ಇತ್ತೀಚಿನ ದಿನಗಳಲ್ಲಿ ನೀವು ಲ್ಯಾಪ್ ಟಾಪ್ ಮತ್ತು ಮೊಬೈಲ್ ನಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತೀರಿ. ಯಾರಿಗಾದರೂ ಹಣವನ್ನು ವರ್ಗಾಯಿಸಬೇಕು ಅಥವಾ ಆನ್ ಲೈನ್ ನಲ್ಲಿ ಯಾರೊಂದಿಗಾದರೂ ಮಾತನಾಡಬೇಕು ಅಂದ್ರೂ ಫೋನ್, ಲ್ಯಾಪ್ ಟಾಪ್ ಬೇಕೇ ಬೇಕು. ಇದು ಮಾತ್ರವಲ್ಲ, ಉದ್ಯೋಗ ಸಂದರ್ಶನದಿಂದ ಹಿಡಿದು, ಫಿಲಂ ನೋಡೋಕೂ ಲ್ಯಾಪ್ ಟಾಪ್ (laptop)ಇಲ್ಲದೇ ಕೆಲಸವೆ ಇಲ್ಲ. ಆದರೆ ಇದು ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?
ಕಾಳಜಿ ವಹಿಸದೆ ಲ್ಯಾಪ್ ಟಾಪ್ ಬಳಸುವುದು ಪುರುಷರಿಗೆ ತುಂಬಾ ಅಪಾಯಕಾರಿ ಅನ್ನೋದು ತಿಳಿದು ಬಂದಿದೆ. ಇದು ಒಲಿಗೋಸ್ಪರ್ಮಿಯಾಗೆ ಕಾರಣವಾಗಬಹುದು, ಅಂದ್ರೆ ಇದು ವಿವಾಹಿತ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ. ಪುರುಷರ ಬಂಜೆತನದ (infertility in men) ಸಮಸ್ಯೆ ಬಗ್ಗೆ ಚರ್ಚೆಯಾಗೋದೆ ಕಡಿಮೆ. ಹೆಚ್ಚಾಗಿ ಜನರು ಹೆಂಗಸರಿಗೆ ಮಾತ್ರ ಬಂಜೆತನ ಸಮಸ್ಯೆ ಕಾಡುತ್ತೆ ಎಂದು ಅಂದುಕೊಳ್ಳುತ್ತಾರೆ. ಆದರೆ ಪುರುಷರಿಗೂ ಹಲವು ಕಾರಣಗಳಿಂದ ಬಂಜೆತನ ಕಾಡುತ್ತದೆ.
ಭಾರತೀಯ ದಂಪತಿಗಳಲ್ಲಿ ಬಂಜೆತನದ ಅಂಕಿಅಂಶಗಳು
ಭಾರತದಲ್ಲಿ ಸುಮಾರು 15% ವಿವಾಹಿತ ದಂಪತಿಗಳು (married couples) ಬಂಜೆತನದ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ಐಸಿಎಂಆರ್ ಅಧ್ಯಯನದಲ್ಲಿ ತಿಳಿಸಲಾಗಿದೆ. ಈ ಪ್ರಕರಣಗಳಲ್ಲಿ ಮೂರನೇ ಒಂದು ಭಾಗವು ಪುರುಷ ಬಂಜೆತನದಿಂದ ಉಂಟಾಗುತ್ತದೆ. ಇದಕ್ಕೆ ಒಲಿಗೋಸ್ಪರ್ಮಿಯಾ ಕಾರಣವಾಗಿದೆ, ಇದರಲ್ಲಿ ವೀರ್ಯಾಣುಗಳ ಸಾಂದ್ರತೆಯು ಕಡಿಮೆಯಾಗುತ್ತದೆ. ಈ ಸಮಸ್ಯೆಯು ಸೌಮ್ಯ, ಮಧ್ಯಮ ಮತ್ತು ತೀವ್ರವಾಗಿರಬಹುದು.
ಲ್ಯಾಪ್ ಟಾಪ್ ಗಳ ಅತಿಯಾದ ಬಳಕೆ ಅಪಾಯಕಾರಿ
ಪುರುಷರ ಈ ಸಮಸ್ಯೆಯ ಹಿಂದಿನ ಕಾರಣವೆಂದರೆ ಲ್ಯಾಪ್ಟಾಪ್ಗಳನ್ನು ಬಳಸುವುದು. ವೈದ್ಯರ ಪ್ರಕಾರ, ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ಗಳಂತಹ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯು ವೃಷಣಗಳ ಕಾರ್ಯನಿರ್ವಹಣೆಯನ್ನು ಹಾಳುಮಾಡುತ್ತದೆ. ಈ ಕಾರಣದಿಂದಾಗಿ, ಟೆಸ್ಟೋಸ್ಟೆರಾನ್ (testosterone) ಮತ್ತು ವೀರ್ಯಾಣು ಉತ್ಪಾದನೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಒಲಿಗೋಸ್ಪರ್ಮಿಯಾದ (oligospermia)ಲಕ್ಷಣಗಳು
ಒಲಿಗೋಸ್ಪರ್ಮಿಯಾಗೆ ಯಾವುದೇ ಸ್ಪಷ್ಟವಾದ ಬಾಹ್ಯ ರೋಗಲಕ್ಷಣಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ, ಆದರೂ ಈ ಸ್ಥಿತಿ ಸಂಭವಿಸುವ ಸಾಧ್ಯತೆಯನ್ನು ಸೂಚಿಸುವ ಕೆಲವು ಚಿಹ್ನೆಗಳಿವೆ.
ಸ್ಖಲನದ ಸಮಯದಲ್ಲಿ ಕಡಿಮೆ ಪ್ರಮಾಣದ ವೀರ್ಯ
ವೀರ್ಯದ ನೀರಿನ ಸ್ಥಿರತೆ
ವೃಷಣ ಪ್ರದೇಶದಲ್ಲಿ ನೋವು ಅಥವಾ ಊತ
ಆಗಾಗ್ಗೆ ಉಸಿರಾಟದ ಸೋಂಕುಗಳು
ಪುರುಷರಲ್ಲಿ ಸ್ತನ ಅಂಗಾಂಶದ ಹಿಗ್ಗುವಿಕೆ (ಗೈನೆಕೊಮಾಸ್ಟಿಯಾ)
ಯಾವೆಲ್ಲಾ ಕಾರಣದಿಂದಾಗಿ ಒಲಿಗೋಸ್ಪರ್ಮಿಯಾ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ?
ವೇರಿಕೋಸೆಲೆ
ಹಾರ್ಮೋನುಗಳ ಅಸಮತೋಲನ
ಅತಿಯಾದ ಧೂಮಪಾನ
ಮದ್ಯಪಾನ ಮಾಡೋದರಿಂದ
ಮಾದಕದ್ರವ್ಯಗಳ ಸೇವನೆ ಮತ್ತು ಬೊಜ್ಜು
ಹಿಂದಿನ ವೈದ್ಯಕೀಯ ಸಮಸ್ಯೆಗಳು
ಶಸ್ತ್ರಚಿಕಿತ್ಸೆ ಅಥವಾ ಸೋಂಕು
ಈ ಸಮಸ್ಯೆ ನಿವಾರಿಸಲು ಯಾವೆಲ್ಲಾ ಚಿಕಿತ್ಸೆ ಪಡೆಯಬಹುದು?
ಹಾರ್ಮೋನು ಚಿಕಿತ್ಸೆ
ವೆರಿಕೊಸೆಲ್ ದುರಸ್ತಿ ಶಸ್ತ್ರಚಿಕಿತ್ಸೆ
ವೀರ್ಯ ಮರುಪಡೆಯುವಿಕೆ ತಂತ್ರ
ಆರೋಗ್ಯಕರ ಜೀವನಶೈಲಿ ಅಭ್ಯಾಸ
ಐಯುಐ (IUI)
ಐವಿಎಫ್ (IVF)