಕ್ತದೊತ್ತಡವನ್ನು ಕಡಿಮೆ ಮಾಡುವ ಮತ್ತು ಸಾಮಾನ್ಯವಾಗಿ ಹೃದಯದ ಆರೋಗ್ಯವನ್ನು ಸುಧಾರಿಸುವ ವಸ್ತುಗಳನ್ನು ಒಳಗೊಂಡಿರುತ್ತವೆ.

ಬ್ರೊಕೊಲಿ
ಮರದಂತೆ ಕಾಣುವ ಈ ತರಕಾರಿ ಒಂದು ಸೂಪರ್ ಫುಡ್. ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಹೇಳಿ ಮಾಡಿಸಿದ್ದು. ಬ್ರೊಕೊಲಿಯು ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿದೆ.  ಅದರಲ್ಲಿರುವ ಸಲ್ಫೊರಾಫೇನ್ ಎಂಬ ವಸ್ತುವು ಹೃದಯ ನಾಳದ ಆರೋಗ್ಯ ಕಾಪಾಡುತ್ತದೆ.

ಟೊಮ್ಯಾಟೋ
ಹೃದಯರಕ್ತನಾಳದ ಆರೋಗ್ಯ ಕಾಪಾಡುವ ಆ್ಯಂಟಿ ಆಕ್ಸಿಡೆಂಟ್‌ ಲೈಕೋಪೀನ್ ಟೊಮೆಟೊಗಳಲ್ಲಿ ಹೇರಳವಾಗಿದೆ. ಅವು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
 

ಆವಕಾಡೊ
ಮೊನೊಸಾಚುರೇಟೆಡ್ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆವಕಾಡೊಗಳು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳಾಗಿವೆ. ಹೆಚ್ಚುವರಿಯಾಗಿ, ಪೊಟ್ಯಾಸಿಯಮ್ ಇದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರುಚಿಯಲ್ಲೂ ಎತ್ತಿದ ಕೈ ಎನಿಸಿರುವ ಬೆಣ್ಣೆ ಹಣ್ಣನ್ನು ಹೆಚ್ಚು ಸೇವಿಸಲು ಹಿಂದೆ ಬೀಳಬೇಡಿ.

ದೊಣ್ಣೆ ಮೆಣಸು
ಬೆಲ್ ಪೆಪರ್‌ನಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಎ ಎರಡೂ ಅಧಿಕವಾಗಿದೆ. ಈ ಪೋಷಕಾಂಶಗಳು ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆಯಾಗಿ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ.

മദ്യം

ಬರೀ ತರಕಾರಿ ತಿಂದರೆ ಸಾಕೇ?
ಖಂಡಿತಾ ಇಲ್ಲ. ಈ ಎಲ್ಲ ತರಕಾರಿಗಳು ಹೃದಯ ಆರೋಗ್ಯ ಕಾಪಾಡುವುದು ಹೌದು. ಜೊತೆಗೆ, ಹೃದಯವನ್ನು ಹೆಚ್ಚು ಆರೋಗ್ಯಕರವಾಗಿಟ್ಟುಕೊಳ್ಳಲು ಆಲ್ಕೋಹಾಲ್ ಸೇವನೆಯಿಂದ ದೂರವಿರಿ. ತಂಬಾಕು, ಸಿಗರೇಟ್‌ನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬೇಡಿ. ಇನ್ನು ಒತ್ತಡ ನಿರ್ವಹಣೆಗಾಗಿ ಪ್ರಾಣಾಯಾಮ, ಧ್ಯಾನ ಕಲೆ ಕಲಿಯಿರಿ. ವ್ಯಾಯಾಮವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. 

click me!