ಜಗತ್ತಿನಲ್ಲಿ ವಿವಿಧ ರೀತಿಯ ಸ್ಪರ್ಧೆಗಳು (competition) ನಡೆಯುತ್ತಿರುತ್ತದೆ, ಅದರ ಬಗ್ಗೆ ನೀವು ಕೇಳಿರಬಹುದು. ಎಲ್ಲೋ ಹೆಚ್ಚು ನಿದ್ರೆ ಮಾಡುವ ಸ್ಪರ್ಧೆ ಇದೆ, ಎಲ್ಲೋ ಕಡಿಮೆ ಸಮಯದಲ್ಲಿ ಹೆಚ್ಚು ಹೆಚ್ಚು ಆಹಾರ ತಿನ್ನುವ ಸ್ಪರ್ಧೆ ಇದೆ. ಅಷ್ಟೇ ಯಾಕೆ ಹೂಸು ಬಿಡುವ ಸ್ಪರ್ಧೆ ಕೂಡ ನಡೆಯುತ್ತದೆ. ಈ ಸ್ಪರ್ಧೆಯಲ್ಲಿ ಗೆದ್ದರೆ ಬಹುಮಾನ ಸಹ ನೀಡಲಾಗುತ್ತದೆ.
ನಾವು ಇಂದು ನಿಮಗೆ ಹೇಳಲಿರುವ ಸ್ಪರ್ಧೆಯಲ್ಲಿ, ಕೇವಲ ಒಂದು ವಿಷಯ ಮಾತ್ರ ಬಿಡಲು ಹೇಳಲಾಗಿದೆ, ಒಂದು ವೇಳೆ ನೀವು ಈ ಸ್ಪರ್ಧೆಯಲ್ಲಿ ಗೆದ್ದರೆ, ಲಕ್ಷಾಂತರ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಅಷ್ಟಕ್ಕೂ ಈ ಸ್ಪರ್ಧೆಯೇನು? ಯಾವುದನ್ನು ಬಿಟ್ಟರೆ ಹಣ ಬಹುಮಾನವಾಗಿ (prize) ಸಿಗುತ್ತೆ ನೋಡೋಣ.
ಮೊಸರು ಕಂಪನಿಯು ಸ್ಪರ್ಧೆಯನ್ನು ಆಯೋಜಿಸುತ್ತಿದೆ, ಇದರಲ್ಲಿ ಸ್ಪರ್ಧಿ ಒಂದು ತಿಂಗಳ ಕಾಲ ತನ್ನ ಮೊಬೈಲ್ ಫೋನ್‌ನಿಂದ ಸಂಪೂರ್ಣವಾಗಿ ದೂರವಿರಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ ಆತನಿಗೆ 8 ಲಕ್ಷ ರೂ.ಗಳ ಬಹುಮಾನ ನೀಡಲಾಗುವುದು. ಸ್ಪರ್ಧೆಯನ್ನು ಆಯೋಜಿಸುತ್ತಿರುವ ಬ್ರಾಂಡ್ ಅನ್ನು ಸಿಗ್ಗಿ ಎಂದು ಹೆಸರಿಸಲಾಗಿದೆ, ಇದು ಐಸ್ಲ್ಯಾಂಡ್ ಮೊಸರು ಬ್ರಾಂಡ್ (Curd brand of Iceland) ಆಗಿದೆ.
ಮೊಬೈಲ್ ಬಿಟ್ಟುಬಿಡಿ, 8 ಲಕ್ಷ ಬಹುಮಾನ ಪಡೆಯಿರಿ
ಸಿಗ್ಗಿ ಎಂಬ ಮೊಸರು ಬ್ರಾಂಡ್ ನ ಈ ಸ್ಪರ್ಧೆಯ ಹೆಸರು 'ಡಿಜಿಟಲ್ ಡಿಟಾಕ್ಸ್ ಪ್ರೋಗ್ರಾಂ' (Digital detox programme). ಈ ಸ್ಪರ್ಧೆಯಲ್ಲಿ ಒಂದು ತಿಂಗಳ ಕಾಲ ನಿಮ್ಮ ಮೊಬೈಲ್ ಫೋನ್ ನಿಂದ ಸಂಪೂರ್ಣವಾಗಿ ದೂರವಿರಬೇಕಾಗುತ್ತದೆ. ಈ ಸ್ಪರ್ಧೆಯು 'ಡ್ರೈ ಜನವರಿ' ಸ್ಪರ್ಧೆಯಿಂದ ಸ್ಫೂರ್ತಿ ಪಡೆದಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಜನರು ತಮ್ಮ ಸ್ಮಾರ್ಟ್ ಫೋನ್‌ಗಳನ್ನು ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿಡಬೇಕಾಗುತ್ತದೆ ಮತ್ತು ಮುಂದಿನ ಒಂದು ತಿಂಗಳವರೆಗೆ ಅದನ್ನು ಬಳಸಬಾರದು. ಇದನ್ನು ಮಾಡಬಲ್ಲ ಸ್ಪರ್ಧಿಗಳಿಂದ 10 ಅದೃಷ್ಟಶಾಲಿ ವಿಜೇತರನ್ನು (lucky winner) ಆಯ್ಕೆ ಮಾಡಲಾಗುತ್ತದೆ, ಅವರಲ್ಲಿ ಒಬ್ಬರಿಗೆ ಬಹುಮಾನ ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಗೆದ್ದವರು ಈ ಬಹುಮಾನ ಪಡೆಯುತ್ತಾರೆ
ವಿಜೇತರಿಗೆ 10,000 ಡಾಲರ್ (8.5 ಲಕ್ಷ ರೂ.), ತುರ್ತು ಪರಿಸ್ಥಿತಿಗಾಗಿ ಪ್ರಿಪೇಯ್ಡ್ ಸಿಮ್ ಕಾರ್ಡ್ ಹೊಂದಿರುವ ರೆಟ್ರೋ ಫ್ಲಿಪ್ ಫೋನ್ ಮತ್ತು ಮೂರು ತಿಂಗಳವರೆಗೆ ಉಚಿತ ಸಿಗ್ಗಿ ಮೊಸರು ನೀಡಲಾಗುವುದು.
ಈ ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31, ಇದರ ಮಾಹಿತಿಯನ್ನು ಸಿಗ್ಗಿಯ ವೆಬ್ಸೈಟ್ನಲ್ಲಿ (siggi website) ನೀಡಲಾಗಿದೆ. ಡಿಜಿಟಲ್ ವಿರಾಮಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲ, ಉತ್ತಮ ಫಲಿತಾಂಶವನ್ನು ಸಹ ನೀಡುತ್ತದೆ.